ದುಬೈ: ಪ್ರಯಾಣಿಕರ ಲಗೇಜ್ನಿಂದ ನಗದು ಮತ್ತು ಮೊಬೈಲ್ ಫೋನ್‌ಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವುಗೈದ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಮಿಕನಿಗೆ ಶಿಕ್ಷೆ ವಿಧಿಸಲಾಗಿದೆ.
ದುಬೈ ಫಸ್ಟ್ ಇನ್ಸ್ಟಾನ್ಸ್ ನ್ಯಾಯಾಲಯವು 27 ವರ್ಷದ ನೇಪಾಳಿ ಪ್ರಜೆಗೆ ಮೂರು ತಿಂಗಳ ಶಿಕ್ಷೆ ವಿಧಿಸಿದೆ. ಶಿಕ್ಷೆ ಅನುಭವಿಸಿದ ನಂತರ ಆತನನ್ನು ಗಡೀಪಾರು ಮಾಡುವಂತೆ ತೀರ್ಪು ನೀಡಲಾಗಿದೆ. ಕಳವು ಮಾಡಲಾದ ಮೊಬೈಲ್ ಫೋನ್ ಮತ್ತಿತರ ವಸ್ತುಗಳ ಮೌಲ್ಯದ ಮೇಲೆ ದಂಡ ಪಾವತಿಸುವಂತೆಯೂ ಆದೇಶ ನೀಡಲಾಗಿದೆ.
ಈತ ಪ್ರಯಾಣಿಕರ ಲಗ್ಗೇಜ್‌ಗಳನ್ನು ಸಾಗಣೆ ಮಾಡುತ್ತಿದ್ದ ಎಂದು ಪಬ್ಲಿಕ್ ಪ್ರಾಸಿಕ್ಯೂಷನ್ ತಿಳಿಸಿದೆ. ಈ ಮಧ್ಯೆ ಚೀಲದಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾನೆ. ಕಳೆದ ವರ್ಷ ಸೆಪ್ಟೆಂಬರ್ ನಿಂದ ಫೆಬ್ರವರಿ ವರೆಗೆ ಈ ಕೆಲಸ ಮುಂದುವರೆದಿದೆ ಎಂದು ದಾಖಲೆಗಳು ಹೇಳುತ್ತವೆ. ಫೆಬ್ರವರಿ 28 ರಂದು 1.30 ಕ್ಕೆ ಚೀಲವೊಂದನ್ನು ತೆರೆಯುತ್ತಿದ್ದಾಗ ಭದ್ರತಾ ಅಧಿಕಾರಿ ಅವನನ್ನು ಮಾಲುಸಮೇತ ಬಂಧಿಸಿ, ಪ್ರಶ್ನಿಸಿದಾಗ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ನಂತರ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.ಈ ಹಿಂದೆ ಕಳವು ಗೈದಿರುವ ಬಗ್ಗೆ ಪೊಲೀಸರು ವಿಚಾರಿಸಿದಾಗ ನಿರಾಕರಿಸಿದ, ಆದರೆ ದೇಹ ಪರಿಶೋಧನೆ ನಡೆಸಿದಾಗ, ಲೆಬನೀಸ್ ಕರೆನ್ಸಿಗೆ ಸಂಬಂಧಿಸಿದ ದಾಖಲೆ ದೊರೆಯಿತು. ಈ ಕುರಿತು ವಿಚಾರಿಸಿದಾಗ, ಚೀಲದಿಂದ ಅವನು ಕದ್ದಿದ್ದನೆಂಬುದು ಸ್ಪಷ್ಟವಾಯಿತು. ಪ್ರಯಾಣಿಕರ ಮೊಬೈಲ್ ಫೋನ್ ಗಳನ್ನು ಕಂಪನಿಯ ಅಲ್-ಮಶೈನದಲ್ಲಿ ಅಡಗಿಸಿರುವುದನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ತನ್ನ ವಾಸಸ್ಥಳವನ್ನು ಜಾಲಾಡಿದಾಗ ನಾಲ್ಕು ಮೊಬೈಲ್ ಫೋನ್ ಗಳು ಮತ್ತು 14 ದೇಶಗಳ ನಾಣ್ಯಗಳನ್ನು ಕಂಡುಕೊಂಡರು.