janadhvani

Kannada Online News Paper

ಹೊಳಗುಂದ: ‘ಫುರ್ಕಾನ್ -24’ ವಾರ್ಷಿಕ ಖತ್ಮುಲ್ ಖುರಾನ್ ಮಜ್ಲಿಸ್ ಕಾರ್ಯಕ್ರಮ

ಹೊಳಗುಂದ : ಅಹೆಕ್ ಫೌಂಡೇಶನ್ ಆಂಧ್ರ ಪ್ರದೇಶ ಹಾಗೂ ನೂರಾನಿಯ ಜಾಮಿಯಾ ಮಸೀದಿ ಹೊಳಗುಂದ ಜಂಟಿ ಆಶ್ರಯದಲ್ಲಿ ನಡೆಸಿದ *ಫುರ್ಕಾನ್ – 24* ವಾರ್ಷಿಕ ಖತ್ಮುಲ್ ಖುರಾನ್ ಮಜ್ಲಿಸ್ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ರಿವ ಇಂಗ್ಲಿಷ್ ಮೀಡಿಯಂ ಶಾಲಾ ಮೈದಾನದಲ್ಲಿ ನಡೆಯಿತು.

ಅಹೆಕ್ ಫೌಂಡೇಶನ್ ಮ್ಯಾನೇಜಿಂಗ್ ಡೈರೆಕ್ಟರ್ ಮೌಲಾನ ಶಂಸುದ್ಧೀನ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಸೀದಿ ಆಡಳಿತ ಸಮಿತಿಯ ಪ್ರಮುಖರಾದಂತ ಸಾಯಿಬೇಶ್, ಹುಸೈನ್ ಪೀರ್, ದಾದವಲಿ, ಸಾಬ್’ಜಾನ್, ಬದೆ ಸಾಬ್, ರಹ್ಮಾನ್ ಹಾಗೂ ಮದರಸ ಉಪಾಧ್ಯಾಯರು ಉಪಸ್ಥಿತಿ ವಹಿಸಿದ್ದರು. ಮದರಸ ಸಹಾಯಿಗಳ ಹೆಸರಲ್ಲಿ 25 ಖುರಾನ್ ಖಾನಿ, ಒಂದು ಲಕ್ಷ ತಹ್ಲೀಲ್, ಹಾಗು ಯಾಸೀನ್ ಸೂರ ಓದಿ ಬಕ್ಶಿಷ್ ಮಾಡಿ ದುಆ ಮಾಡಲಾಯಿತು.
ಹೊಳಗುಂದ, ಹತ್ತಿಬೆಳಗಲ್, ಗುಳ್ಯಂ ಮದ್ರಸದ ನೂರಾರು ಮಕ್ಕಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮವನ್ನು ಅಲ್ ಹಿದಾಯ ಹಿಫ್ಝ್ ಪ್ರಿನ್ಸಿಪಾಲ್ ಹಾಫಿಝ್ ಕಬೀರ್ ನಈಮಿ ನಿರೂಪಿಸಿ, ವಂದಿಸಿದರು.