janadhvani

Kannada Online News Paper

“ಇಬ್ರಾಹೀಂ ಬ್ರೈಟ್ ಮಾರ್ಬಲ್” ಅನಿವಾಸಿ ಕನ್ನಡಿಗರ ಅಭಿಮಾನ ಕೇಂದ್ರ

✍🏻 ಎಂಕೆಎಂ ಸಖಾಫಿ ಕೊಡಂಗಾಯಿ

ಇಬ್ರಾಹೀಂ ಬ್ರೈಟ್ ಮಾರ್ಬಲ್. ಈ ಹೆಸರಿಂದು ಜಾಗತಿಕ ಮಟ್ಟದಲ್ಲೇ ಖ್ಯಾತಿಯನ್ನು ಪಡೆದಿರುತ್ತದೆ. ಜನರಿಂದ ಮನ್ನಣೆಯನ್ನೂ ಸ್ವೀಕರಿಸಿದೆ. ದೇಶ ವಿದೇಶಗಳ ಪ್ರಖ್ಯಾತರು ಕೂಡ ಈ ಹೆಸರು ಪಡೆದಿರುವ ವ್ಯಕ್ತಿಯನ್ನು ತಿಳಿಯುವಷ್ಟರ ಮಟ್ಟಕ್ಕೆ ಇವರು ತಲುಪಿದ್ದಾರೆ. ಕನ್ನಡ ನಾಡಿನ ಕರಾವಳಿ ಪ್ರದೇಶದ ವ್ಯಕ್ತಿಯೊಬ್ಬರು ಬೆಟ್ಟದಷ್ಟು ಎತ್ತರಕ್ಕೆ ಬೆಳೆದು ನಿಲ್ಲಲು ಕಾರಣಗಳು ಒಂದೆರಡು ಮಾತ್ರವಲ್ಲ.ಪುಟ್ಟ ಬರಹದ ಮೂಲಕ ಅವರ ಕುರಿತು ಹೃಸ್ವ ಪರಿಚಯವನ್ನು ತಿಳಿಯ ಪಡಿಸುತ್ತೇನೆ.

ದ.ಕ ಜಿಲ್ಲೆಯ ಅತಿ ದೊಡ್ಡ ತಾಲ್ಲೂಕು ಬಂಟ್ವಾಳದ ಪ್ರಖ್ಯಾತ ಗ್ರಾಮಗಳಲ್ಲಿ ಕೊಳ್ನಾಡು ಕೂಡಾ ಒಂದಾಗಿದೆ. ಕೊಳ್ನಾಡಿನ ಉತ್ತರ ಭಾಗದ ಕೊನೆಯ ಊರೇ ಕುಳಾಲು. ಅಥವಾ ಇಲ್ಲಿನ ಮುಸ್ಲಿಮರ ಕೊದಾಳ್. ಹಳ್ಳಿ ಪ್ರದೇಶವಾದ ಇಲ್ಲಿಗೆ ಕುಡ್ತಮುಗೇರು ಮತ್ತು ಸಾಲೆತ್ತೂರು ಕಡೆಯಿಂದ ಹೋಗುವ ದಾರಿಯಿದೆ. ಇಲ್ಲಿನ ನಿವಾಸಿಯಾದ ಉಮರ್ ಮತ್ತು ಮರ್ಹೂಂ ಆಯಿಷಾ ದಂಪತಿಗಳ ಎರಡನೇಯ ಮಗನಾದ ನಮ್ಮ ಇಬ್ರಾಹಿಂರವರು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ಕೆಲವೊಂದು ವರ್ಷಗಳ ಕಾಲ ಪಡೆದ ಬಳಿಕ ಪ್ರವಾಸಿ ಲೋಕಕ್ಕೆ ಕಾಲಿಟ್ಟರು. ಊರಿನಲ್ಲಿದ್ದ ಸಂದರ್ಭದಲ್ಲಿ ವಿನಯ ಮತ್ತು ಸ್ವಭಾವ ಗುಣಗಳಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾದ ಇಬ್ರಾಹಿಂರವರು, ವಿದೇಶಕ್ಕೆ ಕಾಲಿಟ್ಟ ನಂತರ ಬಿಸಿನೆಸ್ಸಿನಲ್ಲಿ ಮಗ್ನರಾದರು.
ಸಾಮಾನ್ಯವಾಗಿ ದೊಡ್ಡ ಮಟ್ಟದ ವ್ಯಾಪಾರದಲ್ಲಿ ಮುಳುಗುವ ಅಧಿಕ ಜನರು ಆರಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅಷ್ಟಕ್ಕಷ್ಟೇ. ಆದರೆ ಇಬ್ರಾಹಿಂ ಬ್ರೈಟ್ ಮಾರ್ಬಲ್ ರವರದ್ದು ಅದ್ಭುತವಾದ ಬದುಕಾಗಿದೆ. ಸಮಯಕ್ಕೆ ಸರಿಯಾಗಿ ಸಾಮೂಹಿಕ ನಮಾಜಿನಲ್ಲಿ ಪಾಲ್ಗೊಳ್ಳುವುದು, ಐಚ್ಛಿಕವಾದ ನಮಾಜುಗಳನ್ನು ನಿತ್ಯವಾಗಿಸು ವುದು, ಕುರ್ಆನ್ ಪಾರಾಯಣ… ಮುಂತಾದ ಆರಾಧನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ.

ದಿಕ್ರ್,ಸ್ವಲಾತ್,ಮೌಲಿದ್ ಮಜ್ಲಿಸಿನಲ್ಲಿ ಭಯಭಕ್ತಿ ತುಂಬಿದ ಹೃದಯ ಸಾನ್ನಿಧ್ಯವನ್ನು ಅವರಲ್ಲಿ ಕಾಣಬಹುದು. ಪುಟ್ಟ ರಜೆಯ ನಿಮಿತ್ತ ಊರಿಗೆ ಬಂದರೂ ಜಮಾಅತ್ ನಮಾಜನ್ನು ಮಿಸ್ ಮಾಡಲು ಬಯಸದಿರುವುದು ಅವರಲ್ಲಿರುವ ಧಾರ್ಮಿಕ ಪ್ರಜ್ಞೆಯನ್ನು ಎತ್ತಿ ತೋರಿಸುತ್ತದೆ. ಮರ್ಕಝ್,ಮಅ್’ದಿನ್, ಸಿರಾಜುಲ್ ಹುದಾ, ಸಅದಿಯ್ಯ, ಮುಹಿಮ್ಮಾತ್ ಸಹಿತ ಕೇರಳದ ಮತ್ತು ದಾರುಲ್ ಇರ್ಷಾದ್, ಅಲ್-ಮದೀನಾ, ದಾರುಲ್ ಅಶ್’ಅರಿಯ್ಯ, ಮರ್ಕಝುಲ್ ಹುದಾ, ಅಲ್ ಇಹ್ಸಾನ್ ಮುಂತಾದ ಕನ್ನಡ ನಾಡಿನ ಸಂಸ್ಥೆಗಳ ಗಲ್ಫ್ ಘಟಕ ಸಮಿತಿಗಳಲ್ಲಿಯೂ ತಮ್ಮ ಇರುವಿಕೆಯನ್ನು ಕಡ್ಡಾಯವಾಗಿ ತೋರ್ಪಡಿಸುತ್ತಿದ್ದಾರೆ.
ಊರಿನಲ್ಲಿರುವಾಗಲೇ ಸುನ್ನಿ ಸಂಘಟನಾ ಸ್ನೇಹಿಯಾಗಿ ಬೆಳೆದು ಬಂದ ಅವರು, ವಿದೇಶದಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್-ಕೆಸಿಎಫ್ ಇದರ ಅಬುಧಾಬಿ ಸಮಿತಿಯ ಕೋಶಾಧಿಕಾರಿಯಾಗಿಯೂ ನ್ಯಾಷನಲ್ ಸಮಿತಿಯ ಸಾಂತ್ವನ ವಿಭಾಗದ ಚೆಯರ್ಮಾನ್ ಆಗಿಯೂ ಇಂಟರ್ನ್ಯಾಶನ್ ಸಮಿತಿಯ ಸದಸ್ಯರಾಗಿಯೂ ಕಾರ್ಯಾಚರಿಸುತ್ತಿದ್ದಾರೆ.
ಸುಲ್ತಾನುಲ್ ಉಲಮಾ, ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ, ಮೌಲಾನ ಪೇರೋಡ್ ಉಸ್ತಾದ್ ರಂತಹ ನಮ್ಮೆಲ್ಲಾ ನಾಯಕರ ಆಪ್ತರಾಗಿರುವ ಇಬ್ರಾಹಿಂರವರು ಅವರಿಗೆಲ್ಲರಿಗೂ ಬ್ರೈಟ್ ಮಾರ್ಬಲ್ ರಾಗಿ ಖ್ಯಾತರಾಗಿರುವುದು ಅಭಿಮಾನರ್ಹವಾಗಿದೆ.

ಬಿಸಿನೆಸ್ಸಿನಲ್ಲಿ ಸಿಗುವ ಆದಾಯದಿಂದ ಸಂಘ-ಸಂಸ್ಥೆಗಳಲ್ಲದೇ ಊರ-ಪರವೂರ ಬಡ-ನಿರ್ಗತಿಕ ವಿಭಾಗಕ್ಕೂ ದಾನ ಮಾಡುತ್ತಿದ್ದಾರೆ. ಕುಟುಂಬದ ಬಡ ಹೆಣ್ಣು ಮಕ್ಕಳ ಕಲ್ಯಾಣ ಹಾಗೂ ಮನೆ ನಿರ್ಮಾಣ ಸಂದರ್ಭದಲ್ಲಿಯೂ ಇವರು ಎಲ್ಲರಿಗೂ ಆಶ್ರಯಿತರಾಗಿರುವವರು.
ಪರಿಚಯವಿದ್ದವರಿಗೂ ಇಲ್ಲದವರಿಗೂ ಇವರು ಉಪಕಾರ ಮಾಡುತ್ತಾರೆ. ಪತ್ರಿಕೆಯಲ್ಲಿ ಹೆಸರು ಪ್ರಕಟಗೊಳ್ಳುವುದನ್ನು ಮತ್ತು ಜನರಲ್ಲಿ ಹೇಳುವುದನ್ನು ಇಷ್ಟ ಪಡದ ಇವರು, ಸಾಮಾನ್ಯವಾಗಿ ಬಹುತೇಕ ಧನಿಕರಲ್ಲಿ ಕಾಣದ ಉತ್ತಮ ಗುಣಗಳನ್ನು ಇವರು ಪಡೆದಿರುವರು. ಸಂಘ-ಸಂಸ್ಥೆಗಳ ಕನೆಕ್ಷನ್ಗಾಗಿ ಅಬೂಧಾಬಿಗೆ ತೆರಳುವವರ ಮೊದಲ ಗುರಿಯು ಬಹುಮಾನ್ಯರಾದ ಇಬ್ರಾಹಿಂರವರಾಗಿರುತ್ತಾರೆ.
ಊರಿಗೆ ಬಂದಿರುವುದನ್ನು ತಿಳಿದರೆ ಅವರಿಂದ ಸಹಾಯ ಪಡೆಯಲು ಜನರು ಬೆಳ್ಳಂ ಬೆಳಗ್ಗೆಯೇ ಅವರ ಮನೆಯ ಕಡೆಗೆ ಬಂದು ಬಿಡುತ್ತಾರೆ. ನಿರ್ಮಾಣವಾಗುತ್ತಿರುವ ಮಸೀದಿ,ಮದ್ರಸ,ಸಂಸ್ಥೆಗಳ ಹೆಚ್ಚಿನವುಗಳಲ್ಲಿ ಇವರ ಸಹಾಯದ ಒಂದು ತುಣುಕು ಇದ್ದೆ ಇರಬಹುದು.
ಪತ್ನಿ ಮತ್ತು ಮೂರು ಗಂಡು ಮತ್ತು ಒಂದು ಹೆಣ್ಣು ಮಕ್ಕಳ ಫ್ಯಾಮಿಲಿಯೊಂದಿಗೆ ಅಬುಧಾಬಿಯಲ್ಲಿ ನೆಲೆಸುತ್ತಿರುವ ಇವರಿಗೆ ವಿಟ್ಲ ಸಮೀಪದ ಗಾಂಧಿನಗರದಲ್ಲಿ ಮನೆ ನಿರ್ಮಾಣವು ಆರಂಭಗೊಂಡಿದೆ. ಅಂದಾಜು ರಬೀಉಲ್ ಅವ್ವಲ್ ತಿಂಗಳಿಗೆ ನಡೆಯುವ ಗೃಹ ಪ್ರವೇಶವನ್ನು ಸುಲ್ತಾನುಲ್ ಉಲಮಾ ಹಾಗೂ ಸಯ್ಯಿದ್ ಖಲೀಲ್ ತಂಙಳ್ ಸಹಿತ ಮಹಾತ್ಮರ ಪುಣ್ಯ ಹಸ್ತದಿಂದಲೇ ನಡೆಸಬೇಕೆಂಬ ಅವರ ಹಂಬಲವನ್ನು ಅಲ್ಲಾಹು ಯಾವುದೇ ತೊಡಕುಗಳಿಲ್ಲದೇ ನೆರವೇರಿಸಿ ಕೊಡಲಿ. ಅವರ ಬಿಸಿನೆಸ್ ಇನ್ನಷ್ಟು ಅಭಿವೃದ್ಧಿಯ ಎತ್ತರಕ್ಕೆರಲಿ. ಅವರಿಗೂ ಕುಟುಂಬಕ್ಕೂ ಆರೋಗ್ಯಪೂರ್ಣ ದೀರ್ಘಾಯುಷ್ಯ ಲಭಿಸಲಿ. ಮರಣ ಹೊಂದಿದ ಅವರ ತಾಯಿಯ ಪರಲೋಕ ಜೀವನವು ಸುಖಕರವಾಗಲಿ ಎಂದು ಮನದಾಳದಿಂದ ಪ್ರಾರ್ಥಿಸೋಣ.!

error: Content is protected !! Not allowed copy content from janadhvani.com