janadhvani

Kannada Online News Paper

ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ‘ಕಾರ್ ಶೋ’ – ವಶಪಡಿಸಿ, ನಾಮಾವಶೇಷ ಮಾಡಿದ ಅಧಿಕೃತರು

ರಸ್ತೆಯಲ್ಲಿ ಹಿಂಸಾಚಾರ ನಡೆಸುವವರ ವಿರುದ್ಧ ಇಂತಹ ಕಠಿಣ ಕ್ರಮಗಳ ಅಗತ್ಯವಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ದೋಹಾ: ರಸ್ತೆಯಲ್ಲಿ ಬೆಂಕಿ ಮತ್ತು ಹೊಗೆಯನ್ನು ಸೂಸಿ ಶೋ ನಡೆಸಿದ ಐಷಾರಾಮಿ ಕಾರನ್ನು ಕತಾರ್ ಅಧಿಕಾರಿಗಳು ವಶಪಡಿಸಿ, ಕಾನೂನು ಕ್ರಮ ಕೈಗೊಂಡಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.ರಸ್ತೆಯಲ್ಲಿ ಹಿಂಸಾಚಾರ ನಡೆಸುವವರ ವಿರುದ್ಧ ಇಂತಹ ಕಠಿಣ ಕ್ರಮಗಳ ಅಗತ್ಯವಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಜೀವ, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಅಪಾಯವನ್ನುಂಟುಮಾಡುವ ಅಜಾಗರೂಕ ಚಾಲನೆಗಾಗಿ ಸಕ್ಷಮ ಅಧಿಕಾರಿಗಳು ವಾಹನವನ್ನು ವಶಪಡಿಸಿ, ಅದರ ಚಾಲಕನನ್ನು ಬಂಧಿಸಿದ್ದರು. ಇದರ ವಿಡಿಯೋವನ್ನು ಕೂಡ ಎಕ್ಸ್ ನಲ್ಲಿ ಶೇರ್ ಮಾಡಿದ್ದಾರೆ.


ಇದರ ಪರಿಣಾಮವಾಗಿ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಂಗ ತೀರ್ಪು ನೀಡಿತು. ಕಾರನ್ನು ಸಂಪೂರ್ಣವಾಗಿ ನಾಮಾವಶೇಷ ಮಾಡಲಾಯಿತು. ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ಕಾನೂನು ಮತ್ತು ನಿಯಮಗಳನ್ನು ಜಾರಿಗೊಳಿಸುವ ತನ್ನ ಬದ್ಧತೆಯನ್ನು ದೃಢಪಡಿಸುತ್ತದೆ ಎಂದು ಆಂತರಿಕ ಸಚಿವಾಲಯ ಎಕ್ಸ್ ನಲ್ಲಿ ಹೇಳಿಕೊಂಡಿದೆ.

error: Content is protected !! Not allowed copy content from janadhvani.com