janadhvani

Kannada Online News Paper

ಪ್ರವಾದಿ ಜನ್ಮ ದಿನಾಚರಣೆ: ಯುಎಇಯಲ್ಲಿ ಸೆ.15 ರಂದು ರಜೆ ಘೋಷಣೆ

ಗಲ್ಫ್ ಸಹಿತವಿರುವ ದೇಶಗಳಲ್ಲಿ ರಬೀಉಲ್ ಅವ್ವಲ್ 12 ರಂದು ಪ್ರವಾದಿ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಅಬುಧಾಬಿ: ಯುಎಇಯಲ್ಲಿ ಪ್ರವಾದಿ ಜನ್ಮ ದಿನದ ಅಂಗವಾಗಿ ರಜೆ ಘೋಷಿಸಲಾಗಿದೆ. ವೇತನ ಸಹಿತ ರಜೆ ಲಭಿಸುವುದಾಗಿ ಫೆಡರಲ್ ಅಥಾರಿಟಿ ಫಾರ್ ಗವರ್ನಮೆಂಟ್ ಹ್ಯೂಮನ್ ರಿಸೋರ್ಸಸ್ ಶನಿವಾರ ಈ ಸಂಬಂಧ ಸುತ್ತೋಲೆ ಹೊರಡಿಸಿದೆ.

ಸೆಪ್ಟೆಂಬರ್ 15 ಭಾನುವಾರ ಫೆಡರಲ್ ಸರ್ಕಾರಿ ನೌಕರರಿಗೆ ರಜೆ ಎಂದು ಘೋಷಿಸಲಾಗಿದೆ. ಖಾಸಗಿ ವಲಯಕ್ಕೂ ಅದೇ ದಿನ ರಜೆ ಘೋಷಣೆಯಾಗುವ ನಿರೀಕ್ಷೆಯಿದೆ.

ಗಲ್ಫ್ ಸಹಿತವಿರುವ ದೇಶಗಳಲ್ಲಿ ರಬೀಉಲ್ ಅವ್ವಲ್ 12 ರಂದು ಪ್ರವಾದಿ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದು ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೂರನೇ ತಿಂಗಳಾಗಿದೆ.