ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ವತಿಯಿಂದ ಸಂಘಟನೆಯ 2025-27ನೇ ಸಾಲಿನ ಸದಸ್ಯತ್ವ ಹಾಗೂ ಪುನರ್ರಚನೆ ಪ್ರಕ್ರಿಯೆ ಮಾಹಿತಿ ಕಾರ್ಯಾಗಾರ ಬಿಸಿ ರೋಡ್ ಸಾಗರ್ ಆಡಿಟೋರಿಯಂನಲ್ಲಿ ನಡೆಯಿತು.
ಈ ಕಾರ್ಯಾಗಾರದಲ್ಲಿ ಸಂಘಟನೆಯ ವಿವಿಧ ಘಟಕಗಳ ನಾಯಕರು , ಎಸ್ ವೈ ಎಸ್ ಆಯ್ದ ಪ್ರತಿನಿಧಿಗಳು ಭಾಗವಹಿಸಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್
ರಾಜ್ಯ ಉಪಾಧ್ಯಕ್ಷ ಪಿ ಪಿ ಅಹ್ಮದ್ ಸಖಾಫಿ ಅಧ್ಯಕ್ಷ ತೆಯಲ್ಲಿ ನಡೆದ ಕಾರ್ಯಕ್ರಮ ವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಅಬೂಸುಫ್ಯಾನ್ ಮದನಿ ಉದ್ಘಾಟಿಸಿದರು.
ವಿವಿಧ ವಿಷಯಗಳಲ್ಲಿ ಎಸ್ ಪಿ ಹಂಝ ಸಖಾಫಿ , ಡಾ ಝೈನೀ ಕಾಮಿಲ್,ಅಬ್ದುಲ್ ಹಮೀದ್ ಬಜಪೆ ತರಗತಿಗಳನ್ನು ನಡೆಸಿದರು. ಸೆಯ್ಯಿದ್ ಎಸ್ ಎಂ ತಂಙಳ್ ಉಜಿರೆ, ಶರ್ಪುದ್ದೀನ್ ತಂಙಳ್ ಪಡ್ಡಂದಡ್ಕ, ಜಿ ಎಂ ಕಾಮಿಲ್ ಸಖಾಫಿ, ಯೂಸುಫ್ ಹಾಜಿ ಚಿಕ್ಕಮಗಳೂರು ಅಬೂಬಕ್ಕರ್ ಹಾಜಿ ಉಡುಪಿ, ಮುಹಮ್ಮದ್ ಹಾಜಿ ಮಡಿಕೇರಿ,ನವಾಝ್ ಅಂಕೋಲಾ, ಅಶ್ರಫ್ ಸಅದಿ ಮಲ್ಲೂರು, ಕೆ ಎಚ್ ಇಸ್ಮಾಯಿಲ್ ಸಅದಿ ಬೆಂಗಳೂರು, ಅಬ್ದುಲ್ ರಹ್ಮಾನ್ ಹಾಜಿ ಅರಿಯಡ್ಕ, ಆಲಿಕುಂಞ ಪಾರೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಬ್ದುಲ್ ಹಫೀಳ್ ಸಅದಿ ಸ್ವಾಗತಿಸಿದರು .ಎಂ ಬಿ ಮುಹಮ್ಮದ್ ಸಾದಿಕ್ ಮಲೆಬೆಟ್ಟು ಕಾರ್ಯಕ್ರಮ ಸಂಯೋಜಿಸಿದರು. ಅಶ್ರಫ್ ಕಿನಾರ ವಂದಿಸಿದರು.