janadhvani

Kannada Online News Paper

ಚಾಲನಾ ಪರವಾನಗಿಗಳ ಸುಲಭ ಆನ್‌ಲೈನ್ ನವೀಕರಣಕ್ಕಾಗಿ ಅಬ್ಶೀರ್ ನಲ್ಲಿ ಸೌಲಭ್ಯ

ಹೊಸ ವ್ಯವಸ್ಥೆಯ ಮೂಲಕ ಸಮಯ. ವೆಚ್ಚಗಳು, ಶ್ರಮ ಇತ್ಯಾದಿಗಳನ್ನು ಕಡಿಮೆ ಮಾಡಬಹುದು.

ರಿಯಾದ್: ಚಾಲನಾ ಪರವಾನಗಿಗಳನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ನವೀಕರಿಸಲು ಅಬ್ಶೀರ್ ನಲ್ಲಿ ಹೊಸ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸಂಬಂಧಿತ ಇಲಾಖೆಗಳನ್ನು ನೇರವಾಗಿ ಸಂಪರ್ಕಿಸದೆಯೇ ಇದನ್ನು ನವೀಕರಿಸಬಹುದು. ಇದು ಕಾರ್ಯವಿಧಾನಗಳನ್ನು ಸರಳಗೊಳಿಸುತ್ತದೆ ಮತ್ತು ತ್ವರಿತ ಸೇವೆಯನ್ನು ಒದಗಿಸುತ್ತದೆ ಎಂದು ಇದನ್ನು ಗೃಹ ಸಚಿವಾಲಯ ಪ್ರಕಟಿಸಿದೆ.

ಶುಲ್ಕ ಪಾವತಿ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಪೂರ್ಣಗೊಳಿಸುವಂತಹ ಷರತ್ತುಗಳನ್ನು ಪಾಲಿಸಿಕೊಂಡೇ ವೇದಿಕೆಯಲ್ಲಿ ಪರವಾನಗಿಗಳನ್ನು ನವೀಕರಿಸಲಾಗುತ್ತದೆ. ಈ ಸೇವೆಯು ಸ್ಥಳೀಯರು ಮತ್ತು ವಿದೇಶಿಯರಿಗೆ ಉಪಯುಕ್ತವಾಗಿದೆ. ಹೊಸ ವ್ಯವಸ್ಥೆಯ ಮೂಲಕ ಸಮಯ, ವೆಚ್ಚಗಳು, ಶ್ರಮ ಇತ್ಯಾದಿಗಳನ್ನು ಕಡಿಮೆ ಮಾಡಬಹುದು.

ಇತ್ತೀಚಿನ ದಿನಗಳಲ್ಲಿ ಅಬ್ಶೀರ್ ವೇದಿಕೆಯ ಹೆಸರಿನಲ್ಲಿ ನಕಲಿ ಲಿಂಕ್‌ಗಳು ಸಚಿವಾಲಯದ ಗಮನಕ್ಕೆ ಬಂದಿವೆ. ಇಂತಹ ಲಿಂಕ್‌ಗಳಿಂದ ಮೋಸಹೋಗದಂತೆ ಗೃಹ ಸಚಿವಾಲಯ ಎಚ್ಚರಿಕೆ ನೀಡಿದೆ.