ಕಳೆದ ಕೆಲವು ದಿನಗಳಿಂದ ಚರ್ಚೆಯಲ್ಲಿದ್ದ ಮುಹಮ್ಮದಿಯಾ ಉಮ್ರಾ ಹಜ್ ಟೂರ್ ನಲ್ಲಿ ಉಮ್ರಾ ಯಾತ್ರೆ ಕೈಗೊಂಡಿದ್ದ 164 ಮಂದಿ ಯಾತ್ರಾರ್ತಿಗಳು ರಿಟರ್ನ್ ಟಿಕೇಟ್ ಲಭ್ಯವಾಗದ ಕಾರಣದಿಂದ ಬಹಳಷ್ಟು ಸಮಸ್ಯೆಗೊಳಗಾಗಿದ್ದನ್ನು ಗಂಭೀರವಾಗಿ ಪರಿಗಣಿಸಿ ಪ್ರಸ್ತುತ ಗ್ರೂಪಿನ ಮಾಲಕರಾದ ಅಶ್ರಫ್ ಸಖಾಫಿ ಪರ್ಪುಂಜ ರವರನ್ನು ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಇದರ ರಾಜ್ಯ ಸಮಿತಿಯು ದಿನಾಂಕ 04/01/2025 ರಂದು ತುರ್ತಾಗಿ ರಾಜ್ಯ ಕಛೇರಿಗೆ ಕರೆದು ವಿಚಾರಣೆಗೆ ಒಳಪಡಿಸಿ ಅವರ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿರುತ್ತದೆ.
ಅವರಿಂದುಂಟಾದ ಪ್ರಮಾದದ ಗಾಂಭೀರ್ಯತೆಯನ್ನು ಹಾಗೂ ಉಮ್ರಾ ಯಾತ್ರಾರ್ಥಿಗಳಿಗೆ ಉಂಟಾದ ಕಷ್ಟನಷ್ಟಗಳ ತೀವ್ರತೆಯನ್ನು ಅವರಿಗೆ ಮನದಟ್ಟು ಮಾಡಿಕೊಟ್ಟು ಮುಂದೆಂದೂ ಇಂತಹ ತಪ್ಪು ಮಾಡದಂತೆ ತಾಕೀತು ನೀಡಲಾಗಿದೆ.
ಅಲ್ಲದೆ ಸಂಭವಿಸಿದ ತಪ್ಪಿಗಾಗಿ ಅವರು ಜನಸಾಮಾನ್ಯರಲ್ಲಿ ಹಾಗೂ ಸಂಕಷ್ಟಕ್ಕೊಳಗಾದ ಉಮ್ರಾ ಯಾತ್ರಾರ್ಥಿಗಳಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಿ ಅವರಿಗುಂಟಾದ ಆರ್ಥಿಕ ನಷ್ಟಕ್ಕೆ ಪರಿಹಾರವನ್ನು ನೀಡಬೇಕಾಗಿ ಅವರಿಂದ ಕರಾರು ಮಾಡಿ ಸಹಿ ಪಡೆದು ಕೊಳ್ಳಲಾಗಿದೆ.
ಅವರು ತನ್ನ ತಪ್ಪುಗಳನ್ನು ಸಂಪೂರ್ಣವಾಗಿ ಒಪ್ಪಿ ಮುಂದೆಂದೂ ಇಂತಹ ತಪ್ಪುಗಳು ಸಂಭವಿಸದಂತೆ ಜಾಗ್ರತೆ ವಹಿಸುವುದಾಗಿಯೂ ಒಪ್ಪಿ ಕೊಂಡಿರುತ್ತಾರೆ.
ಅಧ್ಯಕ್ಷರು ಹಾಗೂ ಸರ್ವ ಸದಸ್ಯರು
ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಮಂಗಳೂರು.