ದುಬೈ: ಶೈಖ್ ರಾಶಿದ್ ರಸ್ತೆಯನ್ನು ಇನ್ಫಿನಿಟಿ ಸೇತುವೆಯೊಂದಿಗೆ ಸಂಪರ್ಕಿಸುವ ಹೊಸ ಮೂರು ಪಥದ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ದುಬೈ ರಸ್ತೆಗಳು ಮತ್ತು ಸಾರಿಗೆ ಪ್ರಾಧಿಕಾರ (ಆರ್‌ಟಿಎ) ಪ್ರಕಟಿಸಿದೆ. ಶೈಖ್ ರಾಶಿದ್ ರಸ್ತೆಯಲ್ಲಿ ಶೈಖ್ ಖಲೀಫಾ ಬಿನ್ ಝಾಯಿದ್ ಸ್ಟ್ರೀಟ್ ಇಂಟರ್‌ಸೆಕ್ಷನ್‌ನಿಂದ ಅಲ್ ಮಿನಾ ಸ್ಟ್ರೀಟ್‌ನ ಫಾಲ್ಕನ್ ಇಂಟರ್‌ಚೇಂಜ್‌ವರೆಗೆ 4.8 ಕಿಮೀ ಉದ್ದದ ಅಲ್ ಶಿಂದಗಾ ಸುರಂಗ ಸುಧಾರಣೆ ಯೋಜನೆಯ ನಾಲ್ಕನೇ ಹಂತದ ಭಾಗವಾಗಿದೆ ಎಂದು ಆರ್‌ಟಿಎ ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಯೋಜನೆಯು ಗಂಟೆಗೆ 19,400 ವಾಹನಗಳ ಸಾಮರ್ಥ್ಯದೊಂದಿಗೆ ಒಟ್ಟು 3.1 ಕಿಮೀ ಉದ್ದದ ಮೂರು ಸೇತುವೆಗಳ ನಿರ್ಮಾಣವನ್ನು ಒಳಗೊಂಡಿದೆ.
ಶೈಖ್ ರಾಶಿದ್ ರಸ್ತೆಯಲ್ಲಿರುವ ಎರಡನೇ ಸೇತುವೆ, ಅಲ್ ಮಿನಾ ಇಂಟರ್‌ಸೆಕ್ಷನ್ ಅನ್ನು ಶೈಖ್ ಖಲೀಫಾ ಬಿನ್ ಝಾಯಿದ್ ಸ್ಟ್ರೀಟ್‌ನೊಂದಿಗೆ ಸಂಪರ್ಕಿಸುತ್ತದೆ, ಇದನ್ನು ಮುಂದಿನ ವರ್ಷದ ಜನವರಿ ಮೊದಲಾರ್ಧದಲ್ಲಿ ತೆರೆಯಲಾಗುವುದು.
ಹೊಸ ಸೇತುವೆಯು ಶೈಖ್ ರಾಶಿದ್ ರಸ್ತೆಯಿಂದ ಇನ್ಫಿನಿಟಿ ಸೇತುವೆಯವರೆಗೆ ಸಂಚಾರವನ್ನು ಸುಗಮಗೊಳಿಸುತ್ತದೆ, ಶೈಖ್ ಖಲೀಫಾ ಬಿನ್ ಝಾಯಿದ್ ಸ್ಟ್ರೀಟ್‌ನಿಂದ ಪ್ರಾರಂಭವಾಗಿ ಶೈಖ್ ಸಬಾಹ್ ಅಲ್ ಅಹ್ಮದ್ ಅಲ್ ಜಾಬಿರ್ ಅಲ್ ಸಬಾಹ್ ಸ್ಟ್ರೀಟ್ ನ ಅಲ್ ಮಿನಾ ಸ್ಟ್ರೀಟ್‌ಮೂಲಕ ಇನ್ಫಿನಿಟಿಯವರೆಗೆ ಮುಂದುವರಿಯುತ್ತದೆ ಎಂದು ಆರ್‌ಟಿಎ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರು ಮತ್ತು ಮಹಾನಿರ್ದೇಶಕ ಮತ್ತಾರ್ ಅಲ್ ತಾಯರ್ ಹೇಳಿದ್ದಾರೆ.