ಬೊಳಂತೂರು: ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಮುಚ್ಚೂರು ನೀರುಡೆ ಇದರ ವತಿಯಿಂದ ಮರ್ಹೂಂ ಸುರಿಬೈಲ್ ಉಸ್ತಾದ್ ಆಂಡ್ ನೇರ್ಚೆ ಹಾಗೂ ಸಅದಿಯ್ಯ ಸಮ್ಮೇಳನದ ಪ್ರಚಾರಾರ್ಥ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಅಕ್ಷಯ ಬ್ಲಡ್ ಡೋನರ್ಸ್ ಇದರ 35ನೇ ರಕ್ತದಾನ ಶಿಬಿರವನ್ನು ಝಕರಿಯಾ ನಾರ್ಶ ಇವರ ಅಧ್ಯಕ್ಷತೆಯಲ್ಲಿ ನ.10 ರಂದು ಎನ್ ಸಿ ರೋಡ್ ಜಂಕ್ಷನ್ ನಲ್ಲಿ ನಡೆಸಲಾಯಿತು.
ಕರ್ನಾಟಕ ರಾಜ್ಯ ಎಸ್ ವೈ ಎಸ್ ಇಸಾಬ ಕಾರ್ಯದರ್ಶಿ ಇಬ್ರಾಹೀಂ ಕಲೀಲ್ ಮಾಲಿಕಿ ದುಃಅ ನೆರವೇರಿಸಿದರು. ಕಾರ್ಯಕ್ರಮವನ್ನು ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಕೆ ಕೆ ಶಾಹಿಲ್ ಹಮೀದ್ ಉದ್ಘಾಟಿಸಿದರು, ಸಿ ಹೆಚ್ ಮಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ ಹಾಗೂ ಸುಲೈಮಾನ್ ಸಅದಿ ಪಟ್ರಕೋಡಿ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.
ಈ ರಕ್ತದಾನ ಶಿಬಿರದಲ್ಲಿ 78 ಶಿಬಿರಾರ್ಥಿಗಳು ರಕ್ತದಾನ ಮಾಡಿ ಜೀವದಾನಿಯಾಗಿರುತ್ತಾರೆ.
ಮುಖ್ಯ ಅತಿಥಿಗಳಾಗಿ:- ಜನಪ್ರಿಯ ಪೌಂಡೇಶನ್ ನ ಚಯರ್ ಮ್ಯಾನ್ ಡಾ. ಬಶೀರ್ , ಕಾಂಗ್ರೆಸ್ ನ ವಕ್ತಾರ ಚಿತ್ತರಂಜನ್ ಶೆಟ್ಟಿ ಬೊಂಡಾಲ , ಎಸ್ ಎಸ್ ಎಫ್ ರಾಜ್ಯ ಮೀಡಿಯ ಕಾರ್ಯದರ್ಶಿ ಇರ್ಷಾದ್ ಹಾಜಿ ಗೂಡಿನಬಳಿ , ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಬ್ರಾಹೀಂ ಮಂಚಿ, ಸಮಾಜ ಸೇವಕ ಶಾರೂಕ್ ಕಾರಾಜೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಅಶ್ರಫ್ ಸಾಲೆತ್ತೂರು, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಬಿ.ಯಂ. ಅಬ್ಬಾಸಾಲಿ, ಬೊಳಂತೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಚಂದ್ರ ಶೇಖರ ರೈ ನಾರ್ಶ , ಬೊಳಂತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಯಾಕೂಬ್ ದಂಡೆಮಾರ್, ಪರ್ತಿಪ್ಪಾಡಿ ಜುಮಾ ಮಸೀದಿ ಅಧ್ಯಕ್ಷ ಹಕೀಂ ಪರ್ತಿಪ್ಪಾಡಿ, ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಅಬೂಬಕ್ಕರ್ ವಿಟ್ಲ, ನೆಲ್ಲಿಗುಡ್ಡೆ ಜುಮಾ ಮಸೀದಿಯ ಕಾರ್ಯದರ್ಶಿ ಮುಸ್ತಖ್ ಬೇಗ್, ಎಸ್ ಎಂ ಎ ಬಂಟ್ವಾಳ ಝೋನ್ ಅಧ್ಯಕ್ಷ ಸಿ.ಹೆಚ್ ಅಬೂಬಕ್ಕರ್ , ಬುಸ್ತಾನುಲ್ ಉಲೂಮ್ ಮದರಸ ಕೆ ಪಿ ಬೈಲ್ ಅಧ್ಯಕ್ಷ ಮುತ್ತಲಿಬ್ ಹಾಜಿ ನಾರ್ಶ, ಬಡಕಬೈಲ್ ಜುಮಾ ಮಸೀದಿ ಖತೀಬರಾದ ಡಿ.ಯಸ್ ಅಬ್ದುಲ್ ರಹಿಮಾನ್ ಮದನಿ , ಇಕ್ಬಾಲ್ ನಂದಾವರ, ಎಸ್ ವೈ ಎಸ್ ಬೊಳಂತೂರು ಸೆಂಟರ್ ಕಾರ್ಯದರ್ಶಿ ಅಶ್ರಫ್ ನಾರ್ಶ, ಎಸ್ ವೈ ಎಸ್ ಮಂಚಿ ಇಸಾಬ ಕಾರ್ಯದರ್ಶಿ ಹಂಝ ಮಂಚಿ, ಮಂಚಿ ಬೈಲ್ ಸದರ್ ಮುಅಲ್ಲಿಮ್ ಅಕ್ಬರ್ ಅಲಿ ಮದನಿ , ಬೊಳಂತೂರು ಗ್ರಾಮ ಪಂಚಾಯತ್ ಸದಸ್ಯ ಅನ್ಸಾರ್ ಬಿ ಜಿ , ಕೊಳ್ನಾ ಡು ಗ್ರಾಮ ಪಂಚಾಯತ್ ಸದಸ್ಯ ಹಮೀದ್ ಸುರಿಬೈಲ್ , ರಝಾಕ್ ಸಿ ಹೆಚ್ ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ಇದರ ಕಾರ್ಯಾಧ್ಯಕ್ಷ ಶಾಕೀರ್ ಬಡಕಬೈಲ್ , ಯುವ ಕಾಂಗ್ರೆಸ್ ಮುಖಂಡ ಬಾತೀಶ್ ಅಳಕೆಮಜಲು, ಎಸ್ ಎಸ್ ಎಫ್ ಸುರಿಬೈಲ್ ಸೆಕ್ಟರ್ ಸದಸ್ಯ ಹಕೀಂ ಜೌವ್ಹರಿ , ಸೆರ್ಕಳ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶ್ರಫ್ ಸೆರ್ಕಳ, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ಇದರ ಕೋಶಾಧಿಕಾರಿ ಲತೀಫ್ ಪರ್ತಿಪ್ಪಾಡಿ, ಮೀಡಿಯ ಕಾರ್ಯದರ್ಶಿ ಫೈಝಲ್ ಝುಹುರಿ, ಸಾಂತ್ವಾನ ಕಾರ್ಯದರ್ಶಿ ಅಲ್ತಾಫ್ ಶಾಂತಿಬಾಗ್ , ಹಿರಿಯರಾದ ಅಬ್ದುಲ್ ಖಾದರ್ ಕೊಕ್ಕಪ್ಪುಣಿ, ಜಯರಾಜ್ ಎನ್ ಸಿ ರೋಡ್, ಹಮೀದ್ ಟೈಲರ್ ಎನ್ ಸಿ ರೋಡ್, ತಾಜುಲ್ ಉಲಮಾ ಮದ್ರಸ ಅಧ್ಯಕ್ಷ ಅಬ್ದುಲ್ಲಾ ನಾರಂಕೋಡಿ, ಎಸ್ ವೈ ಎಸ್ ಬೊಳಂತೂರು ಸರ್ಕಲ್ ಅಧ್ಯಕ್ಷ ಶರೀಫ್ ಸಅದಿ ಬಾರೆಬೆಟ್ಟು, ಎಸ್ ಎಂ ಎ ಬೊಳಂತೂರು ರೀಜನಲ್ ಸದಸ್ಯ ರಫೀಕ್ ನಾರ್ಶ, ರಹ್ಮಾನಿಯ ಜುಮಾ ಮಸೀದಿಯ ಕಾರ್ಯದರ್ಶಿ ರಫೀಕ್ ಮಾಡದಬಳಿ, ಅಬ್ದುಲ್ ಖಾದರ್ ಮುಸ್ಲಿಯಾರ್ ಬೊಳಂತೂರು , ಅಬ್ದುಲ್ ಹಮೀದ್ ಲತೀಫ್ ಬೊಳಂತೂರು , ಅಬ್ದುಲ್ ಹಮೀದ್ ಮುಸ್ಲಿಯಾರ್ ಸುರಿಬೈಲ್ ಹಾಗೂ ಯೂಸುಫ್ ಮದನಿ ಬೊಳಂತೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಜನಪ್ರಿಯ ಪೌಂಡೇಶನ್ ಚಯರ್ ಮೆನ್ ಡಾ. ಅಬ್ದುಲ್ ಬಶೀರ್ , ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಅಶ್ರಫ್ ಸಾಲೆತ್ತೂರು , ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಬ್ರಾಹೀಂ , ದ.ಕ ಜಿಲ್ಲಾ ಅಲ್ಪಸಂಖ್ಯಾತ ಘಟಕ ಅಧ್ಯಕ್ಷರಾದ ಕೆ ಕೆ ಶಾಹುಲ್ ಹಮೀದ್ , ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ ಅವರನ್ನು ಸನ್ಮಾನಿಸಲಾಯಿತು.
ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ವತಿಯಿಂದ ಸ್ನೇಹ ಫ್ರೆಂಡ್ಸ್ ತಂಡಕ್ಕೆ ಶಾಕೀರ್ ಬಡಕಬೈಲ್ ಇವರಿಂದ ಮಿನಿ ಒಲಂಪಿಕ್ಸ್ ಕಬಡ್ಡಿ ತಂಡಕ್ಕೆ ಟಿ ಶರ್ಟ್ , ಸೆವನ್ ಸ್ಟಾರ್ ಸ್ಪೋರ್ಟ್ಸ್ ವತಿಯಿಂದ ಬಂಟ್ವಾಳದ ತೌಹೀದ್ ಇಂಗ್ಲಿಷ್ ಮೀಡಿಯಂ ಕಬಡ್ಡಿ ತಂಡಕ್ಕೆ ಟಿ ಶರ್ಟ್ ನ್ನು ನೀಡಲಾಯಿತು ಹಾಗೂ ಅರ್ಹ ಫಲಾನುಭವಿಯಾದ ಮಹಿಳೆಗೆ ವೀಲ್ ಚಯರ್ ನ್ನು ವಿತರಿಸಲಾಯಿತು.
ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ಇದರ ಸಂಚಾಲಕ ಇಬ್ರಾಹೀಂ ಕರೀಂ ಕದ್ಕಾರ್ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ವಂದಿಸಿ , ನೌಫಲ್ ಕಾರ್ಯಕ್ರಮವನ್ನು ನಿರೂಪಿಸಿದರು.