ಹೊಸದಿಲ್ಲಿ: ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಲು ಮುಂದಾಗಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿರ್ಧಾರವನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್ ಈ ಬಗ್ಗೆ ಎರಡು ವಾರಗಳಲ್ಲಿ ಸೂಕ್ತ ಉತ್ತರ ನೀಡುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಮತ್ತು ನ್ಯಾಯಾಧೀಶ ಎ. ಎಂ. ಖಾನ್‌ವಿಲ್ಕರ್ ಹಾಗು ನ್ಯಾಯಾಧೀಶ ಡಿ. ವೈ. ಚಂದ್ರಚೂಡ ಅವರು ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೋತ್ರಾ ಅವರ ಅರ್ಜಿಯ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದ್ದು, ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ಅವರ ಸಹಕಾರ ಕೋರಿದ್ದಾರೆ.
ಜನರ ವಾಟ್ಸಾಪ್ ಸಂದೇಶಗಳನ್ನು ಸರಕಾರ ಪರಿಶೀಲಿಸಬಯಸಿದೆ. ಇದೊಂದು ರೀತಿಯಲ್ಲಿ ಬೇಹುಗಾರಿಕೆ ಮಾಡಿದಂತೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಮೋತ್ರಾ ಪರ ಹಿರಿಯ ನ್ಯಾಯವಾದಿ ಎ. ಎಂ. ಸಿಂಘ್ವಿ ಸರಕಾರ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು, ಟೆಂಡರ್ ಕರೆದಿದೆ. ಆಗಸ್ಟ್ 20ರಂದು ಟೆಂಡರ್ ತೆರೆಯಲಿದೆ ಎಂದಿದ್ದಾರೆ.