janadhvani

Kannada Online News Paper

ಬಹ್ರೈನ್ ನಲ್ಲಿ ಮಿಂಚುತ್ತಿರುವ ಹಾಫಿಳ್ ದರ್ವೇಶ್: ಮಲ್ಲೂರು ಅಸಾಸಿನ ಅಭಿನಂದನೆ

ಮಲ್ಲೂರು:ಇತ್ತೀಚೆಗೆ ಬಹ್ರೈನ್ ಸರಕಾರ ಸಂಘಟಿಸಿದ ಖುರ್ಆನ್ ಹಿಫ್ಳ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನಲಂಕರಿಸಿದ ಕನ್ನಡ ಕುವರ ದರ್ವೇಶ್ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತುಂಗಕ್ಕೇರಿ ಇಡೀ ಭಾರತಕ್ಕೆ ಕೀರ್ತಿಯನ್ನು ತರಲಿ ಎಂದು ಅಸಾಸ್ ಎಜ್ಯುಕೇಶನಲ್ ಸೆಂಟರ್ ಇದರ ಸಂಸ್ಥಾಪಕರೂ, ಮಜ್ಲಿಸು ಸ್ಸಅದೀನ್ ಕರ್ನಾಟಕ ಇದರ ಅಧ್ಯಕ್ಷರೂ ಆದ ಅಶ್ರಫ್ ಸಅದಿ ಮಲ್ಲೂರು ಹೇಳಿದರು.

ಅವರು ಇತ್ತೀಚೆಗೆ ಅಸಾಸ್ ಸಂಸ್ಥೆಯಲ್ಲಿ ನಡೆದ ಅಹ್ಲ್ ಬದರ್ ಸಂಗಮದಲ್ಲಿ ಮುಖ್ಯಪ್ರಭಾಷಣಗೈಯ್ಯುತ್ತಾ ಮಾತಾಡುತ್ತಿದ್ದರು.

ಬಹ್ರೈನ್ ಸರಕಾರದ ಅಧೀನದಲ್ಲಿ ಇತ್ತೀಚೆಗೆ ಬಹ್ರೈನ್ ಗರಿಗಾಗಿ ನಡೆಸಿದ ಖುರ್’ಆನ್ ಸ್ಪರ್ಧೆಯಲ್ಲಿ ಸ್ಥಳೀಯ ಎಲ್ಲ ಸ್ಪರ್ಧಾಳುಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನವನ್ನಲಂಕರಿಸಿದ ಕನ್ನಡ ನಾಡಿನ ಹೆಮ್ಮೆಯ ಪುತ್ರ ದರ್ವೇಶ್ ಮುಹಮ್ಮದಲಿ ಇಡೀ ಭಾರತಕ್ಕೆ ಕೀರ್ತಿ ತಂದಿದ್ದಾರೆ.

2009 ರಿಂದ ಐಸಿಎಫ್ ಪ್ರತಿಭೋತ್ಸವದಲ್ಲಿ ಸೋಲರಿಯದ ಸರದಾರನಾಗಿ ಮಿಂಚಿದ ದರ್ವೇಶ್ “ಸಲ್ಮಾಬಾದ್ ಸೆಂಟ್ರಲ್ ಐಸಿಎಫ್” ಬಹ್ರೈನ್ ನ್ಯಾಷನಲ್ ಪ್ರತಿಭೋತ್ಸವದಲ್ಲಿ ಎರಡುಬಾರಿ ಚಾಂಪಿಯನ್ ಶಿಪ್ ಪಟ್ಟವನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕೊಡಗು ಸ್ವದೇಶಿ ಅಲ್ ಹಾಜ್ ಮುಹಮ್ಮದಲಿ ಮುಸ್ಲಿಯಾರ್ ಹಾಗೂ ಸಫಿಯಾ ಹಜ್ಜುಮ್ಮ ದಂಪತಿಗಳ ಏಳು ಮಕ್ಕಳಲ್ಲಿ ಆರನೇಯ ಪುತ್ರನಾಗಿ 2002 ರ ಆಸುಪಾಸಿನಲ್ಲಿ ಬಹ್ರೈನ್’ನಲ್ಲಿ ದರ್ವೇಶ್ ಜನಿಸಿದ್ದರು.

ಪ್ರಸ್ತುತ ಮುಹಮ್ಮದಲಿ ಮುಸ್ಲಿಯಾರ್ ಕೆಸಿಎಫ್ ನಾಯಕರೂ, ಬಹ್ರೈನ್ ಝೋನ್ ಸಾರಥಿಯೂ, ಅಸಾಸ್ ಸಂಸ್ಥೆಯ ಕಟ್ಟಾ ಅಭಿಮಾನಿಯೂ ಆಗಿದ್ದರು.

ಸಲ್ಮಾಬಾದ್ ಐಸಿಎಫ್ ಅಧೀನದಲ್ಲಿ ಕಾರ್ಯಾಚರಿಸುವ ಮಜ್’ಮಉ ತಅ್’ಲೀಮುಲ್ ಖುರ್’ಆನ್ ಮದ್ರಸದಲ್ಲಿ ಕಲಿಯಲಾರಂಭಿಸಿದ ದರ್ವೇಶ್ ತನ್ನ ಆರನೇ ವರ್ಷ ಪ್ರಾಯದಿಂದಲೇ ವಿವಿಧ ಸ್ಪರ್ಧಾ ವೇದಿಕೆಗಳಲ್ಲಿ ಮಿಂಚಲಾರಂಭಿಸಿದರು.

2008 ರಲ್ಲೇ ಸ್ಪರ್ಧಾಕಣಕ್ಕೆ ಲಗ್ಗೆಯಿಟ್ಟ ದರ್ವೇಶ್ ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಮುಂತಾದ ಎಲ್ಲಾ ವಿಭಾಗದಲ್ಲೂ ಪ್ರಥಮ ಸ್ಥಾನವನ್ನಲಂಕರಿಸುತ್ತಾ ಬಂದು 2018 ರ ಘಟ್ಟದಲ್ಲಿ ಇಡೀ ವಿಶ್ವವನ್ನೇ ಬೆರಗುಗೊಳಿಸುವಂತೆ ನೂರಾರು ಅರಬಿ ಸ್ಪರ್ಧಾಳುಗಳನ್ನೇ ಹಿಂದಿಕ್ಕಿ ಪ್ರಥಮ ಸ್ಥಾನವನ್ನಲಂಕರಿಸುವ ಮೂಲಕ ಕರ್ನಾಟಕದ ಘನತೆಯನ್ನು ಎತ್ತಿ ಹಿಡಿದಿದ್ದಾರೆ.

ಹಾಡಿನ ಮೂಲಕ ರಂಗಪ್ರವೇಶಿಸಿದ ದರ್ವೇಶ್ ಕ್ರಮೇಣ ಖುರ್’ಆನ್ ಕಂಠ ಪಾಠ-ಪಾರಾಯಣದತ್ತ ತನ್ನ ಪ್ರತಿಭೆಯನ್ನು ವಿಸ್ತರಿಸಿಕೊಂಡರು.

ತನ್ನ ಪ್ರತಿಭೆಯನ್ನು ಕೇವಲ ಬಹ್ರೈನ್ ಗೆ ಸೀಮಿತಗೊಳಿಸದೆ ದುಬಾಯ್,ಕತ್ತರ್, ಒಮಾನ್ ಮುಂತಾದೆಡೆ ತನ್ನ ಅಪಾರ ಪ್ರತಿಭೆಯನ್ನು ಪ್ರದರ್ಶಿಸಿ ಬೇಷ್ ಎನಿಸಿಕೊಂಡ.

ಈ ಸುಪ್ರಸಿದ್ದ ಹಾಫಿಳ್ ನಿಗೆ ಮಲ್ಲೂರು ಅಸಾಸ್ ಎಜುಕೇಶನಲ್ ಸೆಂಟರ್ ಸಂಸ್ಥೆಯು ವಿಪ್ಲವಾ ಅಭಿನಂದನೆಗಳನ್ನು ಸಲ್ಲಿಸುತ್ತಾ.. ದರ್ವೇಶ್ ಇನ್ನಷ್ಟು ಉನ್ನತಿಗೇರಿ ಇಡೀ ಭಾರತಕ್ಕೇ ಕೀರ್ತಿಯನ್ನು ತರಲೆಂದು ಹಾರೈಸುತ್ತಿದೆ.

error: Content is protected !! Not allowed copy content from janadhvani.com