ದೋಹಾ: ಕತಾರ್ ರಾಷ್ಟ್ರೀಯ ದಿನದ ಸಂದರ್ಭದಲ್ಲಿ ಕತಾರ್ ಏರ್ವೇಸ್,ಪ್ರಯಾಣಿಕರಿಗೆ ರಿಯಾಯಿತಿಗಳನ್ನು ಘೋಷಿಸಿದೆ. ರಾಷ್ಟ್ರೀಯ ದಿನಾಚರಣೆ ಅಂಗವಾಗಿ ಎಕಾನಮಿ ಕ್ಲಾಸ್ ನಲ್ಲಿ ಪ್ರಯಾಣಿಸುವವರಿಗೆ ಮೂಲ ಟಿಕೆಟ್ ದರದ ಶೇ.30ರಷ್ಟು ಮತ್ತು ಬಿಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುವವರಿಗೆ ಮೂಲ ಟಿಕೆಟ್ ದರದ ಶೇ.20ರಷ್ಟು ರಿಯಾಯಿತಿ ಘೋಷಿಸಲಾಗಿದೆ.
ಕತಾರ್ ರಾಷ್ಟ್ರೀಯ ದಿನವಾದ ಡಿಸೆಂಬರ್ 18 ರವರೆಗೆ ಈ ರಿಯಾಯ್ತಿ ಮುಂದುವರಿಯಲಿದೆ. ವಿಶೇಷ ಕೊಡುಗೆಯನ್ನು ಪಡೆಯಲು ಈ ಅವಧಿಯಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ರಾಷ್ಟ್ರೀಯ ದಿನದ ಆಫರ್‌ನ ಭಾಗವಾಗಿ ಟಿಕೆಟ್‌ಗಳನ್ನು ಖರೀದಿಸುವವರು 26 ಡಿಸೆಂಬರ್ 2024 ಮತ್ತು 31 ಮೇ 2025 ರ ನಡುವೆ ಪ್ರಯಾಣಿಸಬೇಕು. ಕೊಡುಗೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ಕತಾರ್ ಏರ್ವೇಸ್ ವೆಬ್‌ಸೈಟ್‌ಗೆ ಭೇಟಿ ನೀಡಿ.