ರಿಯಾದ್: ಇಂದು (ಫೆ.17) ರಂಜಾನ್ ತಿಂಗಳ ಚಂದ್ರದರ್ಶನವಾಗಿರುವ ಹಿನ್ನೆಲೆಯಲ್ಲಿ,1447 ರ ರಂಝಾನ್ ಇಂದು ರಾತ್ರಿ ಅಧಿಕೃತವಾಗಿ ಪ್ರಾರಂಭವಾಗಲಿದೆ ಎಂದು ಸೌದಿ ಅರೇಬಿಯಾದ ಚಂದ್ರನ ವೀಕ್ಷಣಾ ಸಮಿತಿ ಮಂಗಳವಾರ ಸಂಜೆ ಘೋಷಿಸಿದೆ. ನಾಳೆಯಿಂಧ ದೇಶದಾದ್ಯಂತ ವಿಶ್ವಾಸಿಗಳು ಉಪವಾಸ ಮತ್ತು ಪ್ರಾರ್ಥನೆಯಲ್ಲಿ ತಲ್ಲೀನರಾಗಲಿದ್ದಾರೆ.
ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ರಂಝಾನ್ ತಿಂಗಳ ಆರಂಭವನ್ನು ಶಅಬಾನ್ನ 29 ನೇ ದಿನದಂದು ರಾತ್ರಿ ಚಂದ್ರದರ್ಶನದ ಆಧಾರದಲ್ಲಿ ನಿರ್ಣಯಿಸಲಾಗುತ್ತದೆ. ಗಲ್ಫ್ ದೇಶಗಳಾದ ಒಮಾನ್ ಹೊರತುಪಡಿಸಿ, ಯುಎಇ, ಬಹ್ರೇನ್, ಕುವೈತ್, ಖತಾರ್ ನಲ್ಲೂ ಫೆ.18 ರಂದು ರಂಜಾನ್ ಆರಂಭವಾಗಲಿದೆ. ಒಮಾನ್‌ನಲ್ಲಿ ಫೆ.19 ರಂದು ರಂಝಾನ್ ಆರಂಭಗೊಳ್ಳಲಿದೆ.






