ಮಂಗಳೂರು: ಇಲ್ಲಿನ ಬಂದರ್ ಕಸೈಗಲ್ಲಿ ಮಸೀದಿಯಲ್ಲಿ ಸುಧೀರ್ಘ 45 ವರ್ಷಗಳ ಕಾಲ ಖತೀಬರಾಗಿ ಸೇವೆ ಸಲ್ಲಿಸಿರುವ ಹಾಜಿ.ಸಿ.ಸ್ವಾಲಿಹ್ ಮುಸ್ಲಿಯಾರ್ ಉಸ್ತಾದರನ್ನು ಅವರ ಸ್ವಗೃಹದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ , ಎಸ್ ವೈ ಎಸ್ ,ಎಸ್ ಎಸ್ ಎಫ್ ಮಂಗಳೂರು ಸಿಟಿ ಯುನಿಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಜೀವನದ ಬಹುಪಾಲು ಭಾಗವನ್ನು ಒಂದೇ ಮಸೀದಿಯಲ್ಲಿ ದೀನೀ ಸೇವೆಗಾಗಿ ಮುಡಿಪಾಗಿಟ್ಟ ಸ್ವಾಲಿಹ್ ಉಸ್ತಾದ್ ರ ನಡೆಯು ಪ್ರಶಂಸನೀಯ ಮತ್ತು ಮಾದರೀ ಯೋಗ್ಯವಾದುದು ಎಂದು ಕಂಡತ್ ಪಳ್ಳಿ ಜುಮಾ ಮಸೀದಿ ಖತೀಬ್ ಪಿ.ಎ.ಮುಹಮ್ಮದ್ ರಫೀಕ್ ಮದನಿ ಕಾಮಿಲ್, ಫೌಝೀ ಲೈನ್ ಮಸೀದಿ ಖತೀಬ್ ಅಬುಲ್ ವಫಾ ಖಾಸಿಂ ಮುಸ್ಲಿಯಾರ್, ಎಸ್ ವೈ ಎಸ್ ಮಂಗಳೂರು ಝೋನ್ ಅಧ್ಯಕ್ಷ ಹಾಫಿಳ್ ಯಾಕುಬ್ ಸಅದಿ ನಾವೂರು ಹೇಳಿದರು.
ಈ ಸಂದರ್ಭದಲ್ಲಿ ,ಸಯ್ಯಿದ್ ಇಸ್ ಹಾಕ್ ತಂಙಳ್, ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು, ಮುಸ್ಲಿಂ ಜಮಾಅತ್ ಸಿಟಿ ಸಮಿತಿ ನಾಯಕರಾದ ರಷೀದ್ ಹಾಜಿ ಪಾಂಡೇಶ್ವರ, ಅಬ್ಬಾಸ್ ಹಾಜಿ ಬಿಜೈ, ಜೆಪ್ಪು ಅಬೂಬಕ್ಕರ್ ಹಾಜಿ, ಎಸ್ ವೈ ಎಸ್ ಜಿಲ್ಲಾ ಕಾರ್ಯದರ್ಶಿಗಳಾದ ನಝೀರ್ ಲುಲು, ಹಸನ್ ಪಾಂಡೇಶ್ವರ, ಸಿಟಿ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಟೈಲರ್, ಝೋನ್ ನಾಯಕರಾದ ಕೆ ಸಿ ಎಣ್ಮೂರು, ಹಾರಿಸ್ ಮದನಿ, ಮಜೀದ್ ಸಅದಿ, ಮನ್ಸೂರ್ ಸಅದಿ, ಶರೀಫ್ ಝುಹ್ರಿ ಲೈನ್, ಸಪ್ವಾನ್ ಬಿಜೈ, ರಶೀದ್ IBM, ರಫೀಕ್ ನೂಜಿ ಉಪಸ್ಥಿತರಿದ್ದರು.







