ಮಸ್ಕತ್: ಒಮಾನಿ ರಿಯಾಲ್ ನ ವಿನಿಮಯ ದರ ಹೆಚ್ಚಾಗಿದೆ. ವಿನಿಮಯ ದರವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಒಮಾನ್‌ನ ವಿವಿಧ ಹಣಕಾಸು ಸಂಸ್ಥೆಗಳು ಕಳೆದ ದಿನ ಪ್ರತಿ ರಿಯಾಲ್‌ಗೆ 223.70 ರೂ. ಪಾವತಿಸಿವೆ.
‘XE ಎಕ್ಸ್‌ಚೇಂಜ್’ ಎಂಬ ಅಂತರರಾಷ್ಟ್ರೀಯ ವಿನಿಮಯ ಪೋರ್ಟಲ್ ನಲ್ಲಿ ಒಂದು ಒಮಾನ್ ರಿಯಾಲ್ ಗೆ 225 ಭಾರತೀಯ ರೂಪಾಯಿಗಳನ್ನು ತೋರಿಸಲಾಗಿದೆ. ಭಾರತೀಯ ರೂಪಾಯಿ ಮೌಲ್ಯ ಕುಸಿದಂತೆ ವಿನಿಮಯ ದರವು ದಾಖಲೆಯ ಎತ್ತರಕ್ಕೇರಿದೆ.
ಹೆಚ್ಚಿನ ವಲಸಿಗರು ತಮ್ಮ ವೇತನ ಪಡೆದ ಕೂಡಲೇ ಮನೆಗೆ ಹಣ ಕಳುಹಿಸಿದ್ದರಿಂದ ಹಣಕಾಸು ಸಂಸ್ಥೆಗಳಲ್ಲಿ ವಿಶೇಷ ಜನದಟ್ಟಣೆ ಇರಲಿಲ್ಲ. ಡಾಲರ್ ಎದುರು ರೂಪಾಯಿ ಮೌಲ್ಯ 86.68 ಕ್ಕೆ ಇಳಿದಿತ್ತು. ಕಳೆದ ಮೂರು ದಿನಗಳಲ್ಲಿ ಒಂದು ಒಮಾನಿ ರಿಯಾಲ್‌ಗೆ 222.60 ರೂ.ಗಳಷ್ಟು ದರವನ್ನು ವಿನಿಮಯ ಸಂಸ್ಥೆಗಳು ನೀಡಿತ್ತು.
ರೂಪಾಯಿ ಮೌಲ್ಯ ಕುಸಿಯುತ್ತಿದ್ದಂತೆ ಗಲ್ಫ್ ರಾಷ್ಟ್ರಗಳ ಕರೆನ್ಸಿಗಳ ಮೌಲ್ಯವು ಏರಿಕೆಯಾಗಿದೆ. ಇಂದಿನ ವಿನಿಮಯ ದರ ಪ್ರಕಾರ, ಸೌದಿ ಅರೇಬಿಯಾದ ರಿಯಾಲ್ ಒಂದಕ್ಕೆ 23.08 ರೂ. ಯುಎಇ ದಿರ್ಹಮ್ ಒಂದಕ್ಕೆ 23.57 ರೂ. ಕುವೈತ್ ದೀನಾರ್ ಒಂದಕ್ಕೆ 280.39 ರೂ. ಬಹರೈನ್ ದೀನಾರ್ ಗೆ 230.22 ರೂ ವಿನಿಮಯ ದರ ದಾಖಲಾಗಿದೆ.