janadhvani

Kannada Online News Paper

ಕೂರತ್ ತಂಙಲ್ ರವರ ಅಗಲುವಿಕೆ ತುಂಬಲಾರದ ನಷ್ಟ: ಅಶ್ಅರಿಯ್ಯ ಸಖಾಫಿ

ಪುತ್ತೂರು: ಮಹಾತ್ಮರ ಮರಣವು ಲೋಕದ ಮರಣವಾಗಿದ್ದು, ಉಳ್ಳಾಲ ಸಹಿತ ಜಿಲ್ಲೆಯ ನೂರಾರು ಮೊಹಲ್ಲಾಗಳ ಖಾಝಿಗಳಾಗಿದ್ದ ಅಸ್ಸೆಯ್ಯಿದ್ ಫಝಲ್ ಕೋಯಮ್ಮ ತಂಙಲ್ ಕೂರತ್ ರವರ ಅಗಲುವಿಕೆಯು ತುಂಬಲಾರದ ನಷ್ಟವಾಗಿದೆ ಎಂದು ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ರಾಜ್ಯಾಧ್ಯಕ್ಷರಾದ ಮುಹಮ್ಮದ್ ಅಲಿ ಸಖಾಫಿ ಅಶ್’ಅರಿಯ್ಯ ಅಭಿಪ್ರಾಯ ಪಟ್ಟರು.

ಅವರು ಸಂಪ್ಯ ಯೂನಿಟ್ ಕೆ.ಎಂ.ಜೆ, ಎಸ್.ವೈ.ಎಸ್, ಎಸ್ಸೆಸ್ಸೆಫ್ ನ ಜಂಟಿ ಆಶ್ರಯದಲ್ಲಿ ನಡೆದ ಕೂರತ್ ತಂಙಲ್ ಅನುಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತನ್ನನ್ನು ಅರಸಿ ಬಂದ ಸಾವಿರಾರು ನೊಂದ ಮನಸ್ಸುಗಳಿಗೆ ಪವಿತ್ರ ಖುರ್‌ಆನ್ ನಿಂದ ಆಶ್ರಯ ನೀಡುತ್ತಿದ್ದ ಆಧ್ಯಾತ್ಮಿಕ ದೊರೆ ಮರ್ಹೂಂ ಖುರ್ರತ್ತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರ ಅಗಲುವಿಕೆಯು ಇಡೀ ಜಗತ್ತಿಗೆ ಸಹಿಸಲಾಗದ ಕಹಿಸತ್ಯವಾಗಿದೆ ಎಂದು ಅವರು ಹೇಳಿದರು.

ಆರ್ಯಾಪು ಸೊಸೈಟಿ ಸಭಾಂಗಣದಲ್ಲಿ ನಡೆದ ಅನುಸ್ಮರಣಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕೆ.ಎಂ.ಜೆ. ಸಂಪ್ಯ ಯೂನಿಟ್ ಅಧ್ಯಕ್ಷರಾದ ಇಬ್ರಾಹಿಂ ವಾಗ್ಲೆ ವಹಿಸಿದರು. ಹಿರಿಯ ವಿದ್ವಾಂಸ ಅಬುಲ್ ಬುಶ್ರಾ ಬಿ.ಕೆ. ಅಬ್ದುರ್ರಹ್ಮಾನ್ ಫೈಝಿ ಪ್ರಾರ್ಥನೆಗೆ ನೇತೃತ್ವ ನೀಡಿದರು. ಸುನ್ನೀ ಜಂ-ಇಯ್ಯತುಲ್ ಉಲಮಾ ಜಿಲ್ಲಾ ಸಾರಥಿ ಬಿ.ಕೆ. ಮುಹಮ್ಮದ್ ಅಲಿ ಫೈಝಿ ಬಾಳೆಪುಣಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು.

ಸಭಾ ಕಾರ್ಯಕ್ರಮದ ಮುಂಚೆ ನಡೆದ ಮೌಲಿದ್ ಹಾಗೂ ಬುರ್ದಾ ಮಜ್ಲಿಸಿಗೆ ಊರಿನ ಉಲಮಾಗಳು ನೇತೃತ್ವ ನೀಡಿದರು. ದಾರುಲ್ ಇರ್ಷಾದ್ ಕೆ.ಜಿ.ಎನ್. ವಿದ್ಯಾರ್ಥಿಗಳು ಬುರ್ದಾ ಆಲಾಪನೆ ಹಾಗೂ ಅನುಸ್ಮರಣಾ ಹಾಡು ನಡೆಸಿ ಕೊಟ್ಟರು.

ವೇದಿಕೆಯಲ್ಲಿ ಸ್ವಾಗತ ಸಮಿತಿ ಚಯರ್’ಮ್ಯಾನ್ ಮೂಸಾ ಮದನಿ, ಕೆ.ಸಿ.ಎಫ್
ಬಹರೈನ್ ಪ್ರ.ಕಾರ್ಯದರ್ಶಿ ಹಾರಿಸ್ ಸಂಪ್ಯ , ವಿಟ್ಲ ಕೆ.ಎಂ.ಜೆ. ನಾಯಕರಾದ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು, ಎಸ್ಸೆಸ್ಸೆಫ್ ಯೂನಿಟ್ ಅಧ್ಯಕ್ಷರಾದ ಕಾಮಿಲ್ ಮದನಿ, ಸಂಟ್ಯಾರು ಜಮಾಅತ್ ಅಧ್ಯಕ್ಷರಾದ ಫಾರೂಕ್ ಸಂಟ್ಯಾರ್, ಪ್ರ.ಕಾರ್ಯದರ್ಶಿ ಹಮೀದ್ ಸಂಟ್ಯಾರು, ಉದ್ಯಮಿ ಅಶ್ರಫ್ ಸಂಪ್ಯ, ಸಂಪ್ಯ ಜಮಾಅತ್ ಕೋಶಾಧಿಕಾರಿ ಇಬ್ರಾಹಿಂ ಹಾಜಿ ಇಡಬೆಟ್ಟು, ಆರ್ಯಾಪು ಪಂಚಾಯತ್ ಮಾಜಿ ಸದಸ್ಯರಾದ ಜಬ್ಬಾರ್ ಸಂಪ್ಯ, ಕೆ.ಎಂ.ಜೆ ಸಂಪ್ಯ ಪ್ರ.ಕಾರ್ಯದರ್ಶಿ ರಝಾಕ್ ವಾಗ್ಳೆ, ಎಸ್.ವೈ.ಎಸ್. ಸಂಪ್ಯ ಯೂನಿಟ್ ನಾಯಕರಾದ ಸಿ.ಎಂ. ಅಬ್ದುಲ್ಲಾ ಮುಸ್ಲಿಯಾರ್, ಅಶ್ರಫ್ ಕಲ್ಲರ್ಪೆ, ಅಝೀಝ್ ಕಲ್ಲರ್ಪೆ, ಶರೀಫ್ ಸಂಪ್ಯ, ಬಿ.ಕೆ.ಅಶ್ರಫ್ ಅಲಿ ಸಂಪ್ಯ, ಲತೀಫ್ ಮಜಲ್ ಎಸ್ಸೆಸ್ಸೆಫ್ ಯೂನಿಟ್ ಕಾರ್ಯದರ್ಶಿ ಹಮೀದ್ ಅಮ್ಮಿ ವಾಗ್ಳೆ, ಕೋಶಾಧಿಕಾರಿ ಝುಬೈರ್ ಕಲ್ಲರ್ಪೆ, ಬಿ.ಕೆ. ನೌಫಲ್ ಅಲಿ, ಮುಸ್ತಫ ವಾಗ್ಲೆ, ಶಮ್ಮಾಸ್ ಸಂಪ್ಯ, ಸಹದ್ ಕಲ್ಲರ್ಪೆ ಮುಂತಾದವರು ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ಜನರಲ್ ಕನ್ವೀನರ್ ಅಬ್ದುರ್ರಶೀದ್ ಮದನಿ ಸ್ವಾಗತಿಸಿ, ಎಸ್.ವೈ.ಎಸ್. ಯೂನಿಟ್ ಅಧ್ಯಕ್ಷರಾದ ಕೊಂಬಾಳಿ ಕೆ.ಎಂ.ಎಚ್ ಝುಹುರಿ ವಂದಿಸಿದರು.

error: Content is protected !! Not allowed copy content from janadhvani.com