ಅಬುಧಾಬಿ: ಯುಎಇಯಲ್ಲಿ ಅಧಿಕಾರಿಗಳು ಮತ್ತೆ ಸಾಮೂಹಿಕ ಕ್ಷಮಾದಾನವನ್ನು ಸಡಿಲಿಸಿದ್ದಾರೆ. ಔಟ್ ಪಾಸ್ ಪಡೆದ 14 ದಿನಗಳೊಳಗೆ ದೇಶ ತೊರೆಯಬೇಕೆಂಬ ಸೂಚನೆಯಲ್ಲಾಗಿದೆ ಸಡಿಲಿಕೆ. ಸಾಮೂಹಿಕ ಕ್ಷಮಾದಾನ ಅವಧಿ ಮುಗಿಯುವ ಮೊದಲು ದೇಶವನ್ನು ತೊರೆದರೆ ಸಾಕು ಎಂಬುದಾಗಿದೆ ಹೊಸ ಸೂಚನೆ. ಅಷ್ಟರಲ್ಲಿ ಕೆಲಸ ಸಿಕ್ಕರೆ ದಾಖಲೆಗಳನ್ನು ಸರಿಪಡಿಸಿಕೊಂಡು ದೇಶದಲ್ಲೇ ಉಳಿಯಬಹುದಾಗಿದೆ.
ಯುಎಇಯಲ್ಲಿ ಅಕ್ರಮವಾಗಿ ನೆಲೆಸಿರುವವರಿಗೆ ಸೆಪ್ಟೆಂಬರ್ 1ರಿಂದ ಅಕ್ಟೋಬರ್ 31 ರವರೆಗೆ ಎರಡು ತಿಂಗಳ ಅವಧಿಗೆ ಕ್ಷಮಾದಾನವನ್ನು ಘೋಷಿಸಲಾಗಿದೆ. ಈ ಅವಧಿಯಲ್ಲಿ ಎಲ್ಲಾ ರೀತಿಯ ವೀಸಾ ಉಲ್ಲಂಘಿಸುವವರಿಗೆ ವಿನಾಯಿತಿ ನೀಡಲಾಗುತ್ತದೆ.