janadhvani

Kannada Online News Paper

KCF ಒಮಾನ್: ‘ದಾರುಲ್ ಅಮಾನ್’ ಮನೆಯ ಕೀ ಹಸ್ತಾಂತರ

ಬಂಟ್ವಾಳ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ದಶಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ ಯೋಜನೆಗಳ ಪೈಕಿ ಸೂರಿಲ್ಲದ ಅರ್ಹ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವುದು ಕೂಡಾ ಒಂದು ಭಾಗವಾಗಿದೆ.

‘ದಾರುಲ್ ಅಮಾನ್’ ನ 12 ನೇ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಜುಲೈ -10 ಗುರುವಾರ ಅಸ್ಸಯ್ಯಿದ್ ಅಲವಿ ಜಲಾಲುದ್ದೀನ್ ಮದನಿ ಅಲ್ ಹಾದಿ (ಮಲ್ಜಅ್ ತಂಙಳ್) ರವರ ನೇತೃತ್ವದಲ್ಲಿ ಕೀ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜ್ಜಿನಡ್ಕ ಗುಂಪೆ ಎಂಬ ಊರಿನಲ್ಲಿ’ದಾರುಲ್ ಅಮಾನ್’ ನ 12 ನೇ ಮನೆಯನ್ನು ಕೆಸಿಎಫ್ ಒಮಾನ್ ನಿರ್ಮಿಸಿ ಕೊಟ್ಟಿದೆ.