janadhvani

Kannada Online News Paper

ಕೆಸಿಎಫ್ ಸಲ್ಮಾಬಾದ್ ಸೆಕ್ಟರ್- ಬೃಹತ್ ಮೌಲಿದ್ ಮಜ್ಲಿಸ್ ಯಶಸ್ವಿ

ಕೆಸಿಎಫ್ ಸಲ್ಮಾಬಾದ್ ಸೆಕ್ಟರ್ ಮಾಸಿಕ ಸ್ವಲಾತ್ ಹಾಗೂ ಮೌಲಿದ್ ಮಜ್ಲಿಸ್ ಐಸಿ ಶಿಕ್ಷಣ ವಿಭಾಗದ ಕಾರ್ಯದರ್ಶಿ ಖಲಂದರ್ ಉಸ್ತಾದ್ ರವರ ನೇತೃತ್ವದಲ್ಲಿ ನವಾಝ್ ಮುಡಿಮಾರ್ ರವರ ಅಧ್ಯಕ್ಷತೆಯಲ್ಲಿ ಫೖಝಲ್ ಮಾದಾಪುರ ಅವರ ನಿವಾಸದಲ್ಲಿ ಇಷಾಟೌನಿನಲ್ಲಿ ಯಶಸ್ವಿಯಾಗಿ ನಡೆಯಿತು. ರಾಷ್ಟ್ರೀಯ ಸಮಿತಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅಶ್ರಫ್ ರೆಂಜಾಡಿಯವರು ಸ್ವಾಗತಿಸಿದರು. ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅಲ್ಲಾಹು ಈ ಪ್ರಪಂಚದಲ್ಲಿ ಸರ್ವ ಸೃಷ್ಟಿಗಳನ್ನು ಸೃಷ್ಟಿಸುವುದಕ್ಕಿಂತ ಮೊತ್ತ ಮೊದಲಾಗಿ ಪ್ರವಾದಿ ﷺ ರವರ ಪ್ರಕಾಶವನ್ನಾಗಿದೆ ಸೃಷ್ಟಿಸಿರುವುದು. ಪ್ರವಾದಿ ﷺ ರವರ ಮೌಲಿದ್ ಮಜ್ಲಿಸಿನಲ್ಲಿ ಶಿಸ್ತು ಪಾಲನೆ ಅತೀ ಮುಖ್ಯವಾಗಿರಬೇಕು. ಇನ್ನಿತರ ಯಾವುದೇ ಕಾರ್ಯಗಳಲ್ಲಿ ತೊಡಗಿ ಕೊಳ್ಳವುದು ಒಮ್ಮೆಯೂ ಸಲ್ಲದು. ಕಾರಣ ಪ್ರವಾದಿ ﷺ ರವರನ್ನು ಗೌರವಿಸುವುದು, ಪ್ರೀತಿಸುವುದು ಸತ್ಯ ವಿಶ್ವಾಸಿಗೆ ಕಡ್ಡಾಯವಾಗಿದೆ ಎಂದು ಕೆಸಿಎಫ್ ನೋರ್ತ್ ಝೋನ್ ಶಿಕ್ಷಣ ಇಲಾಖೆಯ ಅಧ್ಯಕ್ಷರಾದ ಮುಹಮ್ಮದ್ ಸಖಾಫಿ ಉಸ್ತಾದರು ಉದ್ಭೋದನೆ ನೀಡಿದರು.

ಐಸಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಖಲಂದರ್ ಉಸ್ತಾದ್ ರವರನ್ನು ಸಲ್ಮಾಬಾದ್ ಸೆಕ್ಟರ್ ಕಾರ್ಯಕರ್ತರು ಶಾಲು ಹೊದಿಸಿ ಸನ್ಮಾನಿಸಿದರು. ರಾಷ್ಟ್ರೀಯ ಸಮಿತಿ ಎಕ್ಸಿಕ್ಯೂಟಿವ್ ಸದಸ್ಯರಾದ ಅಬೂಬಕರ್ ಮದನಿ ಮಂಚಿ, ಹನೀಫ್ ಮುಸ್ಲಿಯಾರ್ ರೆಂಜ, ಸಂಘಟನಾ ಇಲಾಖೆ ಅಧ್ಯಕ್ಷರಾದ ಮನ್ಸೂರ್ ಬೆಳ್ಮ, ವೃತ್ತಿಪರ ಇಲಾಖೆಯ ಕಾರ್ಯದರ್ಶಿ ತೌಫೀಖ್ ಬೆಳ್ತಂಗಡಿ, ಪಬ್ಲಿಕೇಶನ್ ವಿಂಗ್ ಅಧ್ಯಕ್ಷರಾದ ಫಝಲ್ ಸುರತ್ಕಲ್, ಕಾರ್ಯದರ್ಶಿ ಶಾಫಿ ಮಾದಾಪುರ, ಎಡ್ಮಿನ್ ವಿಂಗ್ ಅಧ್ಯಕ್ಷರಾದ ಮೂಸಾ ಪೖಂಬಚ್ಚಾಲ್ ಹಾಗೂ ಸಲ್ಮಾಬಾದ್ ಸೆಕ್ಟರಿನ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಹಮ್ಮದ್ ಸಖಾಫಿ ಉಸ್ತಾದರು ದುಆ ನೆರವೇರಿಸಿದರು.