ಕುವೈತ್ ಸಿಟಿ: ಕುವೈತ್‌ನ ಪಬ್ಲಿಕ್ ಅಥಾರಿಟಿ ಫಾರ್ ಮ್ಯಾನ್‌ಪವರ್ (ಪಿಎಎಂ) ತಾತ್ಕಾಲಿಕ ಸರ್ಕಾರಿ ಗುತ್ತಿಗೆಗಳಿಗೆ ಕೆಲಸದ ವೀಸಾಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದೆ. ಇದು ಹೆಚ್ಚುತ್ತಿರುವ ಕಾರ್ಮಿಕರ ಬೇಡಿಕೆಯನ್ನು ಪೂರೈಸಲು ಮತ್ತು ಸಾರ್ವಜನಿಕ ವಲಯದ ಯೋಜನೆಗಳನ್ನು ಬೆಂಬಲಿಸುವ ಒಂದು ಭಾಗವಾಗಿದೆ.
ಶೈಖ್ ಫಹದ್ ಯೂಸುಫ್ ಸೌದ್ ಅಲ್ ಸಬಾಹ್ ಅವರ ಆದೇಶ ಪ್ರಕಾರ ಸೋಮವಾರದಿಂದ ವೀಸಾಗಳನ್ನು ಮತ್ತೆ ನೀಡಲು ಆರಂಭಿಸಲಾಗಿದೆ. ಗೃಹ ವ್ಯವಹಾರಗಳ ಸಚಿವರು X ಪ್ಲಾಟ್‌ಫಾರ್ಮ್‌ನಲ್ಲಿ PAM ನ ಅಧಿಕೃತ ಖಾತೆಯ ಮೂಲಕ ಮಾಡಿದ ಪ್ರಕಟಣೆಯ ಪ್ರಕಾರ, ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಸರ್ಕಾರಿ ಒಪ್ಪಂದಗಳಿಗೆ ಈ ಕೆಲಸದ ವೀಸಾಗಳು ಅನ್ವಯಿಸುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ. ಅಲ್ಪಾವಧಿಯ ಸರ್ಕಾರಿ ನಿಯೋಜನೆಗಳಿಗಾಗಿ ನುರಿತ ಉದ್ಯೋಗಿಗಳ ಪ್ರವೇಶಕ್ಕೆ ಅನುಕೂಲವಾಗುವಂತೆ ಸೋಮವಾರದಿಂದ ವೀಸಾಗಳಿಗಾಗಿ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಲಾಗಿದೆ.