ಕುವೈತ್ ಸಿಟಿ: ಇಸ್ರಾಅ್ ಮತ್ತು ಮಿ’ರಾಜ್ ಅಂಗವಾಗಿ ನಾಗರಿಕ ಸೇವಾ ಆಯೋಗವು ಕುವೈತ್‌ನಲ್ಲಿ ಜನವರಿ 30 ರಂದು ಸಾರ್ವಜನಿಕ ರಜೆ ಘೋಷಿಸಿದೆ. ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳಿಗೆ ಈ ದಿನ ರಜೆಯಾಗಿರುತ್ತದೆ. ಇಸ್ರಾಅ್ ಮತ್ತು ಮಿ’ರಾಜ್ ರಜೆಯನ್ನು ಸೋಮವಾರ, ಜನವರಿ 27 ರಂದು ನಿಗದಿಪಡಿಸಲಾಗಿತ್ತು, ಆದರೆ ಕ್ಯಾಬಿನೆಟ್ ನಿರ್ದೇಶನದಂತೆ ಗುರುವಾರಕ್ಕೆ ವರ್ಗಾಯಿಸಲಾಯಿತು. ಇದರೊಂದಿಗೆ, ವಾರಾಂತ್ಯದ ರಜಾದಿನಗಳನ್ನು ಒಳಗೊಂಡಂತೆ ಸತತ ಮೂರು ದಿನಗಳ ರಜೆಯು ಲಭಿಸಲಿದೆ.
ಫೆಬ್ರವರಿ 2 ರ ಭಾನುವಾರದಿಂದ ಅಧಿಕೃತ ಸಂಸ್ಥೆಗಳು ಪುನರಾರಂಭಗೊಳ್ಳಲಿವೆ ಎಂದು ನಾಗರಿಕ ಸೇವಾ ಆಯೋಗ ಹೇಳಿದೆ. ಅದೇ ಸಮಯದಲ್ಲಿ, ತುರ್ತು ಸ್ವರೂಪದ ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ರಜೆ ನಿರ್ಧರಿಸಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದರು.