janadhvani

Kannada Online News Paper

ಎಪ್ರಿಲ್ 12: ಮಾದರಿ ಮದುವೆ ಅಭಿಯಾನ ಸಮಾರೋಪದ ಪ್ರಚಾರಾರ್ಥ ಸಾಂಘಿಕ ನಾಯಕರ ಸಭೆ

ಎಸ್.ವೈ.ಎಸ್ ವತಿಯಿಂದ ರಾಜ್ಯ ವ್ಯಾಪಿ ನಡೆಯುತ್ತಿರುವ ಮಾದರಿ ಮದುವೆ ಜನ ಜಾಗೃತಿ ಆಂದೋಲನದ ಸಮಾರೊಪ ಸಮಾರಂಭ ಮೇ 2 ಶನಿವಾರ ಪುತ್ತೂರಿನಲ್ಲಿ ನಡೆಯಲಿದೆ.ಈ ಕಾರ್ಯಕ್ರಮದ ಪ್ರಚಾರ ಸಭೆಯು ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ರವರ ಅಧ್ಯಕ್ಷತೆಯಲ್ಲಿ ಎಪ್ರಿಲ್ 12 ಆದಿತ್ಯವಾರ ಮದ್ಯಾಹ್ನ 2:00 ಗಂಟೆಗೆ ಅಲ್-ಹಸನ್ ಅಕಾಡಮಿ ಅಡ್ಯಾರ್ ನಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ರಾಜ್ಯ ನಾಯಕರು, ಎಸ್.ಜೆ.ಯು,ಕರ್ನಾಟಕ ಮುಸ್ಲಿಂ ಜಮಾಅತ್ ,ಎಸ್.ಜೆ.ಎಂ ,ಎಸ್.ಎಮ್.ಎ,ಎಸ್ಸೆಸ್ಸೆಫ್,ಎಸ್.ವೈ.ಎಸ್ ಸಂಘಟನೆಗಳ ಜಿಲ್ಲಾ ಕಾರ್ಯಕಾರಿ ಸದಸ್ಯರು ಹಾಗೂ ಎಸ್.ವೈ.ಎಸ್ ಝೋನ್ ಕ್ಯಾಬಿನೆಟ್ ನಾಯಕರು ಮತ್ತು ಸರ್ಕಲ್ ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಎಸ್.ವೈ.ಎಸ್ ದ‌ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿರಿ...