ಪುತ್ತೂರು: “ಸತ್ಪಥದ ಸಂಕಲ್ಪ” ಎಂಬ ಘೋಷವಾಕ್ಯದೊಂದಿಗೆ ಜನವರಿ 1 ರಿಂದ ಜನವರಿ 20ರ ತನಕ ರಾಜ್ಯಾದ್ಯಂತ ಎಸ್ ವೈ ಎಸ್ ನ ಸದಸ್ಯತ್ವ ಸಡಗರ ಅಭಿಯಾನ ನಡೆಯಲಿದ್ದು ಇದರ ಯಶಸ್ವಿಗೆ ಜಿಲ್ಲಾ ಸೆಲೆಕ್ಷನ್ ಟೀಮನ್ನು ಎಸ್ ವೈ ಎಸ್ ದಕ ಜಿಲ್ಲಾ ಈಸ್ಟ್ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಳ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು.
ಚೇರ್ಮನ್ ಆಗಿ ಕೆ ವೈ ಹಂಝ ಮದನಿ ಗುರುವಾಯನಕೆರೆ ಕನ್ವೀನರಾಗಿ , ಸಲೀಂ ಕನ್ಯಾಡಿ ಸದಸ್ಯರುಗಳಾಗಿ ಸ್ವಾಲಿಹ್ ಮುರ, ಶಮ್ಸುದ್ದೀನ್ ಝಮ್ ಝಮ್, ಸಿದ್ದೀಕ್ ಮಿಸ್ಬಾಹಿ, ಉಸ್ಮಾನ್ ಸೋಕಿಲ ಆಯ್ಕೆಯಾದರು.