ಮನಾಮ: ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಬಹ್ರೇನ್ ವೈಮಾನಿಕ ಮಾರ್ಗವನ್ನು (Airspace) ಪುನಃ ತೆರೆಯಲಾಗುವುದು ಎಂದು ಸಾರಿಗೆ ಮತ್ತು ದೂರಸಂಪರ್ಕ ಸಚಿವಾಲಯದ ನಾಗರಿಕ ವಿಮಾನಯಾನ ವ್ಯವಹಾರಗಳ ಇಲಾಖೆ ಘೋಷಿಸಿದೆ. ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದ ಬಹ್ರೇನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ಇನ್ನು ಮುಂದೆ ಸಹಜ ಸ್ಥಿತಿಗೆ ಮರಳಲಿದ್ದು, ವಿಮಾನ ಸೇವೆಗಳು ಪುನಾರಂಭಗೊಳ್ಳಲಿವೆ.
ಅನಿವಾಸಿಗಳಿಗೆ ಭಾರಿ ಸಮಾಧಾನ
ವಿಮಾನ ನಿಲ್ದಾಣ ಬಂದ್ ಆಗಿದ್ದರಿಂದ ತುರ್ತಾಗಿ ಊರಿಗೆ ಮರಳಬೇಕಿದ್ದ ಮತ್ತು ಕೆಲಸಕ್ಕೆ ಹಾಜರಾಗಬೇಕಿದ್ದ ಅನಿವಾಸಿ ಭಾರತೀಯರು ಸೇರಿದಂತೆ ಅನೇಕ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ನೇರ ವಿಮಾನ ಸೌಲಭ್ಯವಿಲ್ಲದ ಕಾರಣ ಸೌದಿ ಅರೇಬಿಯಾದ ದಮ್ಮಾಮ್ ಮೂಲಕ ದುಬಾರಿ ದರ ನೀಡಿ ಪ್ರಯಾಣಿಸಬೇಕಾದ ಅನಿವಾರ್ಯತೆ ಇತ್ತು. ಇದೀಗ ವಿಮಾನಯಾನ ಪುನಾರಂಭಗೊಳ್ಳುತ್ತಿರುವುದು ವಲಸಿಗರಿಗೆ ದೊಡ್ಡ ಮಟ್ಟದ ನಿರಾಳತೆ ತಂದಿದೆ.
ಸುರಕ್ಷತೆಗೆ ಆದ್ಯತೆ
ವೈಮಾನಿಕ ಸಂಚಾರದ ವೇಳಾಪಟ್ಟಿಯ ಬಗ್ಗೆ ನಾಗರಿಕ ವಿಮಾನಯಾನ ಪ್ರಾಧಿಕಾರವು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸಲಿದೆ. ಈ ಕುರಿತು ಮಾಹಿತಿ ನೀಡಿರುವ ವಿಭಾಗವು,
“ಪ್ರಯಾಣಿಕರ ಸುರಕ್ಷತೆ ನಮಗೆ ಮುಖ್ಯ. ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಅತ್ಯುನ್ನತ ಭದ್ರತಾ ಮಾನದಂಡಗಳೊಂದಿಗೆ ಸುಗಮ ವೈಮಾನಿಕ ಸೇವೆಯನ್ನು ನೀಡಲು ನಾವು ಬದ್ಧರಾಗಿದ್ದೇವೆ,” ಎಂದು ತಿಳಿಸಿದೆ.
ಬಹ್ರೇನ್ ವಿಮಾನ ನಿಲ್ದಾಣವು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಜ್ಜಾಗಿದ್ದು, ಶೀಘ್ರದಲ್ಲೇ ಆಗಸದಲ್ಲಿ ವಿಮಾನಗಳ ಹಾರಾಟ ಶುರುವಾಗಲಿದೆ.















ಇನ್ನಷ್ಟು ಸುದ್ದಿಗಳು
ದಾಳಿಯ ಭೀತಿ: ಸೌದಿ-ಬಹ್ರೇನ್ ‘ಕಾಸ್ವೇ’ ಬಂದ್- ಸಂಚಾರ ಸಂಪೂರ್ಣ ಸ್ಥಗಿತ
ಸೌದಿ ಅರೇಬಿಯಾ: ಇನ್ನೂ 69 ಹುದ್ದೆಗಳಲ್ಲಿ ಶೇ.100 ಸ್ವದೇಶೀಕರಣ ಜಾರಿ
ಸೌದಿ: ನಾಳೆಯಿಂದ ಭಾರಿ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಎಚ್ಚರಿಕೆ
ಇರಾನ್ ದಾಳಿ; ವಿಶ್ವದ ಅತಿದೊಡ್ಡ ‘ಎಮಿರೇಟ್ಸ್ ಗ್ಲೋಬಲ್ ಅಲ್ಯೂಮಿನಿಯಂ’ ಕಾರ್ಯಾಚರಣೆ ಸ್ಥಗಿತ
ಹಜ್-ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಪವಿತ್ರ ಮಕ್ಕಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣ
ಚಾಲನೆ ವೇಳೆ ತಿಂಡಿ ಮತ್ತು ಮೇಕಪ್ಗೆ ಬ್ರೇಕ್- ಸೌದಿ ಸಂಚಾರಿ ವಿಭಾಗದ ಕಟ್ಟುನಿಟ್ಟಿನ ಸೂಚನೆ
ಯುದ್ಧದ ಸನ್ನಿವೇಶದಲ್ಲಿ ಸುಲಿಗೆ: ಸೌದಿ ಪ್ರವಾಸಿಗರನ್ನು ಲೂಟಿ ಮಾಡುತ್ತಿರುವ ವಿಮಾನಯಾನ ಸಂಸ್ಥೆಗಳು
ಕುವೈತ್ ವಿದ್ಯುತ್ ಸ್ಥಾವರದ ಮೇಲೆ ಇರಾನ್ ದಾಳಿ: ಭಾರತೀಯ ಉದ್ಯೋಗಿ ಮೃತ್ಯು
ಅಬುಧಾಬಿ: ಕ್ಷಿಪಣಿ ಅವಶೇಷಗಳು ಬಿದ್ದು ಅಗ್ನಿ ಅವಘಡ- ಐವರು ಭಾರತೀಯರು ಸೇರಿ ಆರು ಮಂದಿಗೆ ಗಾಯ
ಶಾರ್ಜಾ: ಕಫೆಟೇರಿಯಾ ಸಿಬ್ಬಂದಿಗಳ ಮಧ್ಯೆ ಗಲಾಟೆ- ಚಾಕುವಿನಿಂದ ಇರಿದು ಸಹೋದ್ಯೋಗಿಯ ಹತ್ಯೆ