janadhvani

Kannada Online News Paper

ಒಮಾನ್ : ಅಕ್ರಮ ಕಾರ್ಮಿಕರ ಪತ್ತೆಗಾಗಿ ಕಠಿಣ ತಪಾಸಣೆ-ಅಕ್ಟೋಬರ್‌ನಲ್ಲಿ 658 ವಲಸಿಗರ ಬಂಧನ

ಸಚಿವಾಲಯದ ತಪಾಸಣೆ ಅಭಿಯಾನವು ಒಮಾನ್‌ ವಿಷನ್ 2040 ರ ಉದ್ದೇಶಗಳಿಗೆ ಅನುಗುಣವಾಗಿ ಕಾರ್ಮಿಕ ಮಾರುಕಟ್ಟೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ

ಮಸ್ಕತ್: ಅಕ್ರಮ ಕಾರ್ಮಿಕರ ಪತ್ತೆಗಾಗಿ ಒಮಾನ್‌ನಲ್ಲಿ ತಪಾಸಣೆ ಮುಂದುವರೆದಿದೆ. ಕಾರ್ಮಿಕ ಇಲಾಖೆ ಮತ್ತು ಜಂಟಿ ತಪಾಸಣಾ ತಂಡದಿಂದ ತಪಾಸಣೆ ನಡೆಸಲಾಗಿದೆ. ಕಾರ್ಮಿಕ ಇಲಾಖೆ ಮತ್ತು ತಪಾಸಣಾ ತಂಡ ಜಂಟಿಯಾಗಿ ಕಾರ್ಮಿಕ ಮಾರುಕಟ್ಟೆಯನ್ನು ಭದ್ರಪಡಿಸಲು ಮತ್ತು ಅಕ್ರಮ ಕಾರ್ಮಿಕರನ್ನು ಪತ್ತೆಹಚ್ಚಲು ತಪಾಸಣೆಯನ್ನು ಕಠಿಣ ಗೊಳಿಸಿದೆ.

ಅಕ್ಟೋಬರ್‌ನಲ್ಲಿ, ಬಾಥಿನಾ ಗವರ್ನರೇಟ್‌ನ ವಿವಿಧ ಭಾಗಗಳಿಂದ 658 ವಲಸಿಗರನ್ನು ಬಂಧಿಸಲಾಯಿತು. 425 ಜನರು ತಮ್ಮ ನಿವಾಸ ಅವಧಿಯನ್ನು ಮೀರಿದ್ದರು, ಉದ್ಯೋಗದಾತರಲ್ಲದವರ ಬಳಿ ಕೆಲಸ ಮಾಡಿದ 68 ಜನರು ಮತ್ತು ಕೆಲಸದ ಪರವಾನಗಿ ಇಲ್ಲದೆ ಒಮಾನಿ ಉದ್ಯೋಗಗಳಲ್ಲಿ ಕೆಲಸ ಮಾಡಿದ 106 ಜನರು ಸಿಕ್ಕಿಬಿದ್ದಿದ್ದಾರೆ. ಬಂಧಿತರಲ್ಲಿ 59 ಸ್ವಯಂ ಉದ್ಯೋಗಿಗಳು ಸೇರಿದ್ದಾರೆ. 49 ಕಾರ್ಮಿಕ ಉಲ್ಲಂಘನೆಗಳನ್ನು ಪಬ್ಲಿಕ್ ಪ್ರಾಸಿಕ್ಯೂಷನ್‌ಗೆ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸಚಿವಾಲಯದ ತಪಾಸಣೆ ಅಭಿಯಾನವು ಒಮಾನ್‌ ವಿಷನ್ 2040 ರ ಉದ್ದೇಶಗಳಿಗೆ ಅನುಗುಣವಾಗಿ ಕಾರ್ಮಿಕ ಮಾರುಕಟ್ಟೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಕಾರ್ಮಿಕ ಸಚಿವಾಲಯವು ಡಿಸೆಂಬರ್‌ನಲ್ಲಿ ಭದ್ರತೆ ಮತ್ತು ಸುರಕ್ಷತೆ ನಿಗಮದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ವ್ಯವಸ್ಥೆಯನ್ನು ಬಳಸಿಕೊಂಡು, ಕಾರ್ಮಿಕ ಕಾನೂನು ಉಲ್ಲಂಘನೆಗಳ ತಪಾಸಣೆಯನ್ನು ಬಲಪಡಿಸಲಾಗಿದೆ. ತಪಾಸಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !! Not allowed copy content from janadhvani.com