janadhvani

Kannada Online News Paper

ವಿಟ್ಲದಲ್ಲಿ ಯಶಸ್ವಿಯಾಗಿ ನಡೆದ ದ. ಕ ಈಸ್ಟ್ ಜಿಲ್ಲಾ ದಅವಾ ಸೆನ್ಸೋರಿಯಂ

ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ನಿರ್ದೇಶನದಂತೆ ಜಿಲ್ಲಾ ಘಟಕಗಳಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ದ. ಕ ಈಸ್ಟ್ ಜಿಲ್ಲಾ ದಅವಾ ಸೆನ್ಸೋರಿಯಂ ವಿಟ್ಲದ ಬ್ರೈಟ್ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ನಡೆಯಿತು. ಜಿಲ್ಲಾ ವ್ಯಾಪ್ತಿಯ 20ಕ್ಕೂ ಮಿಕ್ಕ ದರ್ಸ್ ಹಾಗೂ ದಅವಾ ಕಾಲೇಜುಗಳಿಂದ ಸುಮಾರು 300ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದರು.

ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷರಾದ ಇಂಜಿನಿಯರ್ ಶಫೀಕ್ ಸಅದಿ ಅಧ್ಯಕ್ಷತೆಯಲ್ಲಿ, ಸಯ್ಯಿದ್ ಸಾಬಿತ್ ತಂಙಳ್ ಪಾಟ್ರಕೋಡಿ ದುಆ ನೆರವೇರಿಸಿ, ವಿಟ್ಲ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಅಬ್ದುಲ್ ಖಾದರ್ ಫೈಝಿ ಉದ್ಘಾಟಿಸಿ, ಅಶ್ರಫ್ ಸಖಾಫಿ ಕನ್ಯಾನ, ಸಲೀಂ ಹಾಜಿ ಬೈರಿಕಟ್ಟೆ, ಅಬ್ದುರ್ರಹ್ಮಾನ್ ಶರಫಿ ಶುಭ ನುಡಿಗಳನ್ನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೇರಳ ಎಸ್ಸೆಸ್ಸೆಫ್ ಕೋಶಾಧಿಕಾರಿ ಅನಸ್ ಅಮಾನಿ ಪುಷ್ಪಗಿರಿ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಬೇಕಾದ ಅನೇಕ ವಿಷಯಗಳ ಕುರಿತು ಮಾರ್ಗದರ್ಶನ ನೀಡಿದರು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಲಿ ತುರ್ಕಳಿಕೆ ಹಾಗೂ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಮುಹಮ್ಮದ್ ಮಿಸ್ಬಾಹಿ ಸಂಘಟನೆಯ ಮಹತ್ವ ಮತ್ತು ಅನಿವಾರ್ಯತೆ ಬಗ್ಗೆ ಮಾತನಾಡಿದರು.

ದೇಶದ ವಿವಿಧ ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ಶಿಕ್ಷಣದಿಂದ ವಂಚಿತರಾಗುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ, ನೈತಿಕತೆಯನ್ನು ಬೋಧಿಸಿ ಸುಶಿಕ್ಷಿತ ಸಮಾಜ ನಿರ್ಮಾಣದ ಕನಸನ್ನು ಹೊಂದಿದ ರಾಷ್ಟ್ರೀಯ ಎಸ್ಸೆಸ್ಸೆಫ್ ನ ಬಹುದೊಡ್ಡ ಯೋಜನೆಯಾದ ‘ಒನ್ ಡ್ರಾಪ್’ ಗೆ ಜಿಲ್ಲಾ ಮಟ್ಟದಲ್ಲಿ ಚಾಲನೆ ನೀಡಲಾಯಿತು.
ಕಂಬಳಬೆಟ್ಟು ಉಸ್ತಾದ್, ಯೂಸುಫ್ ಹಾಜಿ ಶಾಜ, ಬ್ರೈಟ್ ಇಬ್ರಾಹಿಂ ಹಾಜಿ, ಇಸ್ಮಾಈಲ್ ಮಾಸ್ಟರ್ ಸಹಿತವಿರುವ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ಸೆಸ್ಸೆಫ್ ನ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆತಿಥ್ಯ ವಹಿಸಿದ ವಿಟ್ಲ ಡಿವಿಷನ್ ಸಮಿತಿ ಹಾಗೂ ಎಸ್ ವೈ ಎಸ್ ಇಸಾಬಾ ಕಾರ್ಯಕರ್ತರು ಆಗಮಿಸಿದ ಎಲ್ಲರನ್ನೂ ಆತ್ಮೀಯವಾಗಿ ಸತ್ಕರಿಸಿದರು.
ಜಿಲ್ಲಾ ಸದಸ್ಯರಾದ ಅತಾವುಲ್ಲಾ ಹಿಮಮಿ ಕುಪ್ಪೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಯಾಝ್ ಎಲಿಮಲೆ, ಉಪಾಧ್ಯಕ್ಷರಾದ ಸಿದ್ದೀಕ್ ಹಿಮಮಿ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಿಕೊಟ್ಟರು. ಜಿಲ್ಲಾ ಸದಸ್ಯರು ಹಾಗೂ ವಿಟ್ಲ ಡಿವಿಷನ್ ಅಧ್ಯಕ್ಷರಾದ ಆಬಿದ್ ಸಖಾಫಿ ಪೆರುವಾಯಿ ಧನ್ಯವಾದ ಸಲ್ಲಿಸಿದರು.