ದುಬೈ: ರಕ್ತದೊತ್ತಡ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಗೆ ಉಪಯೋಗಿಸುವ ಕೆಲವು ಔಷಧಿಗಳನ್ನು ಹಿಂತೆಗೆದುಕೊಳ್ಳಲು ಯುಎಇಯ ಆರೋಗ್ಯ ಮತ್ತು ರಕ್ಷಣಾ ಇಲಾಖೆಯು ಆದೇಶ ನೀಡಿದೆ.
ಚೀನಾದ ಕೆಲವು ರಾಸಾಯನಿಕ ವಸ್ತುಗಳು ಬಳಸಲಾದ ಔಷಧಿಗಳನ್ನು ಹಿಂಪಡೆಯಲಾಗಿದೆ. ಯುರೋಪಿಯನ್ ಮೆಡಿಸಿನ್ ಏಜೆನ್ಸಿಯ ವರದಿಯ ಆಧಾರದ ಮೇಲೆ ಔಷಧಿಗಳನ್ನು ಹಿಂತೆಗೆದುಕೊಳ್ಳಲು ಸಚಿವಾಲಯ ನಿರ್ಧರಿಸಿದೆ.
ಕ್ಯಾನ್ಸರ್ ಗೆ ಕಾರಣವಾಗುವ ರಾಸಾಯನಿಕದಿಂದ ತಯಾರಿಸಲಾದ ಸೆಜಿಯಾಂಗ್ ಹುವಾಯ್ ಫಾರ್ಮಾಸ್ಯುಟಿಕಲ್ ಕಂಪನಿಯ ಔಷಧಿಗಳನ್ನು ಹಿಂತೆಗೆದುಕೊಳ್ಳಲಾಗಿದೆ. ದೇಶಾದ್ಯಂತ ಆಸ್ಪತ್ರೆಗಳು, ಔಷಧಾಲಯಗಳು ಮತ್ತು ಇತರ ಆರೋಗ್ಯ ಸಂಸ್ಥೆಗಳಿಗೆ ಈ ಪ್ರಕಟಣೆಯನ್ನು ನೀಡಲಾಗಿದೆ. ಔಷಧಿಗಳನ್ನು ವೈದ್ಯರ ಸೂಚನೆಗಳ ಮೇರೆಗೆ ಮಾತ್ರ ಪಡೆಯುವಂತೆ ಸಚಿವಾಲಯ ರೂಗಿಗಳಿಗೂ ಸೂಚಿಸಿದೆ.