ದೋಹಾ: ಒಬ್ಬರ ಪ್ರಾಯೋಜಕತ್ವದಲ್ಲಿರುವ ಕೆಲಸಗಾರನು ಮತ್ತೊಬ್ಬ ಪ್ರಾಯೊಜಕನ ಅಡಿಯಲ್ಲಿ ಅಧಿಕಾರಿಗಳಿಂದ ಯಾವುದೇ ಅನುಮತಿಯನ್ನು ಪಡೆಯದೆ ಕೆಲಸಮಾಡಿದ್ದಲ್ಲಿ 12,000 ರಿಯಾಲ್ ದಂಡ ಪಾವತಿಸಬೇಕಾಗುತ್ತದೆ,ಅಲ್ಲದೇ ಕೆಲಸಗಾರನನ್ನುಕಾನೂನು ಉಲ್ಲಂಘನೆಗಾಗಿ ಗಡೀಪಾರು ಮಾಡಲಾಗುತ್ತದೆ ಎಂದು ಸೆರ್ಚ್ ಆ್ಯಂಡ್ ಫೋಲೋ ಅಪ್ ವಿಭಾಗದ ಲೆಫ್ಟಿನೆಂಟ್ ಮುಹಮ್ಮದ್ ನಾಸರ್ ಹೇಳಿದ್ದಾರೆ.
ಈದುಲ್ ಫಿತರ್‌ಗೆ ಸಂಬಂಧಿಸಿದಂತೆ ಏಷ್ಯನ್ ಟೌನ್ನಲ್ಲಿರುವ ವಿವಿಧ ವಲಸಿಗ ಸಂಘಟನೆಗಳ ಸಹಯೋಗದೊಂದಿಗೆ ಗೃಹ ಸಚಿವಾಲಯವು ಆಯೋಜಿಸಿದ ಜಾಗೃತಿ ಅಭಿಯಾನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಕತರ್ ಗೆ ಮಾನವ ಸಾಗಣೆ ಯಾರಾದರೂ ನಡೆಸುವುದಾಗಿ ಕಂಡುಬಂದರೆ, ಅವರಿಗೆ 50,000 ರಿಯಾಲ್ ದಂಡ ವಿಧಿಸಲಾಗುವುದು. ಕತರ್ ನಲ್ಲಿ ಮಾನವ ಕಳ್ಳಸಾಗಾಣಿಕೆದಾರರಿಂದ ವಿಸಾ ಪಡೆದು ಕೆಲಸ ಮಾಡುವ ಕಾರ್ಮಿಕರನ್ನೂ ಗಡೀಪಾರು ಮಾಡಲಾಗುತ್ತದೆ.
ನಿರ್ಗಮನ ಪರವಾನಗಿಯನ್ನು ಪಡೆಯುವಲ್ಲಿ ಕಾರ್ಮಿಕರಿಗೆ ಯಾವುದೇ ತೊಂದರೆ ಇದ್ದರೆ, ಅವರು ಸಚಿವಾಲಯದ ದೂರು ಸಮಿತಿಯನ್ನು ಸಂಪರ್ಕಿಸಬೇಕು. ಪ್ರಾಯೋಜಕರೊಂದಿಗಿನ ವಿವಾದಗಳನ್ನು ಪರಿಹರಿಸಲು ಸಚಿವಾಲಯದ ಅಧೀನದಲ್ಲಿರುವ ತಾಂತ್ರಿಕ ಕಚೇರಿಗಳನ್ನು ಸಂಪರ್ಕಿಸಬೇಕು.ಕಾರ್ಮಿಕರು ನಿವಾಸವನ್ನು ತೊರೆಯುವಾಗ, ಯಾವಾಗಲೂ ಕೈಯಲ್ಲಿ ಐಡಿಯನ್ನು ಹೊಂದಿರಬೇಕು. ವಲಸಿಗರು ಐಡಿ ಇಲ್ಲದೆ ಸಂಚರಿಸಲು ಕಾನೂನು ಅನುಮತಿಸುವುದಿಲ್ಲ.ಸಂದರ್ಶನ ವೀಸಾದಲ್ಲಿ ಭೇಟಿ ಮಾಡುವವರು ಕಾಲಾವಧಿ ನಂತರ ಪ್ರತೀ ದಿನಕ್ಕೆ 200 ರಿಯಾಲ್‌ನಂತೆ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಸಾರಿಗೆ ಭದ್ರತಾ ಇಲಾಖೆಯ ಲೆಫ್ಟಿನೆಂಟ್-ಜನರಲ್ ಅಬ್ದುಲ್ ವಹೀದ್ ಗರೀಬ್ ಅಲ್-ಅನ್ಸಿ , ರಸ್ತೆ ದಾಟುವಿಕೆಯ ಕುರಿತು ತಿಳಿಯಬೇಕಾದ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.ಟ್ರಾಫಿಕ್ ಉಲ್ಲಂಘನೆ, ದಟ್ಟಣೆಯನ್ನು ನಿಯಂತ್ರಿಸಲು ದಂಡವನ್ನು ವಿಧಿಸುವುದು ಅಗತ್ಯವೆಂದು ಅವರು ವಿವರಿಸಿದರು.ನಿರಂತರ ಅರಿವು ಮೂಡಿಸುವುದು ಫಲವನ್ನು ನೀಡುತ್ತಿದೆ ಮತ್ತು ವಾಹನಗಳಿಂದಾಗಿ ಉಂಟಾಗುವ ಪಾದಚಾರಿಗಳ ಮರಣ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ ಎಂದು ಅವರು ಹೇಳಿದರು.
ರಾತ್ರಿಯಲ್ಲಿ ನಡೆದಾಡುವ ಕಾಲುನಡಿಗೆಯ ಯಾತ್ರಿಕರು ಕಡು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ. ನೀವು ಹೊಳೆಯುವ ತಿಳಿ ಬಣ್ಣಗಳನ್ನು ಹೊಂದಿದ್ದರೆ, ರಸ್ತೆಯ ದಾಟುವ ವೇಳೆ ದೂರದಿಂದಲೇ ಚಾಲಕನಿಗೆ ಅರ್ಥಮಾಡಿಕೊಂಡು ಅಪಾಯ ತಪ್ಪಿಸಲು ಸಾಧ್ಯವಾಗಬಹುದು. ಬೀದಿ ದೀಪದ ಬೆಳಕಿನಲ್ಲಿ ಮಾತ್ರ ದಾಟಬೇಕು. ಮೊಬೈಲ್ನಲ್ಲಿ ಮಾತನಾಡುತ್ತಾ ರಸ್ತೆ ದಾಟದಂತೆ ಅವರು ನೆನಪಿಸಿದರು.