janadhvani

Kannada Online News Paper

ಪವಿತ್ರ ರಂಝಾನ್: ಯುಎಇಯಲ್ಲಿ 4,700 ಕ್ಕೂ ಹೆಚ್ಚು ಕೈದಿಗಳಿಗೆ ಬಿಡುಗಡೆ ಭಾಗ್ಯ

ಯುಎಇ ಅಧ್ಯಕ್ಷರು ಮತ್ತು ವಿವಿಧ ಎಮಿರೇಟ್‌ಗಳ ಆಡಳಿತಗಾರರು ಈ ಸಂಬಂಧ ಆದೇಶ ಹೊರಡಿಸಿದ್ದಾರೆ.

ದುಬೈ: ರಮದಾನ್ ಮಾಸದ ಅಂಗವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರವು 4,700ಕ್ಕೂ ಹೆಚ್ಚು ಕೈದಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಯುಎಇ ಅಧ್ಯಕ್ಷರು ಮತ್ತು ವಿವಿಧ ಎಮಿರೇಟ್‌ಗಳ ಆಡಳಿತಗಾರರು ಈ ಸಂಬಂಧ ಆದೇಶ ಹೊರಡಿಸಿದ್ದಾರೆ.

ಕ್ಷಮೆಯ ಈ ಪವಿತ್ರ ಮಾಸದಲ್ಲಿ, ಒಟ್ಟು 4,700ಕ್ಕೂ ಹೆಚ್ಚು ಕೈದಿಗಳು ಜೈಲಿನಿಂದ ಬಿಡುಗಡೆ ಹೊಂದಿ ಹೊಸ ಜೀವನವನ್ನು ಆರಂಭಿಸಲಿದ್ದಾರೆ.

ಎಮಿರೇಟ್‌ವಾರು ಬಿಡುಗಡೆಗೊಳ್ಳುವ ಕೈದಿಗಳ ವಿವರ:

  • ಯುಎಇ ಅಧ್ಯಕ್ಷರು: ಅಧ್ಯಕ್ಷ ಶೈಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಅಬುಧಾಬಿಯ ಜೈಲುಗಳಲ್ಲಿದ್ದ 1,440 ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದು, ಕೈದಿಗಳು ಮತ್ತು ಅವರ ಕುಟುಂಬಗಳಿಗೆ ಶುಭ ಹಾರೈಸಿದ್ದಾರೆ.
  • ದುಬೈ: ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಅವರು ವಿವಿಧ ರಾಷ್ಟ್ರಗಳಿಗೆ ಸೇರಿದ 1,856 ಕೈದಿಗಳ ಬಿಡುಗಡೆಗೆ ಆದೇಶಿಸಿದ್ದಾರೆ.
  • ಶಾರ್ಜಾ: ಶಾರ್ಜಾ ಆಡಳಿತಗಾರ ಡಾ. ಶೈಖ್ ಸುಲ್ತಾನ್ ಬಿನ್ ಮುಹಮ್ಮದ್ ಆಲ್ ಖಾಸಿಮಿ ಅವರು 738 ಜನರಿಗೆ ಜೈಲು ಮುಕ್ತಿ ನೀಡಿದ್ದಾರೆ.
  • ರಾಸಲ್ ಖೈಮಾ: ಇಲ್ಲಿನ ಆಡಳಿತಗಾರ ಶೈಖ್ ಸೌದ್ ಬಿನ್ ಸಕರ್ ಅಲ್ ಖಾಸಿಮಿ ಅವರು 407 ಕೈದಿಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.
  • ಅಜ್ಮಾನ್: ಅಜ್ಮಾನ್ ಆಡಳಿತಗಾರ ಶೈಖ್ ಹುಮೈದ್ ಬಿನ್ ರಶೀದ್ ಅಲ್ ನುಐಮಿ ಅವರು 134 ಕೈದಿಗಳ ಬಿಡುಗಡೆಗೆ ಆದೇಶ ನೀಡಿದ್ದಾರೆ.
  • ಫುಜೈರಾ: ಫುಜೈರಾ ಆಡಳಿತಗಾರ ಶೈಖ್ ಹಮದ್ ಬಿನ್ ಮುಹಮ್ಮದ್ ಅಲ್ ಶರ್ಕಿ ಅವರ ಆದೇಶದಂತೆ ಈ ರಮದಾನ್‌ನಲ್ಲಿ 125 ಕೈದಿಗಳು ಬಿಡುಗಡೆಯಾಗಲಿದ್ದಾರೆ.