janadhvani

Kannada Online News Paper

ದೇರಳಕಟ್ಟೆ ಕಾನಕೆರೆ ದುರಂತ ಸ್ಥಳಕ್ಕೆ ಸುನ್ನೀ ಸಂಘ ಕುಟುಂಬದ ನಾಯಕರು ಭೇಟಿ

ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮದ ಕಾನಕರೆಯಲ್ಲಿರುವ ನೌಶಾದ್ ಅವರ ಮನೆಗೆ ಹಿಂಬದಿಯ ಗುಡ್ಡೆ, ತಡೆಗೋಡೆ ಕುಸಿದು ಬಿದ್ದು ನೌಶಾದ್ ರ ಪುತ್ರಿ ಫಾತಿಮ ನಈಮ (10) ರವರು ನಿಧನರಾಗಿದ್ದರು.

ಮಂಗಳೂರು :- ಇಂದು ಮುಂಜಾನೆ ತೀವ್ರ ಮಳೆ ಸಂದರ್ಭದಲ್ಲಿ ದೇರಳಕಟ್ಟೆ ಕಾನಕೆರೆಯಲ್ಲಿ ಮನೆಯ ಸಮೀಪದ ಆವರಣ ಗೋಡೆ ಕುಸಿದು ಮಗು ಅಸುನೀಗಿದ ಮನೆಗೆ ಸುನ್ನಿ ಸಂಘ ಕುಟುಂಬದ ನಾಯಕರು ಭೇಟಿ ನೀಡಿ ದುಆ ನೆರವೇರಿಸಿದರು.

ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮದ ಕಾನಕರೆಯಲ್ಲಿರುವ ನೌಶಾದ್ ಅವರ ಮನೆಗೆ ಹಿಂಬದಿಯ ಗುಡ್ಡೆ, ತಡೆಗೋಡೆ ಕುಸಿದು ಬಿದ್ದು ನೌಶಾದ್ ರ ಪುತ್ರಿ ಫಾತಿಮ ನಈಮ (10) ರವರು ನಿಧನರಾಗಿದ್ದರು.

ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಮೌಲಾನ ಶಾಫಿ ಸ ಅದಿ, ರಾಜ್ಯ ನಾಯಕರಾದ ಎಮ್ ಎಸ್ ಎಂ ಝೈನೀ ಕಾಮಿಲ್ ಸಖಾಫಿ , ವಕ್ಫ್ ದ ಕ ಜಿಲ್ಲಾ ಅಧ್ಯಕ್ಷ ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಉಡುಪಿ ಜಿಲ್ಲಾಧ್ಯಕ್ಷ ಸಿ ಹೆಚ್ ಅಬ್ದುಲ್ ಮುತ್ತಲಿಬ್ ವಂಡ್ಸೆ ,ಎಸ್ ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಂ ಸಿದ್ದೀಖ್ ಮೋಂಟುಗೋಳಿ, ಕೋಶಾಧಿಕಾರಿ ಮನ್ಸೂರ್ ಕೋಟುಗದ್ದೆ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕರಾದ ಅಶ್ರಫ್ ಸಅದಿ ಮಲ್ಲೂರು, ಅಶ್ರಫ್ ಕಿನಾರ ಮಂಗಳೂರು, ಎಸ್ ವೈ ಎಸ್ ನಾಯಕರಾದ ಅಡ್ವಕೇಟ್ ಹಂಝತ್ ,ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ , ಇಸ್ಹಾಕ್ ಝುಹ್ರಿ, ಹಸೈನಾರ್ ಆನೆಮಹಲ್, ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ, ಅಬ್ದುರ್ರಹ್ಮಾನ್ ಮೊಗರ್ಪಣೆ,‌ ಸೈದುದ್ದೀನ್ , ರಝಾಖ್ ಭಾರತ್ ಉಪಸ್ಥಿತರಿದ್ದರು.