janadhvani

Kannada Online News Paper

ದ.ಕ.ಜಿಲ್ಲೆಯಲ್ಲೇ ಪ್ರಥಮ ಬಾರಿಗೆ: ಇಸ್ಲಾಮಿಕ್ ಕೌನ್ಸಿಲಿಂಗ್ ಸೆಂಟರ್- ಆಗಸ್ಟ್ 9 ರಂದು ಉದ್ಘಾಟನೆ

ಡ್ರಗ್ಸ್ ಬಳಕೆಯಿಂದ ಮುಕ್ತಿ ಹೊಂದಲು, ಅತಿಯಾದ ಮೊಬೈಲ್ ಬಳಕೆ, ಖಿನ್ನತೆಗೆ ಒಳಗಾದವರು, ಕೌಟುಂಬಿಕ ಸಮಸ್ಯೆ ಸೇರಿದಂತೆ ವಿವಿದ ಕಾರ್ಯಗಳಿಗೆ ಕೌನ್ಸಿಲಿಂಗ್ ಹಾಗೂ ತರಬೇತಿ ಕಾರ್ಯಗಾರ ನಡೆಯಲಿರುವ ಕಚೇರಿಯಾಗಿರುತ್ತದೆ ಅಲ್ ಸಲಾಮ ಕೌನ್ಸಿಲಿಂಗ್ ಸೆಂಟರ್

ಮಂಗಳೂರು: ಕಾಲದ ಬೇಡಿಕೆಯ ಇಸ್ಲಾಮಿಕ್ ಕೌನ್ಸಿಲಿಂಗ್ ಸೆಂಟರ್ ದೇರಳಕಟ್ಟೆಯಲ್ಲಿ ಆಗಸ್ಟ್ 9ರಂದು ಸಂಜೆ 4ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಅಲ್ ಸಲಾಮ ಫೌಂಡೇಶನ್ ಅಧ್ಯಕ್ಷ ನಿವೃತ ಡಿ.ಸಿ.ಪಿ ಜಿ ಏ ಬಾವಾ ತಿಳಿಸಿದ್ದಾರೆ.

ಡ್ರಗ್ಸ್ ಬಳಕೆಯಿಂದ ಮುಕ್ತಿ ಹೊಂದಲು, ಅತಿಯಾದ ಮೊಬೈಲ್ ಬಳಕೆ, ಖಿನ್ನತೆಗೆ ಒಳಗಾದವರು, ಕೌಟುಂಬಿಕ ಸಮಸ್ಯೆ ಸೇರಿದಂತೆ ವಿವಿದ ಕಾರ್ಯಗಳಿಗೆ ಕೌನ್ಸಿಲಿಂಗ್ ಹಾಗೂ ತರಬೇತಿ ಕಾರ್ಯಗಾರ ನಡೆಯಲಿರುವ ಕಚೇರಿಯಾಗಿರುತ್ತದೆ ಅಲ್ ಸಲಾಮ ಕೌನ್ಸಿಲಿಂಗ್ ಸೆಂಟರ್ ಎಂದು ಅವರು ತಿಳಿಸಿದ್ದಾರೆ.

ಆಗಸ್ಟ್ 9ರಂದು ಶನಿವಾರ ಸಂಜೆ 4ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಸ್ಪೀಕರ್ ಯು ಟಿ ಖಾದರ್ ಸೇರಿದಂತೆ ಹಲವಾರು ನಾಯಕರು ಭಾಗವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.