ರಿಯಾದ್: ಯಮನ್ ಕೇಂದ್ರಿತ ಹೂತೀಗಳ ಮಿಸೈಲ್ ಆಕ್ರಮಣವು ಮುಂದುವರಿದಿದ್ದು, ಸೌದಿ ರಾಜಧಾನಿ ನೆಲೆಯ ಮೇಲೆ ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸೌದಿ ಅರೇಬಿಯಾ
ಆಕಾಶದಲ್ಲಿಯೇ ಹೂಡೆದುರುಳಿಸಿದೆ. ಎಂದು ಅಲೈಡ್ ಪಡೆಗಳ ಅಧಿಕೃತ ವಕ್ತಾರ ಕರ್ನಲ್ ತುರ್ಕಿ ಅಲ್-ಮಾಲಿಕಿ ತಿಳಿಸಿದ್ದು, ಈ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಹೇಳಿದ್ದಾರೆ.
ಸ್ಥಳೀಯ ಸುಲೈ, ಉಮ್ಮು ಹಮಾಮ್ ಮತ್ತು ಬಥದಲ್ಲಿ ದೊಡ್ಡ ಧ್ವನಿ ಕೇಳಿ ಬಂದಿದ್ದಾಗಿ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲಸಿರುವ ಭಾರತೀಯರಿಂದ ತಿಳಿದು ಬಂದಿದೆ.
ಕಳೆದ ಒಂದು ವರ್ಷದಲ್ಲಿ ಹಲವಾರು ಕ್ಷಿಪಣಿಗಳನ್ನು ಹೂತಿಗಳು ಉಡಾಯಿಸಿದ್ದಾರೆ. ಎಲ್ಲಾ ಪ್ರಯತ್ನಗಳನ್ನು ಸೌದಿ ಸೈನ್ಯವು ವಿಫಲಗೊಳಿಸಿದ್ದವು. ಇದೇ ಅವಧಿಯಲ್ಲಿ, ಯೆಮೆನಿ ಮಿಲಿಟರಿಯು ಸೌದಿ ಅರೇಬಿಯಾದ ಸಹಕಾರದಿಂದ ಹೂತಿಗಳಿಂದ ಯೆಮೆನ್ ನ ಹುದೈದಾದಲ್ಲಿನ ವಿಮಾನ ನಿಲ್ದಾಣ ಮತ್ತು ಬಂದರನ್ನು ವಶಪಡಿಸಿಕೊಂಡಿದ್ದವು.