ಉಡುಪಿ: ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀಮತಿ ಸ್ವರೂಪ ಟಿ ಕೆ ಇವರನ್ನು ಉಡುಪಿ ಜಿಲ್ಲೆಯ ಪ್ರಮುಖ ಹತ್ತು ಸಂಘಟನೆಗಳ ಒಕ್ಕೂಟವಾದ ಸುನ್ನಿ ಕೋ ಓಡಿನೇಷನ್ ಉಡುಪಿ ಜಿಲ್ಲಾ ಸಮಿತಿಯ ನಿಯೋಗ ಭೇಟಿಯಾಗಿ ಹೂವು ಗುಚ್ಛ ನೀಡುವ ಮೂಲಕ ಶುಭ ಹಾರೈಸಿತು.
ಚುನಾವಣೆಯ ಮೊದಲು ಕಾಂಗ್ರೆಸ್ ಸರಕಾರ ಮುಸ್ಲಿಮರಿಗೆ ನೀಡಿದ ಆಶ್ವಾಸನೆಗಳನ್ನು ಪೂರ್ತಿಗೊಳಿಸುವ ಬಗ್ಗೆ ಜಿಲ್ಲಾಧಿಕಾರಿಯ ಮೂಲಕ ಸರಕಾರಕ್ಕೆ ಜ್ಞಾಪಕ ಪತ್ರ ನೀಡಲಾಯಿತು.
ಮುಖ್ಯವಾಗಿ, 2ಬಿ ಮೀಸಲಾತಿ ಮರು ಸ್ಥಾಪಿಸಬೇಕು, ಶಿಕ್ಷಣ ಕೇಂದ್ರಗಳಲ್ಲಿ ಹಿಜಾಬ್ ನಿಷೇಧವನ್ನು ತೆರವುಗೊಳಿಸಬೇಕು, ಉಡುಪಿ ಜಿಲ್ಲೆಯಲ್ಲಿ ಬೇರು ಬಿಡುತ್ತಿರುವ ಕೋಮುವಾದವನ್ನು, ಕೋಮು ಸಂಘರ್ಷಗಳನ್ನು ಹಾಗೂ ಕೋಮುವಾದಿ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಹಾಗೂ ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡುವ ಹೇಳಿಕೆಗಳನ್ನು ನೀಡುವವರಿಗೆ ಜಾಮೀನು ರಹಿತ ಕಾಯ್ದೆಗಳ ಮೂಲಕ ಸೂಕ್ತ ಶಿಕ್ಷೆಯನ್ನು ನೀಡಬೇಕು, ಜೈಲಿನಲ್ಲಿರುವ ಅಮಾಯಕ ಯುವಕರನ್ನು ಬಿಡುಗಡೆಗೊಳಿಸಬೇಕು ಇಂತಹ ಹಲವು ಬೇಡಿಕೆಗಳ ಪಟ್ಟಿಯನ್ನು ಜಿಲ್ಲಾಧಿಕಾರಿಯ ಮೂಲಕ ಸರಕಾರಕ್ಕೆ ಜ್ಞಾಪಕ ಪತ್ರ ಸಲ್ಲಿಸಿ ಶೀಘ್ರ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಯ ಮೂಲಕ ಸರಕಾರಕ್ಕೆ ಒತ್ತಾಯಿಸಲಾಯಿತು.
ನಿಯೋಗದಲ್ಲಿ ಜಿಲ್ಲಾ ಸುನ್ನೀ ಕೋ-ಓಡಿನೇಶನ್ ಸಮಿತಿಯ ಅಧ್ಯಕ್ಷರಾದ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಪ್ರಧಾನ ಕಾರ್ಯದರ್ಶಿ ಸುಭಾನ್ ಅಹ್ಮದ್ ಹೊನ್ನಾಳ, ಕೋಶಾಧಿಕಾರಿ ವಸೀಮ್ ಭಾಷಾ ಕುಂದಾಪುರ, ಕಾರ್ಯದರ್ಶಿಗಳಾದ YM ಇಲಿಯಾಸ್ ಕಟಪಾಡಿ ಕಾನೂನು ಸಲಹೆಗಾರ ಅಡ್ವೋಕೇಟ್ ಹಬೀಬ್ ಸಂತೋಷ್ ನಗರ ನಿರ್ದೇಶಕರಾದ ಸೈಯ್ಯದ್ ಫರೀದ್ ಸಾಹೇಬ್ ಉಡುಪಿ U.J ಹನೀಫ್ ಅಂಬಾಗಿಲು ಹಾಗೂ ಸಂಘಟನೆಯ ಇತರ ನಾಯಕರು ಉಪಸ್ಥಿತರಿದ್ದರು.








