ದುಬೈ: ಯುಎಇಯಲ್ಲಿ ವಿಧವೆಯರು ಮತ್ತು ವಿವಾಹ ವಿಚ್ಛೇದಿತ ಮಹಿಳೆಯರಿಗೆ ಒಂದು ವರ್ಷದ ವೀಸಾ ಒದಗಿಸಲು ನಿರ್ಧರಿಸಿದೆ. ಕಳೆದ ವಾರ ಶಾಸಕಾಂಗ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಗಂಡನ ಸಾವಿನ ದಿನಾಂಕದಿಂದ ಒಂದು ವರ್ಷದದ ವರೆಗೆ ವಿಧವೆಯರಿಗೆ ಮತ್ತು ವಿಚ್ಛೇದಿತ ದಿನಾಂಕದಿಂದ ಒಂದು ವರ್ಷದ ವರೆಗೆ ವಿವಾಹ ವಿಚ್ಛೇದಿತ ಮಹಿಳೆಗೆ ವೀಸಾ ಅವಧಿಯನ್ನು ವಿಸ್ತರಿಸಲಾಗುವುದು. ಇದಕ್ಕೆ ಪ್ರಾಯೋಜಕತ್ವದ ಅಗತ್ಯವಿರುವುದಿಲ್ಲ. ಮತ್ತು ಅವರ ಮಕ್ಕಳು ಕೂಡ ಇದರ ಪ್ರಯೋಜನ ಪಡೆಯಲಿದ್ದಾರೆ.
ವಿಧವೆಯರು, ವಿಚ್ಛೇದಿತರು ಮತ್ತು ಅವರ ಮಕ್ಕಳಿಗೆ ಸಾಮಾಜಿಕ-ಆರ್ಥಿಕ ಸ್ಥಿತಿಗಳನ್ನು ಸುಧಾರಿಸುವ ಸಲುವಾಗಿ ಈ ಯೋಜನೆ. ಈ ವರ್ಷದ ಅಂತ್ಯದ ವೇಳೆಗೆ ಈ ನಿರ್ಧಾರವನ್ನು ಜಾರಿಗೊಳಿಸಲಾಗುವುದು.ಕುಟುಂಬದಲ್ಲಿ ಸಂಭವಿಸಿದ ಹಠಾತ್ ದುರಂತದ ಪರಿಣಾಮವನ್ನು ಕಡಿಮೆ ಮಾಡಲು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಹಾಯ ಮಾಡುವುದಾಗಿದೆ ಹೊಸ ಕಾನೂನಿನ ಗುರಿ. ತಮ್ಮ ಕುಟುಂಬದ ಸಮರ್ಥನೀಯತೆ, ಆರ್ಥಿಕ ಮೇಲುಗೈಗೆ ಮರಣ ಮತ್ತು ವಿಚ್ಛೇದನದ ಮುಖಾಂತರ ತೊಡಕಾಗುತ್ತದ್ದು,ವಲಸಿಗರಿಗೆ ಈ ಕಾನೂನು ಸಹಾಯವಾಗಲಿದೆ.