ವರದಿ : ನಾಸೀರ್ ಬೋವು
ತ್ವಾಇಫ್: ತಾಜುಲ್ ಫುಖಹಾ ಬೇಕಲ್ ಉಸ್ತಾದರು ನಾಮಕರಣ ಮಾಡಿ 2013 ಫೆಬ್ರವರಿ 15 ರಂದು ಸ್ಥಾಪನೆಗೊಂಡ ಗಲ್ಫ್ ಕನ್ನಡಿಗರ ಅಭಿಮಾನದ ಸಂಘಟನೆ: KCF ( ಕರ್ನಾಟಕ ಕಲ್ಚರಲ್ ಫೌಂಡೇಶನ್) ಗೆ ಇದೀಗ ಹದಿಮೂರ ಹರೆಯ.

ಸಾಧನೆಗಳ ಸರಣಿ
ಯುಎಇ, ಸೌದಿ, ಬಹರೈನ್, ಒಮಾನ್, ಕತಾರ್, ಕುವೈಟ್, ಇರಾಕ್, ಈಜಿಪ್ಟ್ , ಯುಕೆ, ಜಪಾನ್ ಹಾಗೂ ಮಲೇಶಿಯ ಸೇರಿ ಒಟ್ಟು ಹನ್ನೊಂದು ದೇಶಗಳಿಗೆ ಸಂಘಟನೆ ವಿಸ್ತಾರಗೊಂಡಿತು.
ಹದಿಮೂರು ವರ್ಷಗಳ ಹೃಸ್ವ ಕಾಲಾವಧಿಯಲ್ಲಿ 15 ಸಾವಿರ ಸದಸ್ಯರಿರುವ ಗಲ್ಫ್ ದೇಶದಲ್ಲೇ ಅತ್ಯಂತ ಬೃಹತ್ತಾದ ಕನ್ನಡಿಗರ ಸಂಘಟನೆಯೆನಿಸಿತು.
ಈ ನಿಟ್ಟಿನಲ್ಲಿ “ಸೇವೆ ನಮ್ಮ ಶಕ್ತಿ ಬದ್ಧತೆ ನಮ್ಮ ಗುರುತು” ಎಂಬ ದ್ಯೇಯದೊಂದಿಗೆ
KCF ತ್ವಾಇಫ್ ಸೆಕ್ಟರ್
ವತಿಯಿಂದ ಲೋಕಾನುಗ್ರಹಿ
ಮುಹಮ್ಮದ್ರಸೂಲುಲ್ಲಾಹಿ (ಸ ಅ)ರ ಪಾದಸ್ಪರ್ಶದಿಂದ ಅನುಗ್ರಹಿಸಲ್ಪಟ್ಟ ಪುಣ್ಯ ಭೂಮಿ ತ್ವಾಇಫ್ ನ, ರಈಸುಲ್ ಮುಫಸ್ಸಿರೀನ್ ಅಬ್ದುಲ್ಲಾ ಇಬ್ನು ಅಬ್ಬಾಸ್ (ರ ಅ )ರವರ ಮಕ್ಬರ ಝಿಯಾರತ್ ಮೂಲಕ “ಕೆಸಿಫ್ ಫೌಂಡೇಶನ್ ಡೇ” ಗೆ, ಚಾಲನೆ ನೀಡಲಾಯಿತು.
ಪ್ರಾರ್ಥನೆ ಅಶ್ರಫ್ ಸಖಾಫಿ ಕುಂಭಕ್ಕೋಡ್ ನೆರೆವೇರಿಸಿದರು. ಸಭಿಕರಿಗೆ ರಿಯಾಝ್ ಉಳ್ಳಾಲ ಸ್ವಾಗತಿಸಿದರು,
ಸಭೆಯನ್ನು ಸಲೀಮ್ ಪಲ್ಲಕುಡಲ್ ಉದ್ಘಾಟನೆ ಮಾಡಿದರು.
ನಂತರ ಅಧ್ಯಕ್ಷೀಯ ಭಾಷಣ ಮಾಡಿದ
ಅಬ್ದುಲ್ ರಝಾಕ್ ಕೊಡಂಗಾಯಿ
ಸಾಧನೆಯ ಹಾದಿಯಲ್ಲಿ ಉತ್ತಮವಾದ
ಕಾರ್ಯಾಚರಣೆಗಳೊಂದಿಗೆ ಮುನ್ನೇರುತ್ತಿರುವ
KCF ನ ಸಾಧನೆಗಳನ್ನು ವಿವರಿಸಿದರರು.
ಅಶ್ರಫ್ ಸಖಾಫಿ ಕುಂಭಕ್ಕೋಡ್ ಮಾತಾಡಿ
ಕೆಸಿಎಫ್ ನೊಂದಿಗಿರುವ ತಮ್ಮ ಆಳವಾದ ಸಂಬಂಧ
ಹಾಗೂ ಇದರಿಂದ ನಮಗೆ
ಅಲ್ಲಾಹುವಿನಿಂದ ದೊರೆಯುವ ಸತ್ಫಲಗಳ ಬಗ್ಗೆ
ಮಾರ್ಮಿಕವಾಗಿ ಪ್ರಸ್ತಾಪಿಸಿದರು.
ಅಯ್ಯೂಬ್ ಕುಂದಾಪುರ ಮತ್ತು ಸಿದ್ದೀಕ್ ಕನ್ಯಾರಕೋಡಿ ಶುಭ ಹಾರೈಸಿದರು,
ಕೊನೆಯಲ್ಲಿ ತೌಸೀಫ್ ಬೆಲ್ಮ ವಂದಿಸಿದರು.
ಅದೇ ರೀತಿ ನಾಯಕರ ಚುರುಕಿನ
ಕಾರ್ಯಾಚರಣೆಯಿಂದಾಗಿ ಹೆಚ್ಚಿನ ಸದಸ್ಯರನ್ನು
ಮತ್ತು ನಮ್ಮೊಂದಿಗೆ ವಿಶೇಷವಾಗಿ ಸಹಕರಿಸುವ
ಅಭಿಮಾನಿ ಹಿತೈಷಿಗಳನ್ನು ಭೇಟಿ ನೀಡಿ
ಸಿಹಿತಿಂಡಿ ವಿತರಿಸಿ, ಸಂಘಟನೆಯ ಅಭಿಪ್ರಾಯ,
ಅನಿಸಿಕೆ ಸಂಗ್ರಹಿಸಲಾಯಿತು.







