ದುಬೈ: ಮೆಟ್ರೋ ಯಾತ್ರಿಕರಿಗೆ ಅತಿವೇಗದ ವೈ ಫೈ ಸೌಲಭ್ಯ ದೊರಕಲಿದೆ. ದುಬೈ ರೋಡ್ಸ್ ಮತ್ತು ಸಾರಿಗೆ ಪ್ರಾಧಿಕಾರವು (ಮೆಟ್ರೊ) ಯಾತ್ರಿಕರೊಂದಿಗೆ ನಡೆಸಿದ ಲೈವ್ ಚಾಟ್ ಸೆಷನ್ಸ್ ನಂತರ ಈ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ.ದುಬೈ ಮೆಟ್ರೋದಲ್ಲಿ ವೈ-ಫೈ ಸೌಲಭ್ಯವನ್ನು ವೇಗಗೊಳಿಸಲು ಮತ್ತು ಹೆಚ್ಚಿನ ಸೇವೆಗಳನ್ನು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು RTA ಕೌನ್ಸಿಲ್ ತಿಳಿಸಿದೆ.
ಮೆಟ್ರೊದ ಬಾಗಿಲುಗಳನ್ನು ತೆರೆದಿಡುವ ಸಮಯವನ್ನು ವಿಸ್ತರಿಸುವಂತೆಯೂ ಅಭಿಪ್ರಾಯ ಕೇಳಿ ಬಂದಿದೆ, ಬ್ಯುಸಿ ಸಮಯದಲ್ಲಿ ಹೆಚ್ಚಿನ ಪ್ರಯಾಣಿಕರಿಗೆ ಪ್ರಯಾಣಿಸಲು ಇದು ಸಹಾಯವಾಗಲಿದೆ,ಅಲ್ಲದೇ ಪ್ರತ್ಯೇಕ ನಿಗಾ ವಹಿಸಬೇಕಾದ ಯಾತ್ರಿಕರಿಗೆ ಅನುಕೂಲವಾಗಲಿದೆ ಎಂದು ಪ್ರಯಾಣಿಕರು ಅಭಿಪ್ರಾಪಟ್ಟಿದ್ದಾರೆ. ‘ಆರ್ಟಿಎ ಜೊತೆ ಚಾಟ್’ ಯೋಜನೆಯ ಭಾಗವಾಗಿ, ಉನ್ನತ ಅಧಿಕಾರಿಗಳು ತಮ್ಮ ಸೇವೆಗಳನ್ನು ಸುಧಾರಿಸುವ ಸಲುವಾಗಿ ಎರಡು ಗಂಟೆಗಳವರೆಗೆ ಪ್ರಯಾಣಿಕರ ನಿರ್ದೇಶನವನ್ನು ಪಡೆದರು.