janadhvani

Kannada Online News Paper

ಕೂರತ್ ತಂಙಳ್ ಉರೂಸ್: ಸುನ್ನೀ ಕೋಡಿನೇಷನ್ ಬೆಳ್ತಂಗಡಿ ಯಶಸ್ವಿಗೆ ಕರೆ

ಊರೂಸ್ ಕಾರ್ಯಕ್ರಮ ಜೂನ್ 26ರಿಂದ 29 ರವರೆಗೆ ಕಡಬ ತಾಲೂಕಿನ ಕೂರತ್ ನಲ್ಲಿ ನಡೆಯಲಿದೆ.

ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕೇಂದ್ರ ಉಳ್ಳಾಲ ಸಹಿತವಿರುವ ದಕ್ಷಿಣ ಕನ್ನಡ ಜಿಲ್ಲೆಯ ನೂರಾರು ಮೊಹಲ್ಲಾಗಳ ಖಾಝಿಗಳಾಗಿ ಸೇವೆ ಸಲ್ಲಿಸಿದ್ದ ‘ಕೂರತ್ ತಂಙಳ್’ ಎಂದೇ ಪ್ರಸಿದ್ಧರಾಗಿದ್ದ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೊಯಮ್ಮ ತಂಙಳ್ ಅಲ್ ಬುಖಾರಿ (ನ.ಮ) ಅವರು ಸಮಸ್ತ ಉಲಮಾ ಒಕ್ಕೂಟದ ಕೇಂದ್ರ ಸಮಿತಿಯ ಸದಸ್ಯರಾಗಿ ಹಲವಾರು ವಿದ್ಯಾ ಸಮುಚ್ಚಯದ ಅಧ್ಯಕ್ಷರಾಗಿ ಸಮುದಾಯಕ್ಕೆ ನಾಯಕತ್ವ ನೀಡಿದವರು.

ಕಷ್ಟ- ದುಃಖದಿಂದ ಬಳಲುತ್ತಿದ್ದ ಜಾತಿ ಧರ್ಮ ವ್ಯತ್ಯಾಸವಿಲ್ಲದೆ ಎಲ್ಲಾ ಜನರಿಗೂ ತಮ್ಮ ಆಶೀರ್ವಾದದ ಮೂಲಕ ಸಾಂತ್ವನದ ಕೇಂದ್ರವಾಗಿದ್ದರು. ಅವರು ವಫಾತಾಗಿ ಒಂದು ವರ್ಷವಾಗುತ್ತಿರುವ ಸಂದರ್ಭದಲ್ಲಿ ತಂಙಳ್ ರವರ ಪ್ರಥಮ ವರ್ಷದ ಅನುಸ್ಮರಣಾ – ಊರೂಸ್ ಕಾರ್ಯಕ್ರಮ ಜೂನ್ 26ರಿಂದ 29 ರವರೆಗೆ ಕಡಬ ತಾಲೂಕಿನ ಕೂರತ್ ನಲ್ಲಿ ನಡೆಯಲಿದೆ.

ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಸಹಿತವಿರುವ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದು, ಈ ಉರೂಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸುನ್ನೀ ಕೋಡಿನೇಷನ್ ಬೆಳ್ತಂಗಡಿ ತಾಲೂಕು ಸಮಿತಿ ಇದರ ಅಧ್ಯಕ್ಷರಾದ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ಉಳ್ತೂರು, ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.