janadhvani

Kannada Online News Paper

SBI ರಿವಾರ್ಡ್ ಪಾಯಿಂಟ್‌ಗಳು ಎಂಬ ಸೋಗಿನಲ್ಲಿ ವಾಟ್ಸಾಪ್ ಹ್ಯಾಕ್ – ಎಚ್ಚರಿಕೆ

ವಾಟ್ಸಾಪ್ ಗ್ರಾಹಕರು ಅಂತಹ ಯಾವುದೇ ಲಿಂಕ್ ಅಥವಾ ಮೊಬೈಲ್ ಆ್ಯಪ್ ಗಳನ್ನು ಕ್ಲಿಕ್ ಮಾಡದಂತೆ ಜಾಗರೂಕರಾಗಬೇಕಾಗಿದೆ.

ಸೋಶಿಯಲ್ ಮೀಡಿಯಾಗಳಲ್ಲಿ ಹ್ಯಾಕರ್ ಗಳ ಹಾವಳಿ ದೈನಂದಿನ ಏರಿಕೆಯಾಗುತ್ತಿದ್ದು, ಒಂದಲ್ಲೊಂದು ರೀತಿಯ ಸಂದೇಶಗಳನ್ನು, ಲಿಂಕ್‌ಗಳನ್ನು ಹಂಚುವ ಮೂಲಕ ಬ್ಯಾಂಕ್ ಬಳಕೆದಾರರ ಖಾತೆಯಿಂದ ಹಣ ಲೂಟಿಮಾಡುವುದು ಅವರ ಮುಖ್ಯ ಗುರಿಯಾಗಿದೆ.

ತಮಗೆ ಬ್ಯಾಂಕ್ ನಿಂದ ಬಹುಮಾನ ಲಭಿಸಿದೆ, ರಿವಾರ್ಡ್ ಪಾಯಿಂಟ್‌ಗಳ ಮೂಲಕ ಇಂತಿಷ್ಟು ಮೊತ್ತ ದೊರೆಯಲಿದೆ ಎಂಬಿತ್ಯಾದಿ ಸಂದೇಶಗಳನ್ನು ಕಳಿಸಿ ಗ್ರಾಹಕರನ್ನು ಕಬಳಿಸುತ್ತಿದ್ದಾರೆ.

ಇದೀಗ, SBI ಬ್ಯಾಂಕ್ ನ ಹೆಸರಿನಲ್ಲಿ ರಿವಾರ್ಡ್ ಪಾಯಿಂಟ್‌ಗಳು ಎಂಬ ಸಂದೇಶದೊಂದಿಗೆ ವಾಟ್ಸಾಪ್ ಹ್ಯಾಕ್ ಮೊಬೈಲ್ ಅಪ್ಲಿಕೇಷನ್ ಒಂದು ಹರಿದಾಡುತ್ತಿದ್ದು, ಆ ಅಪ್ಲಿಕೇಷನ ನ್ನು ತಮ್ಮ ಮೊಬೈಲ್ ನಲ್ಲಿ ಇನ್ಷ್ಟಾಲ್ ಮಾಡಿದ ಕೂಡಲೇ ತಮ್ಮ ವಾಟ್ಸಾಪನ್ನು ಹ್ಯಾಕ್ ಮಾಡಲಾಗುತ್ತದೆ.

ಈಗಾಗಲೇ ಹಲವು ಮಂದಿಯ ವಾಟ್ಸಾಪ್ ಹ್ಯಾಕ್ ಆಗಿರುವ ಬಗ್ಗೆ ವರದಿಗಳು ಬಂದಿದ್ದು, ವಾಟ್ಸಾಪ್ ಗ್ರಾಹಕರು ಅಂತಹ ಯಾವುದೇ ಲಿಂಕ್ ಅಥವಾ ಮೊಬೈಲ್ ಆ್ಯಪ್ ಗಳನ್ನು ಕ್ಲಿಕ್ ಮಾಡದಂತೆ ಜಾಗರೂಕರಾಗಬೇಕಾಗಿದೆ.

ಒಮ್ಮೆ ಲಿಂಕನ್ನು ಕ್ಲಿಕ್ ಮಾಡಿದರೆ ತಮ್ಮ ವಾಟ್ಸಾಪ್ ಖಾತೆಯ ಸಂಪೂರ್ಣ ನಿಯಂತ್ರಣವು ಹ್ಯಾಕರ್ಗಳ ಪಾಲಾಗುತ್ತದೆ. ತಮ್ಮ ಕಾಂಟಾಕ್ಟ್ ನಲ್ಲಿರುವ ಎಲ್ಲರಿಗೂ ಈ ಸಂದೇಶ ರವಾನೆಯಾಗುತ್ತದೆ. ಮತ್ತೆ ತಮ್ಮ ಖಾತೆಯನ್ನು ಪಡೆಯಲು ಹರಸಾಹಸ ಪಡಬೇಕಾದೀತು. ಅದೂ ಅಲ್ಲದೇ, ತಮ್ಮ ಮೊಬೈಲ್ ನಲ್ಲಿ ರುವ ಬ್ಯಾಂಕ್ ಆ್ಯಪ್ ಗಳನ್ನೂ ಹ್ಯಾಕ್ ಮಾಡುವ ಸಾಧ್ಯತೆಯಿದೆ.

ಈ ರೀತಿ ಹ್ಯಾಕ್ ಆಗಿರುವ ಬಗ್ಗೆ ತಮಗೆ ಅರಿವಾದಲ್ಲಿ, ಮೊಬೈಲಿನಲ್ಲಿರುವ ಸಿಮ್ ಕಾರ್ಡ್ ನ್ನು ರಿಮೂವ್ ಮಾಡಿ, ಹ್ಯಾಕರ್ ಗಳಿಗೆ OTP ಲಭಿಸುವುದನ್ನು ತಡೆಯಬಹುದು. ಮತ್ತೆ ಮೊಬೈಲನ್ನು ಫಾರ್ಮ್ಯಾಟ್ ಮಾಡುವುದು ಉತ್ತಮವಾಗಿದೆ. ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿರುವ ಬಗ್ಗೆ ಸಂಶಯವಿದ್ದಲ್ಲಿ, ಕೂಡಲೇ ಸಂಬಂಧಪಟ್ಟ ಬ್ಯಾಂಕ್ ಗೆ ಮಾಹಿತಿ ನೀಡಬೇಕಾಗಿದೆ.

ಇಂಗ್ಲೀಷಿನಲ್ಲಿ ಹರಿದಾಡುತ್ತಿರುವ ಸಂದೇಶ ಈ ಕೆಳಗಿನಂತಿದೆ.

“ಆತ್ಮೀಯ ಮೌಲ್ಯದ ಗ್ರಾಹಕರೇ,

ನಿಮ್ಮ SBI ಬ್ಯಾಂಕ್ ರಿವಾರ್ಡ್ ಪಾಯಿಂಟ್‌ಗಳು (ರೂ. 9980.00) ಇಂದು ಮುಕ್ತಾಯಗೊಳ್ಳುತ್ತವೆ! ಈಗ SBI ಬ್ಯಾಂಕ್ ರಿವಾರ್ಡ್ ಅಪ್ಲಿಕೇಶನ್ ಮೂಲಕ ರಿಡೀಮ್ ಮಾಡಿಕೊಳ್ಳಿ ನಿಮ್ಮ ಖಾತೆಯಲ್ಲಿ ನಗದು ಠೇವಣಿ ಮಾಡುವ ಮೂಲಕ ಸ್ಥಾಪಿಸಿ ಮತ್ತು ನಿಮ್ಮ ಬಹುಮಾನವನ್ನು ಪಡೆದುಕೊಳ್ಳಿ. ಧನ್ಯವಾದಗಳು

ತಂಡ – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ”