ಚಿಕ್ಕಮಗಳೂರು ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಜಾಮಿಯಾ ಅರೇಬಿಯ ಕಂಝುಲ್ ಈಮಾನ್ ಸಂಸ್ಥೆಯಲ್ಲಿ 15 ವರ್ಷದ ಬಾಲಕ ಮುಹಮ್ಮದ್ ಕಲಂದರ್ ಕೇವಲ 45 ದಿನಗಳ ಅವಧಿಯಲ್ಲಿ ಪವಿತ್ರ ಖುರ್ಆನ್ ಸಂಪೂರ್ಣವಾಗಿ ಕಂಠಪಾಠ ಮಾಡಿ ಇತಿಹಾಸ ಸೃಷ್ಟಿಸಿದ್ದಾನೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ತಿಳಿಸಿದ್ದಾರೆ.
ಈ ಮೂಲಕ ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಜ್ವಿ ರವರ ಸದರಿ ವಿದ್ಯಾರ್ಥಿಯು ಹಾಸನ ಮೂಲದವನಾಗಿದ್ದು ತಂದೆಯನ್ನು ಕಳೆದುಕೊಂಡ ಅನಾಥ ಬಾಲಕ ತಾಯಿಯು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಈ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಶಾಹೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಸಹಯೋಗದೊಂದಿಗೆ ನಡೆಸಲಾಗುತ್ತಿರುವ ಹೈಸ್ಕೂಲ್ ವಿದ್ಯಾಬ್ಯಾಸದೊಂದಿಗೆ ಕೇವಲ 45 ದಿನಗಳಲ್ಲಿ ಖುರ್ಆನ್ ಸಂಪೂರ್ಣವಾಗಿ ಕಂಠಪಾಠ ಮಾಡಿ ಇತಿಹಾಸ ನಿರ್ಮಿಸಿರುವುದು ಪ್ರಪಂಚದಲ್ಲಿ ಪ್ರಥಮ ವಿದ್ಯಾರ್ಥಿಯಾಗಿರುವ ಬಾಲಕನಿಗೆ ಹಲವಾರು ಮದ್ರಸಗಳಿಂದ ಹಾಗೂ ದೇಶಾದ್ಯಂತ ಧರ್ಮಗುರುಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಹಾಗು ಸಂಸ್ಥೆಯ ಅಧ್ಯಕ್ಷರಾದ ಅಲ್ ಹಾಜ್ ಮೊಹಮ್ಮದ್ ಶಾಹಿದ್ ರಜ್ವಿ ರವರು ಬಾಲಕನಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಉನ್ನತ ಶಿಕ್ಷಣಕ್ಕೆ ಸಂಸ್ಥೆಯ ವತಿಯಿಂದ ಹಣಕಾಸು ನೆರವು ನೀಡುವುದಾಗಿ ಘೋಷಿಸಿದ್ದಾರೆ ಈತನಿಗೆ ದಾಖಲೆ ನಿರ್ಮಿಸಲು ಶ್ರಮಿಸಿದ ಅಧ್ಯಾಪಕರಿಗೆ ಧನ್ಯವಾದಗಳನ್ನು ಸಲ್ಲಿಸಲಾಗಿದೆ ಇದು ನಿಜಕ್ಕೂ ದೇವರ ವಿಶೇಷ ಅನುಗ್ರಹವಾಗಿದೆ ಎಂದು ತಿಳಿಸಲಾಗಿದೆ.