ಮಂಗಳೂರು: ಪಂಪ್ವೆಲ್ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ನೇತೃತ್ವದಲ್ಲಿ ಮಂಗಳೂರಿನ ಅಡ್ಯಾರ್ ಕಣ್ಣೂರ್ ನಲ್ಲಿ ಸ್ಥಾಪನೆ ಗೊಳ್ಳಲಿರುವ ವಿವಿಧ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡ “ತಖ್ವಾ ಅಕಾಡೆಮಿ”ಯ ಶಿಲಾನ್ಯಾಸ ಕಾರ್ಯಕ್ರಮವು ಡಿಸೆಂಬರ್ ಎಂಟು ಸೋಮವಾರ ಬೆಳಗ್ಗೆ ಹತ್ತು ಗಂಟೆಗೆ ನಡೆಯಲಿದೆ.ಕುಂಬೋಲ್ ಸಯ್ಯಿದ್ ಕೆ ಎಸ್ ಆಟ್ಟಕೋಯ ತಂಙಳ್ ಶಿಲಾನ್ಯಾಸ ನಿರ್ವಹಿಸಲಿದ್ದಾರೆ,
ಝೖನುಲ್ ಉಲಮಾ ಮಾಣಿ ಉಸ್ತಾದ್ ಪ್ರಾರ್ಥನೆ ನಡೆಸಲಿದ್ದು, ಮರ್ಕಝ್ ನಾಲೆಜ್ ಸಿಟಿ ಆಡಳಿತ ನಿರ್ದೇಶಕರಾದ ಡಾ.ಅಬ್ದುಲ್ ಹಕೀಮ್ ಅಝ್ಹರಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಡಾ. ಯೇನೆಪೋಯ ಅಬ್ದುಲ್ಲ ಕುಂಞಿ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.
ಅಕಾಡೆಮಿಯ ಅಧೀನದಲ್ಲಿ ಹಿಫ್ಝುಲ್ ಖುರ್ ಆನ್ ಕಾಲೇಜು, ಪಬ್ಲಿಕ್ ಸ್ಕೂಲ್, ದಅವಾ ಕಾಲೇಜು, ಹಾಸ್ಟೆಲ್ ಮುಂತಾದ ಸಂಸ್ಥೆಗಳನ್ನು ಪ್ರಾರಂಭಿಸಿ, ನುರಿತ ಶಿಕ್ಷಣ ತಜ್ಞರ ಮಾರ್ಗದರ್ಶನದಲ್ಲಿ ಅಂತಾರಾಷ್ಟ್ರೀಯ ಗುಣ ಮಟ್ಟದ ವಿದ್ಯಾಭ್ಯಾಸ ನೀಡುವ ಗುರಿಯನ್ನು ಹೊಂದಲಾಗಿದೆ.
ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸ ಬೇಕಾಗಿ ತಖ್ವಾ ಅಕಾಡೆಮಿಯ ಸಂಚಾಲಕ ಹಾಗೂ ಕೋಶಾಧಿಕಾರಿ ಡಾ ಎಸ್ ಎಂ ರಶೀದ್ ಹಾಜಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ ಅಬ್ದುಲ್ ರಶೀದ್ ಸಖಾಫಿ ಝೖನೀ ಕಾಮಿಲ್ ವಿನಂತಿಸಿ ಕೊಂಡಿದ್ದಾರೆ.






