ಬಗ್ದಾದ್ : ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಇದರ ಇರಾಕ್ ರಾಷ್ಟ್ರೀಯ ಸಮಿತಿಯನ್ನು ಇತ್ತೀಚೆಗೆ ಅಸ್ತಿತ್ವಕ್ಕೆ ತರಲಾಯ್ತು. ಇಸ್ಲಾಮಿಕ್ ಆಧ್ಯಾತ್ಮಿಕ ನಾಯಕರಾದ ಖುತ್ಬುಲ್ ಅಖ್ತಾಬ್ ಶೈಖ್ ಮುಹ್ಯಿದ್ದೀನ್ ಅಬ್ದುಲ್ ಖಾದರ್ ಜೀಲಾನೀ ರಳಿಯಲ್ಲಾಹು ಅನ್ಹು ರವರ ಊರಾದ, ಸಾಂಸ್ಕೃತಿಕ ವಿಶುಧ್ಧಿಯ ಚರಿತ್ರೆಗಳನ್ನೊಳಗೊಂಡ ಇರಾಕ್ ನ ಮಣ್ಣಿನಲ್ಲಿ ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ AP ಉಸ್ತಾದರ ಸಾನಿಧ್ಯದಲ್ಲಿ KCF ಇರಾಕ್ ಗೆ ಚಾಲನೆ ನೀಡಲಾಯಿತು. ವಿಶ್ವಾದ್ಯಂತ ಎಂಟು ರಾಷ್ಟ್ರಗಳಲ್ಲಿ ಈಗಾಗಲೇ ಸಕ್ರೀಯವಾಗಿ ಕಾರ್ಯಾಚರಿಸುತ್ತಿರುವ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ನ ಒಂಬತ್ತನೇ ರಾಷ್ಟ್ರೀಯ ಸಮಿತಿಯಾಗಿ ಕೆಸಿಎಫ್ ಇರಾಕ್ ಅಸ್ತಿತ್ವಕ್ಕೆ ಬಂದಿದೆ.
ಇರಾಕ್ ಕೆಸಿಎಫ್ ನ ಪದಾಧಿಕಾರಿಗಳ ಘೋಷಣೆಯನ್ನು ಡಿ.04-2024 ರಂದು ರಾತ್ರಿ KCF IC ನಾಯಕರ ನೇತೃತ್ವದಲ್ಲಿ ಆನ್ಲೈನ್ ಮೂಲಕ ನಡೆಸಲಾಯ್ತು. ಸಯ್ಯಿದ್ ಆಬಿದ್ ತಂಙಳ್(ಶಿಕ್ಷಣ ಇಲಾಖೆ KCF IC) ಅವರ ದುಆ ಮೂಲಕ ಆರಂಭಗೊಂಡು , IC ಅಧ್ಯಕ್ಷರಾದ ಡಿಪಿ ಯೂಸುಫ್ ಸಖಾಫಿ ಬೈತಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಲೀಲ್ ನಿಝಾಮಿ (ಅಧ್ಯಕ್ಷರು ಆರ್ಗನೈಝನ್ ಇಲಾಖೆ KCF IC) ಅವರು ಉದ್ಘಾಟಿಸಿದರು. ಕೆಸಿಎಫ್ IC ಪ್ರ.ಕಾರ್ಯದರ್ಶಿ ಹಮೀದ್ ಈಶ್ವರಮಂಗಲ ಮುಖ್ಯ ಅತಿಥಿಯಾಗಿ ಆಗಮಿಸಿ ನೂತನ ಸಮಿತಿಗೆ ಶುಭ ಹಾರೈಸಿದರು. ಕೆಸಿಎಫ್ IC ಕ್ಯಾಬಿನೆಟ್ ನಾಯಕರು, IC ಎಕ್ಸಿಕ್ಯೂಟಿವ್ ನಾಯಕರು ಹಾಗೂ ರಾಷ್ಟ್ರೀಯ ಸಮಿತಿ ನಾಯಕರು ಪಾಲ್ಗೊಂಡು ನೂತನ ಸಮಿತಿಗೆ ಶುಭ ಹಾರೈಸಿದರು. IC ಅಧ್ಯಕ್ಷರಾದ ಡಿಪಿ ಯೂಸುಫ್ ಸಖಾಫಿ ಬೈತಾರ್ ಅವರು ನೂತನ ಸಮಿತಿಯ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು.
ನೂತನ ಸಮಿತಿಯ ಪದಾಧಿಕಾರಿಗಳು
ಅಧ್ಯಕ್ಷರು: ಪಿ.ಕೆ.ಮಸ್ಊದ್ ಅಲಿ ಕಿನ್ಯಾ
ಪ್ರ.ಕಾರ್ಯದರ್ಶಿ: ಹಸೈನಾರ್ ಬದ್ರಿಯಾ ನಗರ್ ಕಿನ್ಯಾ
ಕೋಶಾಧಿಕಾರಿ: ಉಮರ್ ಸಂಕೇಶ್ ದೆಮ್ಮಲೆ.
ಆಡಳಿತ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ
ಅಧ್ಯಕ್ಷರು:ಪಿ.ಕೆ.ಸಈದ್ ಕಿನ್ಯಾ
ಕಾರ್ಯದರ್ಶಿ: ಸಿದ್ದೀಕ್ ಪಾವೂರು
ಶಿಕ್ಷಣ ಇಲಾಖೆ:
ಅಧ್ಯಕ್ಷರು: ಝೈನುದ್ದೀನ್ ಬಿಸಿ ರೋಡ್
ಕಾರ್ಯದರ್ಶಿ: ಖಲೀಲ್ ಕುಡ್ತಮುಗೇರು
ಸಾಂತ್ವನ ಇಲಾಖೆ:
ಅಧ್ಯಕ್ಷರು: ಅಶ್ರಫ್ ಪಂಜಿಕ್ಕಲ್ ಇರಾ
ಕಾರ್ಯದರ್ಶಿ:ಫಾರೂಖ್ ಕಾಪಿಕ್ಕಾಡ್,ಕುಕ್ಕಾಜೆ
ಇಹ್ಸಾನ್ ಇಲಾಖೆ:
ಅಧ್ಯಕ್ಷರು: ಅಬ್ದುರ್ರಹ್ಮಾನ್ ಮಾವಿನಕಟ್ಟೆ, ನಾಟೆಕಲ್
ಕಾರ್ಯದರ್ಶಿ: ಮೂಸಾ ತಮೀಮ್
ಪ್ರಕಾಶನ ಇಲಾಖೆ:
ಅಧ್ಯಕ್ಷರು: ಅಬ್ದುಲ್ಲಾಹ್ ಜಾಬಿರ್ ಕುಂತೂರು
ಕಾರ್ಯದರ್ಶಿ: ಮಅ್ ಸೂಮ್ ಕಿನ್ಯಾ
ಹಾಗೂ ಮುಹಮ್ಮದ್ ಸಾಹೇಬ್ ಕುಂದಾಪುರ , ಔಸಾಫ್ ಕಿನ್ಯಾ, ಅಲ್ಫಾಝ್ ದೆಮ್ಮಲೆ, ಫಾಯಿಝ್ ಕಿನ್ಯಾ , ಅಶ್ರಫ್ ಬಾಕಿಮಾರ್ ಮುಂತಾದವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಪಿ.ಕೆ.ಮಸ್ಊದ್ ಅಲಿ ಕಿನ್ಯಾ ಸ್ವಾಗತಿಸಿ , ಝೈನುದ್ದೀನ್ ಬಿಸಿ ರೋಡ್ ಕೊನೆಯಲ್ಲಿ ಧನ್ಯವಾದ ಸಲ್ಲಿಸಿದರು.