janadhvani

Kannada Online News Paper

ಜಾಮಿಯಾ ಕಂಜುಲ್ ಇಮಾನ್ ನಲ್ಲಿ ಸ್ಮಾರ್ಟ್ ಕ್ಲಾಸ್ ಮತ್ತು ಕಂಪ್ಯೂಟರ್ ತರಬೇತಿ ಕೇಂದ್ರದ ಉದ್ಘಾಟನೆ

ಚಿಕ್ಕಮಗಳೂರು. ಸನ್ಮಾನ್ಯ ಶಾಸಕರಾದ ಶ್ರೀ ಹೆಚ್ ಡಿ ತಮ್ಮಯ್ಯ ರವರು ಜಾಮಿಯಾ ಅರೇಬಿಯ ಕಂಜೂಲ್ ಇಮಾನ್ ಮದ್ರಸದಲ್ಲಿ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರದ ಯೋಜನೆಯಾಗಿರುವ ಮದ್ರಸಾ ಪ್ಲಸ್ ಸ್ಮಾರ್ಟ್ ಕ್ಲಾಸ್ ಮತ್ತು ಕಂಪ್ಯೂಟರ್ ತರಬೇತಿ ಕೇಂದ್ರದ ಉದ್ಘಾಟನೆ ನೆರವೇರಿಸಿದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಅಲ್ ಹಾಜ್ ಮುಹಮ್ಮದ್ ಶಾಹಿದ್ ರಜ್ವಿ ರವರು ಮಾತನಾಡಿ
ಈ ಸಂಸ್ಥೆಯು ಸ್ಥಾಪನೆಗೊಂಡು ಇಂದಿಗೆ…20 ವರ್ಷಗಳು ಕಂಜುಲ್ ಇಮಾನ್ ಸಂಸ್ಥೆಯ ಅಡಿಯಲ್ಲಿ ಹಲವಾರು ಸಮಾಜ ಸೇವೆ, ಆರೋಗ್ಯ ಶಿಬಿರಗಳು, ಹಿಂದುಳಿದ ಮತ್ತು ಬಡ ನಿರ್ಗತಿಕರಿಗೆ ಆರ್ಥಿಕ ನೆರವು, ಶಿಕ್ಷಣ ವಂಚಿತರಿಗೆ ಶೈಕ್ಷಣಿಕ ನೆರವು, ಬಡ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು ಮತ್ತು ಸಾಮಗ್ರಿಗಳ ಉಚಿತವಾಗಿ ವಿತರಣೆ, ಉಚಿತ ನೇತ್ರ ಪರೀಕ್ಷೆ, ಕೊರೊನ ಸಾಂಕ್ರಾಮಿಕ ಲಾಕ್ ಡೌನ್ ಸಂದರ್ಭದಲ್ಲಿ ಸುಮಾರು 20 ಲಕ್ಷ ಮೌಲ್ಯದ 2000 ಆಹಾರ ಕಿಟ್ ಗಳ ಉಚಿತ ವಿತರಣೆ, ಸಮುದಾಯದ ಕೌಟುಂಬಿಕ ಕಲಹ ಸಂಬಂಧಿಸಿದಂತೆ ಕೌಟುಂಬಿಕ ಸಲಹಾ ಕೇಂದ್ರದ ಸ್ಥಾಪನೆ, ಜಿಲ್ಲಾ ಇಸ್ಲಾಮಿಕ್ ಲೈಬ್ರರಿ ಸ್ಥಾಪನೆ ಮಸೀದಿಗಳ ನಿರ್ಮಾಣ ಅನಾಥ, ಬಡ ವಿದ್ಯಾರ್ಥಿಗಳಿಗೆ ಉಚಿತ ಊಟ ಉಪಹಾರದೊಂದಿಗೆ ವಸತಿಗೃಹ ಸ್ಥಾಪನೆ, ಸಂಸ್ಥೆಯ ಅಧೀನದಲ್ಲಿರುವ ಮದ್ರಸದಲ್ಲಿ ಇದುವರೆಗೆ ನೂರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿರುವುದು ನಮಗೆಲ್ಲ ತ್ರಪ್ತಿ ತಂದಿದೆ ಎಂದು ತಿಳಿಸಿದರು .

ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ಮಾತನಾಡಿ ಸಂಸ್ಥೆಯಲ್ಲಿ ಇದೀಗ 2024-25 ರ ಶೈಕ್ಷಣಿಕ ವರ್ಷದಿಂದ ರಾಜ್ಯ ಅಲ್ಪಸಂಖ್ಯಾತ ಇಲಾಖೆ ಕರ್ನಾಟಕ ಸರ್ಕಾರ ಹಾಗು ಶಾಹೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಬೀದರ್ ಸಹಯೋಗದೊಂದಿಗೆ N.I.O.S ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್ ಹಾಗು A.I.C.U ಅಡಿಯಲ್ಲಿ ಮದ್ರಸಾ ಪ್ಲಸ್ ಹಾಗು 10 ನೆ ತರಗತಿಯವರೆಗೆ ಸುಮಾರು 50 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಸೌಲಭ್ಯವನ್ನು ಒದಗಿಸಲಾಗಿದೆ ಇದರೊಂದಿಗೆ. ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ವಿದ್ಯಾಭ್ಯಾಸದ ಸೌಲಭ್ಯವನ್ನು ಕಲ್ಪಿಸಲಾಗಿದೆ ಹಾಗು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಶಿಕ್ಷಣವನ್ನು ಉಚಿತವಾಗಿ ನೀಡಲು ಸಂಸ್ಥೆಯ ವತಿಯಿಂದ 4 ಎಕರೆ ಜಾಗದಲ್ಲಿ ಶಾಲೆ ಮತ್ತು ಕಾಲೇಜು ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಲಾಗುವುದು ಎಂದು ತಿಳಿಸಿದರು .

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಂಜೇಗೌಡರು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀ ಬಲಿರಾಮ್, ನಗರಸಭಾ ಅಧ್ಯಕ್ಷರಾದ ಮುನೀರ್ ಅಹಮದ್, ಖಲಂದರ್ ಮೋನು, ಹಾಗು ಇನ್ನಿತರೆ ಧಾರ್ಮಿಕ ಮುಖಂಡರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಂಸ್ಥೆಯ ಸಹ ಕಾರ್ಯದರ್ಶಿ ಆರಿಫ್ ಅಲಿ ಖಾನ್, ಸದಸ್ಯರಾದ ಫಾರೂಕ್ ಅಹಮದ್, ಔರಂಗ್ ಅತೀಕ್, ಮನ್ಸೂರ್ ಅಹಮದ್, ಅಖ್ತರ್ ಹುಸೈನ್, ವಾಸೀಮ್ ಅಹಮದ್, ಉಪಸ್ಥಿತರಿದ್ದರು, ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಅಲ್ ಹಾಜ್ ಫೈರೋಜ್ ಅಹಮದ್ ರಜ್ಬಿ ರವರು ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com