janadhvani

Kannada Online News Paper

SჄS ಉಜಿರೆ ಸರ್ಕಲ್: ಮರ್ಹೂಂ ಖುರ್ರತುಸ್ಸಾದಾತ್ ತಂಙಳ್ ಅನುಸ್ಮರಣೆ

SჄS ಉಜಿರೆ ಸರ್ಕಲ್ ವತಿಯಿಂದ ಮರ್ಹೂಂ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅನುಸ್ಮರಣೆ ದಿನಾಂಕ 2024 ಆಗಸ್ಟ್ 9 ರಾತ್ರಿ ಮಲ್ಜ‌ಅ್ ವಿದ್ಯಾಸಂಸ್ಥೆಯಲ್ಲಿ ಬಹು! ಅಸ್ಸಯ್ಯಿದ್ ಮಲ್ಜ‌ಅ್ ತಂಙಳರ ಸುಪುತ್ರ ಬಹು! ಅಸ್ಸಯ್ಯಿದ್ ಪಹೀಂ ಅಲ್ ಹಾದಿ ತಂಙಳ್‌ರವರ ನೇತೃತ್ವದಲ್ಲಿ ನಡೆಯಿತು.

ಪ್ರಸ್ತುತ ಕಾರ್ಯಕ್ರಮ SჄS ಉಜಿರೆ ಸರ್ಕಲ್ ಅಧ್ಯಕ್ಷರಾದ ಸಲೀಂ ಕನ್ಯಾಡಿ ಅಧ್ಯಕ್ಷತೆಯಲ್ಲಿ ನೆಡೆಯಿತು ಉದ್ಘಾಟನೆಯನ್ನು SჄS ಬೆಳ್ತಂಗಡಿ ಝೋನ್ ಅಧ್ಯಕ್ಷರಾದ ಎಂ. ಎ ಕಾಸಿಂ ಮುಸ್ಲಿಯಾರ್ ನೇರವೇರಿಸಿದರು. ಮಲ್ಜ‌ಅ್ ಮುದರ್ರಿಸ್ ಮುಸ್ತಾಖ್ ಅಹ್ಸನಿ ತಹ್ಲೀಲ್ ಹಾಗೂ ಕುರ್‌ಆನ್ ಪಾರಾಯಣಕ್ಕೆ ನೇತೃತ್ವ ನೀಡಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಕೆಸಿಎಫ್ ನಾಯಕರಾದ ಇಸ್ಮಾಯಿಲ್ ಸಖಾಫಿ ಬೆಳಾಲು SSF ರಾಜ್ಯ ಕಾರ್ಯದರ್ಶಿ ಶರೀಫ್ ಬೆರ್ಕಳ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಮಾಚಾರು, ಎಸ್ ವೈ ಎಸ್ ಉಜಿರೆ ಸರ್ಕಲ್ ಪ್ರ.ಕಾರ್ಯದರ್ಶಿ ಹಾತಿಬ್ ಉಜಿರೆ, ಕೋಶಾಧಿಕಾರಿ ಮುಹಮ್ಮದಲಿ ಅತ್ತಾಜೆ, ದ‌ಅ್‌ವಾ ಕಾರ್ಯದರ್ಶಿ ಸಲೀಂ ನಿಡಿಗಲ್ ಇಸಾಬ ಕಾರ್ಯದರ್ಶಿ ಸಲೀಂ ಮಾಚಾರು, ಸಾಂತ್ವನ ಕಾರ್ಯದರ್ಶಿ ಅಶ್ರಫ್ ಉಜಿರೆ ಹಾಗೂ ಉಜಿರೆ ಸರ್ಕಲ್ ನಾಯಕರು ಹಾಜರಿದ್ದರು. ಪ್ರಸ್ತುತ ಕಾರ್ಯಕ್ರಮವನ್ನು ಖಬೀರ್ ಮಿಸ್ಬಾಹಿ ಮಾಚಾರು ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com