janadhvani

Kannada Online News Paper

ಕೆಸಿಎಫ್ ಬಹರೈನ್ 78 ನೇ ಸ್ವಾತಂತ್ರ್ಯೋತ್ಸವ ಸಂಗಮ

ಮನಾಮ: “ವೈವಿಧ್ಯತೆ ನಮ್ಮ ದೇಶದ ಆತ್ಮ” ಎಂಬ ಘೋಷ ವಾಕ್ಯದೊಂದಿಗೆ ಭಾರತದ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಕಾರ್ಯಕ್ರಮವು ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಸೆಂಟ್ರಲ್ ಆಫೀಸ್ ಗುದೈಬಿಯಾದಲ್ಲಿ ನಡೆಯಿತು.

ಕೆಸಿಎಫ್ ಮನಾಮ ಸೆಕ್ಟರ್ ಅಧ್ಯಕ್ಷರಾದ ಅಹ್ಮದ್ ಉಸ್ತಾದರು ದುಆ ಗೈದರು. ದಾರುಲ್ ಹುದಾ ತಂಬಿನಮಕ್ಕಿ ಸ್ಥಾಪನೆಯ ಸಾರಥಿ ಬಹು. ಖಲೀಲ್ ಹಿಮಮಿ ಸಖಾಫಿ ಕೊಟ್ಟಮುಡಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರು ಅಧ್ಯಕ್ಷೀಯ ಭಾಷಣ ಮಾಡಿದರು.

ಕೆಸಿಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ಸ್ವಾತಂತ್ರ್ಯೋತ್ಸವದ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಅನಿವಾಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಜ್ ಕುಮಾರ್ ಹಾಗೂ ರಮೇಶ್ ರಾಮಚಂದ್ರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಕೆಸಿಎಫ್ ಗುದೈಬಿಯಾ ಸೆಕ್ಟರ್ ಉಪಾಧ್ಯಕ್ಷರಾದ ಶಿಹಾಬ್ ಉಸ್ತಾದ್ ಪರಪ್ಪ ಹಾಗೂ ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆ ಅಧ್ಯಕ್ಷರಾದ ಖಲಂದರ್ ಉಸ್ತಾದರು ಶುಭ ಹಾರೈಸಿದರು. ರಾಷ್ಟ್ರೀಯ ಸಮಿತಿ ಪಬ್ಲಿಕೇಶನ್ ವಿಂಗ್ ಕಾರ್ಯದರ್ಶಿ ತೌಫೀಖ್ ಬೆಳ್ತಂಗಡಿ ಸ್ವಾಗತಿಸಿದರು. ರಾಷ್ಟ್ರೀಯ ಸಮಿತಿ ಪಬ್ಲಿಕೇಶನ್ ವಿಂಗ್ ಅಧ್ಯಕ್ಷರಾದ ಲತೀಫ್ ಪೆರೋಲಿ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸಮಿತಿ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅಶ್ರಫ್ ರೆಂಜಾಡಿ ರಾಷ್ಟ್ರ ಗೀತೆ ಹಾಡಿದರು. ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಸೂಫಿ ಪೈಂಬಚ್ಚಾಲ್ ಧನ್ಯವಾದ ಸಮರ್ಪಿಸಿದರು.

✍️ ಎಂ.ಎ. ವೇಣೂರು.

error: Content is protected !! Not allowed copy content from janadhvani.com