ಕೊಡಗು ಸುನ್ನಿ ವೇಲ್ಫೇರ್ (KSWA) ಸೌದಿ ರಾಷ್ಟ್ರೀಯ ಸಮಿತಿ “ವಿಶ್ವ ವಿಮೋಚನೆಯ ಹಾದಿ ಪುಣ್ಣ್ಯ ಪ್ರವಾದಿ” ಎಂಬ ಘೋಷ ವಾಖ್ಯಾದೊಂದಿಗೆ ಝೋನ್ ಮಟ್ಟದಲ್ಲಿ ಪ್ರಾರಂಭಗೊಂಡ ಮೀಲಾದ್ ಸ್ನೇಹ ಸಂಗಮಕ್ಕೆ ರಾಷ್ಟ್ರ ಮಟ್ಟದಲ್ಲಿ ಪ್ರೌಢ ಸಮಾಪ್ತಿ .
27/09/2024 ಶುಕ್ರವಾರ ಜುಮುಅ ನಂತರ ದಮ್ಮಾಮ್ ಹಾಲಿಡೈಸ್ ರೆಸ್ಟೋರೆಂಟಿನಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಯ್ಯಿದ್ ಇಲ್ಯಾಸ್ ಅಲ್ ಹೈದರೋಸಿ (SYS ಕರ್ನಾಟಕ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು) ಹಫೀಲ್ ಸಅದಿ ಕೊಳಕ್ಕೇರಿ (ಅಧ್ಯಕ್ಷರು: SYS ಕರ್ನಾಟಕ ರಾಜ್ಯ) ಯವರ ನೇತ್ರತ್ವದಲ್ಲಿ ಮೌಲಿದ್ ಮತ್ತು ಆತ್ಮೀಯ ಮಜಿಲಿಸಿನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯಾಯಿತು.
ಸಯ್ಯಿದ್ ಇಲ್ಯಾಸ್ ಅಲ್-ಹೈದರೋಸಿವರ ದುಆ ಮತ್ತು ಉದ್ಘಾಟಿನೆಯೊಂದಿಗೆ ಪ್ರಾರಂಭಗೊಂಡ ಸಮಾರೋಪ ಸಂಗಮದಲ್ಲಿ ಕೊಡಗು ಸುನ್ನಿವೇಲ್ಫೇರ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹಂಸ ಮುಸ್ಲಿಯಾರ್ ಚೋಕಂಡಳ್ಳಿ ಅಧ್ಯಕ್ಷತೆ ವಹಿದರು.
ಸಮಾವೇಷದಲ್ಲಿ ಮುಖ್ಯ ಭಾಷಣ ಮಾಡಿದ SYS ಕರ್ನಾಟಕ ರಾಜ್ಯ ಅಧ್ಯಕ್ಷರಾದ ಹಫೀಲ್ ಸಅದಿ ಕೊಳಕ್ಕೇರಿಯವರು
ಮುಂದಿನ ದಿನಗಳಲ್ಲಿ ಸಾಂತ್ವನ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು ಹಾಗು ಜಿಲ್ಲೆಯ ಬಡ ನಿರ್ಗತಿಕ ವಿಧ್ಯಾರ್ಥಿಗಳ ಉನ್ನತ ಶಿಕ್ಷಣದ ಸಹಾಯಕ್ಕೆ ಆದ್ಯತೆ ನೀಡುವಂತೆಯೂ ಕರೆ ನೀಡಿದರು .
ಅವರ ಆಹ್ವಾನದ ಮೇರೆಗೆ ಈ ಅಧ್ಯಯನ ವರ್ಷದಲ್ಲಿ ಜಿಲ್ಲೆಯಿಂದ ಒಂದು ವಿಧ್ಯಾರ್ಥಿಯ ಉನ್ನತ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸಲು ಸಭೆಯಲ್ಲಿ ತೀರ್ಮಾನಿಸಿಲಾಯಿತು..
ನಂತರ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳನ್ನು ಮತ್ತು 𝐊𝐂𝐅 ದಮ್ಮಾಮ್ ಝೋನ್ ಸಾಂತ್ವನ ವಿಂಗ್ ಚೆಯರ್ಮಾನ್ ಭಾಷ ಗಂಗಾವಳಿ,
ಸಂಘಟನೆಯ ಸ್ವಲಾತ್ ಗ್ರೂಪಿನಲ್ಲಿ ಕಳೆದ ವರ್ಷ ಅತಿ ಹೆಚ್ಚು ಸ್ವಲಾತ್ ಸಮರ್ಪಿಸಿದ ರಫೀಕ್ ತಂಙಳ್ ಮಾಲ್ದಾರೆ, ಸಮಾಜ ಸೇವಕರಾದ ಫಾರೂಕ್ 7th-ಹೊಸ್ಕೋಟೆ, ಅಝೀಝ್ ಕಲ್ಲಡ್ಕ,ಅನಿವಾಸಿ ಜೀವನಕ್ಕೆ ತಾತ್ಕಾಲಿಕ ವಿರಾಮವಿಡುವ ಅಲ್-ಹಸ್ಸಾ ಝೋನ್ ಅಧ್ಯಕ್ಷರಾದ ರಝಾಕ್ ರಂಗ ಸಮುದ್ರ ಮುಂತಾದವರನ್ನು ಸಭೆಯಲ್ಲಿ ಗೌರವಿಸಲಾಯಿತು
KCF ದಮ್ಮಾಮ್ ಝೋನ್ ಅಧ್ಯಕ್ಷರಾದ ಫಾರೂಕ್ ಮುಸ್ಲಿಯಾರ್ ಕುಪ್ಪಟ್ಟಿ, ಯೂಸುಫ್ ಸಅದಿ ಅಯ್ಯಂಗೇರಿ, ಆಬಿದ್ ಝುಹರಿ ಚೇರಂಬಾಣೆ, ಅಬ್ದುಲ್ ಅಝೀಜ್ ಕಲ್ಲಡ್ಕ, ಭಾಷ ಗಂಗಾವಳಿ ಮುಂತಾದವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು..
ರಫೀಕ್ ತಂಙಳ್ ಮಾಲ್ದಾರೆ (ರಿಯಾದ್) ಅಝೀಜ್ ನೆಲ್ಲಿಹುದಿಕೇರಿ (ಅಧ್ಯಕ್ಷರು ದಾರುನ್ನಜಾತ್ ಸೌದಿ ರಾಷ್ಟ್ರೀಯ ಸಮಿತಿ) ನಝೀರ್ ಗುಂಡಿಗರೆ (ರಿಯಾದ್) ಶಂಸುದ್ದಿನ್ ಕೊಳಕ್ಕೇರಿ (ಅಲ್ ಹಸ್ಸಾ)
ಸಯ್ಯದ್ ಶಿಹಾಬ್ ಕೊಂಡಂಗೇರಿ (ದಮ್ಮಾಮ್) ನಿಝಾಮ್ ಅಂಬಟ್ಟಿ (ದಮ್ಮಾಮ್) ಫಾರೂಕ್ 7th-ಹೊಸಕೋಟೆ (ದಮ್ಮಾಮ್) ಆದಂ ಕಂಡಕ್ಕರೆ (ದಮ್ಮಾಮ್) ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಆಬಿದ್ ಕಂಡಕ್ಕರೆ ಸ್ವಾಗತಿಸಿ ಮುಸ್ತಫ ಝೈನಿ ಕಂಬಿಬಾಣೆ ನಿರೂಪಿಸಿ ಕೊನೆಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಫೀಕ್ ನೆಲ್ಲಿಹುದಿಕೇರಿ ವಂದಿಸಿದರು