janadhvani

Kannada Online News Paper

ಎಸ್ಸೆಸ್ಸೆಫ್ ಯೂತ್ ಐಡಿಯೇಷನ್ ಲ್ಯಾಬ್ ಇಂದು ಬೆಂಗಳೂರಿನಲ್ಲಿ

ಬೆಂಗಳೂರು: ನೂತನವಾಗಿ ಆಯ್ಕೆಯಾಗಿರುವ ಎಸ್ಸೆಸ್ಸೆಫ್ ರಾಜ್ಯ ನಾಯಕರಿಗೆ ಇರುವ ‘ಸ್ಪಾರ್ಕ್ ನೆಕ್ಸ್ಟ್’ ಯೂತ್ ಐಡಿಯೇಷನ್ ಲ್ಯಾಬ್ ಇಂದು ಬೆಂಗಳೂರಿನಲ್ಲಿ ನಡೆಯಲಿದೆ.
ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ವತಿಯಿಂದ ಸೌತ್, ಸೆಂಟ್ರಲ್ , ನಾರ್ತ್ ಈಸ್ಟ್, ಈಸ್ಟ್ ಹಾಗೂ ನಾರ್ತ್ ಝೋನ್ ರಾಜ್ಯ ನಾಯಕರುಗಳಿಗಾಗಿ ನಡೆಯಲಿರುವ ಈ ಕ್ಯಾಂಪ್ ಬೆಂಗಳೂರು, ಮುಂಬೈ, ಗುವಾಹಟಿ, ಕಿಷನ್‌ಗಂಜ್ ಹಾಗೂ ದೆಹಲಿಯಲ್ಲಿ ನಡೆಯಲಿದೆ.

ವಿವಿಧ ವಿಷಯಗಳಲ್ಲಿ ಚರ್ಚೆಗಳು ಹಾಗೂ ಸೆಷನ್‌ಗಳು ನಡೆಯಲಿದ್ದು ಎಸ್ಸೆಸ್ಸೆಫ್ ರಾಷ್ಟ್ರಾಧ್ಯಕ್ಷ ಸಿಪಿ ಉಬೈದುಲ್ಲಾಹ್ ಸಖಾಫಿ, ದಿಲ್‌ಶಾದ್ ಕಾಶ್ಮೀರ್, ಮುಹಮ್ಮದ್ ಶರೀಫ್ ನಿಝಾಮಿ, ಮನ್ಸೂರ್ ಹಝ್ರತ್, ಅಫ್ಝಲ್ ರಾಶಿದ್ ಖುತುಬಿ, ನೌಫಲ್ ಉಲೂಮಿ ಕೋಯಂಬತ್ತೂರ್, ಫಝಲುರ್ರಹ್ಮಾನ್ ಜಮ್ಮು ಕಾಶ್ಮೀರ, ಡಾ ಅಬೂಬಕ್ಕರ್, ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ, ನವಾಝ್ ಭಟ್ಕಳ, ಸಫ್ವಾನ್ ಕರ್ನಾಟಕ ಮುಂತಾದವರು ವಿವಿಧ ಸೆಷನ್‌ಗಳಿಗೆ ನೇತೃತ್ವ ನೀಡಲಿದ್ದಾರೆ.