ದೋಹಾ: ಕತಾರ್‌ನಲ್ಲಿರುವ ವಲಸಿಗರು ಇನ್ನು ಮುಂದೆ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ರಶ್‌ನಲ್ಲಿ ಸಮಯವನ್ನು ವ್ಯರ್ಥ ಮಾಡಬೇಕಾಗಿಲ್ಲ ಕತಾರ್’ ಡಿಜಿಟಲ್ ಐಡೆಂಟಿಟಿ (ಕ್ಯೂಡಿಐ) ಅಪ್ಲಿಕೇಶನ್ ಬಳಸಿಕೊಂಡು ಇ- ಗೇಟ್‌ಗಳ ಮೂಲಕ ಪ್ರವೇಶ ಮತ್ತು ನಿರ್ಗಮನವನ್ನು ತ್ವರಿತಗೊಳಿಸಬಹುದು.
ಇ-ಗೇಟ್‌ನಲ್ಲೂ ಕ್ಯೂಡಿಐ ಆ್ಯಪ್ ಬಳಸಬಹುದು ಎಂದು ಗೃಹ ಸಚಿವಾಲಯವು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ಸ್ಪಷ್ಟಪಡಿಸಿದೆ. ಇದು ಅಪ್ಲಿಕೇಶನ್‌ನ ಮುಖ್ಯ ಅನುಕೂಲಗಳಲ್ಲಿ ಒಂದಾಗಿದೆ. ಪಾಸ್‌ಪೋರ್ಟ್, ಗುರುತಿನ ಚೀಟಿ, ರಾಷ್ಟ್ರೀಯ ವಿಳಾಸ, ಚಾಲನಾ ಪರವಾನಗಿ, ಸ್ಥಾಪನೆ ನೋಂದಣಿ ಕಾರ್ಡ್ ಮತ್ತು ದೇಶದ ನಾಗರಿಕರು ಮತ್ತು ಅನಿವಾಸಿಗಳ ಶಸ್ತ್ರಾಸ್ತ್ರ ಪರವಾನಗಿ ಕಾರ್ಡ್ ಸೇರಿದಂತೆ ಅಧಿಕೃತ ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ಡಿಜಿಟಲ್‌ನಲ್ಲಿ ಸಂಗ್ರಹಿಸಲು 2024 ರಲ್ಲಿ ಅಪ್ಲಿಕೇಶನ್ ಅನ್ನು ಡಿಜಿಟಲ್ ವ್ಯಾಲೆಟ್‌ನಂತೆ ಪ್ರಾರಂಭಿಸಲಾಯಿತು . ಆಪ್‌ನಲ್ಲಿ ಸಂಗ್ರಹವಾಗಿರುವ ಡಿಜಿಟಲ್ ದಾಖಲೆಗಳನ್ನು ಸಚಿವಾಲಯದ ಇ-ಸೇವೆಗಳಲ್ಲಿ ಬಳಸಬಹುದು.
Steps to use the Qatar Digital ID (QDI) app for registering entry and exit through e-gates.#MOIQatar #EGates pic.twitter.com/KXg5Q0a4VF
— Ministry of Interior – Qatar (@MOI_QatarEn) January 24, 2025
ಇ-ಗೇಟ್ ಆ್ಯಪ್ ಬಳಸುವುದು ಹೇಗೆ
• ಕತಾರ್ ಡಿಜಿಟಲ್ ಐಡೆಂಟಿಟಿ ಆ್ಯಪ್ ನ್ನು ಡೌನ್‌ಲೋಡ್ ಮಾಡಿಕೊಂಡು ಲಾಗ್ ಇನ್ ಆಗಬೇಕು.
•ಆ್ಯಪ್‌ನಿಂದ ಡಿಜಿಟಲ್ ವ್ಯಾಲೆಟ್‌ನಲ್ಲಿ ಪ್ರಯಾಣ ದಾಖಲೆಯನ್ನು ಫಡೆಯಬೇಕು. ಪ್ರಯಾಣದ ದಾಖಲೆಯ ಮೇಲ್ಬಾಗದಲ್ಲಿರುವ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕ ಮುಖದ ವೆರಿಫೀಕೇಶನ್ ಮಾಡಬೇಕು.
• ಇ-ಗೇಟ್‌ನಲ್ಲಿರುವ ಸ್ಕ್ಯಾನರ್‌ನಲ್ಲಿ ಫೋನ್ ಇರಿಸುವ ಮೂಲಕ ಗುರುತನ್ನು ಪರಿಶೀಲಿಸಿದ ನಂತರ, ವಲಸೆ ಪೂರ್ಣಗೊಳ್ಳುತ್ತದೆ.
• ಆ್ಯಪ್ ಬಳಸುವ ವಿಡಿಯೋ ನೋಡಿ.
https://x.com/MOI QatarEn/status/18827







