ಜಮ್ಮು, ಜು ೧೩- ಪಿಡಿಪಿಯನ್ನು ಒಡೆಯಲು ಯತ್ನಿಸಬೇಡಿ .ಹಾಗೇನಾದರು ಮಾಡಿದರೆ 1987 ರ ಪರಿಸ್ಥಿತಿ ಎದುರಿಸಬೇಗುತ್ತದೆ ಎಂದು ಜಮ್ಮ ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಫ್ತಿ ಪಿಡಿಪಿಯನ್ನು ಒಡೆದರೆ ಯಾಸಿನ್ ಮಲೀಕ್ ಮತ್ತು ಸಯ್ಯದ್ ಸಲಾಲುದ್ದೀನ್ ಅವರಂತಹ ಪ್ರತ್ಯೇಕವಾದಿಗಳ ಜನ್ಮಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ.ಮೆಹಬೂಬಾ ಮುಫ್ತಿ ತನ್ನ ಹೇಳಿಕೆ ವೇಳೆ ಬಿಜೆಪಿ ಹೆಸರನ್ನು ಹೇಳಿಲ್ಲ, ಆದರೆ ದೆಹಲಿ ಎಂದು ಹೇಳಿ ಪರೋಕ್ಷವಾಗಿ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಪಿಡಿಪಿಯೊಂದಿಗೆ ಮೈತ್ರಿ ಕಳೆದುಕೊಂಡಿದ್ದು, ಇದೀಗ ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತವಿದೆ. ಬಿಜೆಪಿ ಪಿಡಿಪಿ ಬಂಡುಕೋರ ಮತ್ತು ಪಕ್ಷೇತರ ಶಾಸಕರೊಂದಿಗೆ ಸರ್ಕಾರ ರಚಿಸಲು ಯತ್ನಿಸುತ್ತಿದೆ ಎಂಬ ಸುದ್ದಿಗಳ ಬಳಿಕ ಮೆಹಬೂಬಾ ಈ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಪಿಡಿಪಿ- ಬಿಜೆಪಿ ಮೈತ್ರಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಅಲ್ಲಿನ ಮುಖ್ಯಮಂತ್ರಿ ಸ್ಥಾನಕ್ಕೆ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಿದ್ದರು.
ಅಧಿಕಾರ ಅನುಭವಿಸಿ ನಂತರ ಕಾಶ್ಮೀರದಲ್ಲಿ ಗಲಭೆ ಸೃಷ್ಟಿ ಮಾಡಿ ಅಮಾಯಕ ಜನರ ಮಾರಣಹೋಮ ನಡೆಸಿ ಈಗ ಕಿತ್ತಾಟ ಮಾಡಿ ನಾಟಕ ಮಾಡುತ್ತಿದ್ದಾರೆ. ತೂ ನಿಮ್ಮ ಜನ್ಮಕ್ಕೆ..