janadhvani

Kannada Online News Paper

ಕೆಸಿಎಫ್ ಯುಎಇ: ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

ದುಬೈ:ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ತನ್ನ ಐದು ಸಂವತ್ಸರಗಳನ್ನು ಪೂರೈಸಿದ ಸವಿನೆನಪಿನ ಸಂದರ್ಭದಲ್ಲಿ ಯುಎಇ ರಾಷ್ಟ್ರೀಯ ಸಮಿತಿ ಘೋಷಿಸಲಾಗಿದ್ದ ಐದು ಮಹತ್ತರವಾದ ಕಾರ್ಯಕ್ರಮಗಳಲ್ಲೊಂದಾದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧಿಕೃತ ಘೋಷಣೆಯನ್ನು ಕಳೆದ ಜೂನ್ 29 ರಂದು ಅಬುಧಾಬಿಯಲ್ಲಿ ಕೆಸಿಎಫ್ ರಾಷ್ಟ್ರೀಯ ನಾಯಕರು ಮತ್ತು ICF, RSC ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಿರ್ವಹಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮ ನಿರ್ದೇಶನ ಸಮಿತಿ ಅಧ್ಯಕ್ಷರಾದ ಜನಾಬ್ ಶೇಖ್ ಭಾವ ಮಂಗಳೂರುರವರು ಕಾರ್ಯಕ್ರಮವು ಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ಊರಿನಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಮದುವೆಯ ಸಂಪೂರ್ಣ ಖರ್ಚನ್ನು KCF ವಹಿಸುವುದರೊಂದಿಗೆ ವಧುವಿಗೆ ಐದು ಪವನ್ ಚಿನ್ನಾಭರಣ ಮತ್ತು ಜೋಡಿಗಳ ಮದುವೆ ವಸ್ತ್ರಗಳನ್ನೂ ನೀಡುವುದಾಗಿ ತಿಳಿಸಿದರು.ಕಾರ್ಯಕ್ರಮದ ಉದ್ಘಾಟನೆ ನಿರ್ವಹಿಸಿ ಮಾತನಾಡಿದ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲರವರು ಕೆ.ಸಿ.ಎಫ್ ಸಮಿತಿ ಘೋಷಿಸಲಾಗಿದ್ದ ಇನ್ನಿತರ ಯೋಜನೆಗಳಾದ ಐದು ಸ್ಥಳಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಐದು ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಐಎಎಸ್ ಅಥವಾ ಐಪಿಎಸ್ ನಂತಹ ನಾಗರಿಕಾ ಸೇವಾ ಪರೀಕ್ಷೆಗೆ ತರಬೇತಿಗೆ ಬೇಕಾಗುವ ಸಹಾಯ ಕಲ್ಪಿಸಿಕೊಡುವ ಯೋಜನೆ ಮತ್ತು ಯುಎಇಯಲ್ಲಿ ಕನ್ನಡಿಗರಿಗಾಗಿ ಬ್ರಹತ್ ಕೆಸಿಎಫ್ ಮದ್ರಸ ಎಂಬ ಪದ್ದತಿಗಳನ್ನು 2018ರಲ್ಲೇ ಪೂರೈಸಲು ಶ್ರಮಿಸುವುದಾಗಿ ತಿಳಿಸಿದರು.

ಪದ್ದತಿಗಳೊಂದಾದ ಕರ್ನಾಟಕ ಫ್ಯಾಮಿಲಿ ಫೆಸ್ಟ್- 2018 ಅದ್ದೂರಿಯಾಗಿ ಕಳೆದ ಮಾರ್ಚ್ 30 ರಂದು ಅಜ್ಮಾನಿನ ಗಲ್ಫ್ ಮೆಡಿಕಲ್ ಯುನಿವರ್ಸಿಟಿಮೈದಾನದಲ್ಲಿ ವಿವಿಧ ಸ್ಪರ್ಧೆಗಳ ಕಲರವದೊಂದಿಗೆ ಕಾರ್ಯಕರ್ತರನ್ನು ರಂಜಿಸಿದ್ದು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಾಕ್ಷಿಯಾಗಿತ್ತು ಎಂಬುದನ್ನು ನೆನಪಿಸಿಕೊಂಡರು

ಸಾಮೂಹಿಕ ವಿವಾಹದ ಅರ್ಜಿ ಪಡೆಯಲು ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧೀನದ ವಿವಿಧ ಘಟಕಗಳ ಸಾಂತ್ವನ ವಿಭಾಗ ಅಥವಾ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿಯವರನ್ನು ವಾಟ್ಸಪ್ಪ್ (00971557687004) ನಂಬರಿನಲ್ಲಿ ಸಂಪರ್ಕಿಸಬಹುದು

error: Content is protected !! Not allowed copy content from janadhvani.com